News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬೆಂಗಳೂರು: ಈದ್‌ ಮೆರವಣಿಗೆ ವೇಳೆ ಖಡ್ಗ ಪ್ರದರ್ಶಿಸಿದ 18 ಮಂದಿ ಬಂಧನ

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಮಿಲಾಬ್-ಉನ್-ನಬಿ ಆಚರಣೆ ವೇಳೆ ಕತ್ತಿ, ಮಚ್ಚು ಝಳಪಿಸುತ್ತಿದ್ದ ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದ 13 ಅಪ್ರಾಪ್ತ ಬಾಲಕರು ಸೇರಿದಂತೆ 18 ಮಂದಿಯನ್ನು ಬೆಂಗಳೂರಿನಲ್ಲಿ ಬಂಧಿಸಲಾಗಿದೆ.

ಸಂಭ್ರಮಾಚರಣೆಯ ವೀಡಿಯೊ ಕ್ಲಿಪ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆದ ನಂತರ ಪೊಲೀಸರು ಕಾರ್ಯಾಚರಣೆಗೆ ಇಳಿದು ಬಂಧನ ಮಾಡಿದ್ದಾರೆ.

“ಅಪ್ರಾಪ್ತ ವಯಸ್ಕರು ಸೇರಿದಂತೆ ಹದಿನೆಂಟು ಜನರನ್ನು ಬಂಧಿಸಲಾಗಿದೆ. ಅವರು ಸಂಭ್ರಮಾಚರಣೆಯಲ್ಲಿ ಪಾಲ್ಗೊಂಡು ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಝಳಪಿಸಿದ್ದರು. ಅವರು ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ ಮತ್ತು ಇತ್ತೀಚಿನ ವಿವಿಧ ಘಟನೆಗಳಿಂದ ಪ್ರಭಾವಿತರಾಗಿದ್ದಾರೆಂದು ತೋರುತ್ತದೆ. ಅವರನ್ನು ಬಂಧಿಸಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗುವುದು” ಎಂದು ಪೊಲೀಸರು ಹೇಳಿದ್ದಾರೆ

 “ವಯಸ್ಕರನ್ನು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗುತ್ತದೆ, ಅಪ್ರಾಪ್ತ ವಯಸ್ಕರನ್ನು ಬಾಲಾಪರಾಧಿಗಳ ಬಂಧನಕ್ಕೆ ಸೂಚಿಸಲಾಗುತ್ತದೆ. ಅವರ ವಿರುದ್ಧ ಕಾನೂನುಬಾಹಿರ ಸಭೆ, ಸಾರ್ವಜನಿಕ ಶಾಂತಿಗೆ ಭಂಗ ಉಂಟು ಮಾಡುವ ಯತ್ನ ಮತ್ತು ಐಪಿಸಿಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಶಸ್ತ್ರಾಸ್ತ್ರ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ” ಎಂದಿದ್ದಾರೆ

ಘಟನೆಯ ವಿವರಗಳನ್ನು ಹಂಚಿಕೊಂಡ ಉಪ ಪೊಲೀಸ್ ಆಯುಕ್ತ ಪಿ ಕೃಷ್ಣಕಾಂತ್, “ಯಾವುದೇ ಕಾರ್ಯಕ್ರಮದ ಸಮಯದಲ್ಲಿ ಘಟನೆ ಸಂಭವಿಸಿಲ್ಲ, ಮೆರವಣಿಗೆಯ ನಂತರ ಕೆಲವರು ಸೋಮೇಶ್ವರನಗರದ ಒಳಭಾಗಗಳಿಗೆ ಹೋಗಿ ಸಂಗೀತಕ್ಕೆ ನೃತ್ಯ ಮಾಡುವ ವೇಳೆ ಆಯುಧಗಳನ್ನು ಝಳಪಿಸಿದ್ದಾರೆ” ಎಂದಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top