News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಬಿಲ್ಲು & ಬಾಣ ಚಿಹ್ನೆ ಬಳಸದಂತೆ ಶಿವಸೇನೆಯ ಎರಡೂ ಬಣಗಳಿಗೆ ನಿರ್ಬಂಧ

ನವದೆಹಲಿ: ಶಿವಸೇನೆಯ ‘ಬಿಲ್ಲು ಮತ್ತು ಬಾಣ’ ಚಿಹ್ನೆಯನ್ನು ಚುನಾವಣಾ ಆಯೋಗ ರದ್ದುಪಡಿಸಿದೆ ಮತ್ತು  ಹೊಸ ಚಿಹ್ನೆಯನ್ನು ಆಯ್ಕೆ ಮಾಡುವಂತೆ ಏಕನಾಥ್ ಶಿಂಧೆ ಮತ್ತು ಉದ್ಧವ್ ಠಾಕ್ರೆ ಬಣಗಳಿಗೆ ಸೂಚನೆ ನೀಡಿದೆ.

ಮುಂಬರುವ ಅಂಧೇರಿ ಪೂರ್ವ ಉಪ ಚುನಾವಣೆಯಲ್ಲಿ ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಮತ್ತು ಪ್ರಸ್ತುತ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಎರಡೂ ಗುಂಪುಗಳು ಶಿವಸೇನೆ ಎಂಬ ಪಕ್ಷದ ಹೆಸರನ್ನು ಬಳಸದಂತೆ ಚುನಾವಣಾ ಆಯೋಗವು ನಿರ್ಬಂಧಿಸಿದೆ. ವಿವಾದದ ಬಗ್ಗೆ ಅಂತಿಮ ನಿರ್ಣಯ ಆಗುವವರೆಗೆ ಈ ನಿರ್ಬಂಧ ಮುಂದುವರೆಯಲಿದೆ.

ಆಯೋಗವು ಎರಡೂ  ಗುಂಪುಗಳ ಹಕ್ಕುಗಳು ಮತ್ತು ಹಿತಾಸಕ್ತಿಗಳನ್ನು ರಕ್ಷಿಸಲು ಮಧ್ಯಂತರ ಆದೇಶವನ್ನು ಹೊರಡಿಸಿದೆ. ಶಿವಸೇನೆಯ “ಬಿಲ್ಲು ಮತ್ತು ಬಾಣ” ಚಿಹ್ನೆಯನ್ನು ಬಳಸಲು ಎರಡು ಗುಂಪುಗಳಿಗೆ ಅನುಮತಿ ನೀಡಬಾರದು ಎಂದು ಅದು ಹೇಳಿದೆ.

ಸೋಮವಾರ ಮಧ್ಯಾಹ್ನ 1 ಗಂಟೆಯೊಳಗೆ ಹೆಸರು ಮತ್ತು ಚಿಹ್ನೆಗಳನ್ನು ಒದಗಿಸುವಂತೆ ಎರಡೂ ಗುಂಪುಗಳಿಗೆ ಸೂಚಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top