News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಅ.12ರವರೆಗೆ ಮುಂದುವರೆಯಲಿದೆ ಪ್ರಧಾನಿ ಸ್ಮರಣಿಕೆಗಳ ಇ-ಹರಾಜು

ನವದೆಹಲಿ: ಪ್ರಧಾನಿಯವರಿಗೆ ದೊರೆತ ಸ್ಮರಣಿಕೆಗಳ ಇ-ಹರಾಜಿನ ನಾಲ್ಕನೇ ಆವೃತ್ತಿಯನ್ನು ಅಕ್ಟೋಬರ್ 12 ರವರೆಗೆ ವಿಸ್ತರಿಸಲಾಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಶುಕ್ರವಾರ ಘೋಷಿಸಿದ್ದಾರೆ.

ಸಂಸ್ಕೃತಿ ಸಚಿವಾಲಯದ ಟ್ವೀಟ್‌ಗೆ ಪ್ರತಿಕ್ರಿಯಿಸಿ ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, “ವರ್ಷಗಳಲ್ಲಿ ನಾನು ಪಡೆದ ಅನೇಕ ವಿಶೇಷ ಉಡುಗೊರೆಗಳಲ್ಲಿ ಇವೂ ಸೇರಿದೆ. ಜನರ ಆಶಯಗಳನ್ನು ಗೌರವಿಸಿ, ಸ್ಮರಣಿಕೆಗಳ ಹರಾಜನ್ನು ಅಕ್ಟೋಬರ್ 12 ರವರೆಗೆ ವಿಸ್ತರಿಸಲಾಗಿದೆ. ಭಾಗವಹಿಸಿ” ಎಂದಿದೆ.

ಸಂಸ್ಕೃತಿ ಸಚಿವಾಲಯವು ಈ ಹಿಂದೆ ಟ್ವೀಟ್ ಮಾಡಿ, “ಈ  ಕೇದಾರನಾಥ ದೇವಾಲಯದ ಪ್ರತಿಕೃತಿಯು ಭಾರತದ ಪ್ರಮುಖ ಯಾತ್ರಾ ಕೇಂದ್ರಗಳಲ್ಲಿ ಒಂದನ್ನು ಪ್ರತಿನಿಧಿಸುತ್ತದೆ. ನಡೆಯುತ್ತಿರುವ ಬಿಡ್‌ಗಳ ಮೂಲಕ ಈ ಅದ್ಭುತವಾದ ತುಣುಕನ್ನು ಹೊಂದಲು ನಿಮಗೆ ಅವಕಾಶವಿದೆ” ಎಂದಿದೆ.

“ಸ್ಮರಣಿಕೆಗಳನ್ನು ವೀಕ್ಷಿಸಲು 11 AM – 6 PM ವರೆಗೆ ನವದೆಹಲಿಯಲ್ಲಿರುವ ನ್ಯಾಷನಲ್ ಗ್ಯಾಲರಿ ಆಫ್ ಮಾಡರ್ನ್ ಆರ್ಟ್‌ಗೆ ಭೇಟಿ ನೀಡಿ. ಹರಾಜು ಅಕ್ಟೋಬರ್ 12, 2022 ರಂದು ಮುಕ್ತಾಯಗೊಳ್ಳುತ್ತದೆ. ಆದಾಯವನ್ನು ನಮಾಮಿ ಗಂಗೆ ಯೋಜನೆಗೆ ಬಳಸಿಕೊಳ್ಳಲಾಗುತ್ತದೆ” ಎಂದು ಸಚಿವಾಲಯ ಹೇಳಿದೆ.

ಮರದಲ್ಲಿ ರಚಿಸಿದ ಕಾಶಿ ವಿಶ್ವನಾಥ ದೇವಾಲಯದ ಪ್ರತಿಕೃತಿಯು ಪ್ರಧಾನಿ ಮೋದಿಯವರ ಸ್ಮರಣಿಕೆಗಳ ಹರಾಜಿನಲ್ಲಿ ಹೆಚ್ಚು ಬೇಡಿಕೆಯಿರುವ ವಸ್ತುವಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನ ಸೆಪ್ಟೆಂಬರ್ 17 ರಂದು ಅವರಿಗೆ ನೀಡಲಾದ ಉಡುಗೊರೆಗಳು ಮತ್ತು ಸ್ಮಾರಕಗಳ ಇ-ಹರಾಜು  ಪ್ರಾರಂಭವಾಯಿತು.

ಪ್ರಧಾನಿಯವರಿಗೆ ನೀಡಲಾದ ಒಟ್ಟು 1,200 ಉಡುಗೊರೆಗಳು ಮತ್ತು ಸ್ಮರಣಿಕೆಗಳು ಹರಾಜಿನಲ್ಲಿವೆ. ಈ 1,200 ಉಡುಗೊರೆಗಳಲ್ಲಿ ಅತ್ಯಂತ ಜನಪ್ರಿಯವಾದದ್ದು ಅಯೋಧ್ಯೆಯ ಶ್ರೀರಾಮ ಮಂದಿರ ಮತ್ತು ವಾರಣಾಸಿಯ ಕಾಶಿ-ವಿಶ್ವನಾಥ ದೇವಾಲಯದ ಪ್ರತಿಕೃತಿಗಳು ಮತ್ತು ಮಾದರಿಗಳು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top