News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

8 ವರ್ಷಗಳ ಬಳಿಕ ಕಾರ್ಯಾಚರಣೆ ಸ್ಥಗಿತಗೊಳಿಸಿದ ಮಾಮ್

ಬೆಂಗಳೂರು: ಭಾರತದ ಹೆಮ್ಮೆಯ ಬಾಹ್ಯಾಕಾಶ ಸಂಸ್ಥೆ ಎಂಟು ವರ್ಷಗಳ ಹಿಂದೆ ಮಂಗಳ ಗ್ರಹಕ್ಕೆ ಕಳುಹಿಸಿಕೊಟ್ಟಿದ್ದ ಮಾರ್ಸ್ ಆರ್ಬಿಟರಿ ಮಿಷನ್ (ಮಾಮ್) ವ್ಯೋಮ ನೌಕೆಯು ಭೂಮಿಯಿಂದ ತನ್ನ ಸಂಪರ್ಕವನ್ನು ಕಡಿದುಕೊಂಡಿದೆ.

ಇಸ್ರೋ ಮಾಮ್ ನೌಕೆಯನ್ನು ಕೇವಲ ಆರು ತಿಂಗಳ ಅವಧಿಗಾಗಿ ವಿನ್ಯಾಸಪಡಿಸಿ ಮಂಗಳ ಗ್ರಹಕ್ಕೆ ಕಳುಹಿಸಿ ಕೊಟ್ಟಿತ್ತು. ಮಂಗಳನ ಸುತ್ತ ಪ್ರದಕ್ಷಿಣೆ ಹಾಕಿ, ಮಂಗಳನ ಮೇಲ್ಮೈಯ ಮಾಹಿತಿಯನ್ನು ಕಳುಹಿಸುವ ಸಲುವಾಗಿ ಇದನ್ನು ವಿನ್ಯಾಸಪಡಿಸಲಾಗಿತ್ತು. ಆದರೆ ಬರೋಬ್ಬರಿ 8 ವರ್ಷಗಳ ಕಾಲ ಈ ನೌಕೆ ಕಾರ್ಯನಿರ್ವಹಿಸಿದೆ. ಪ್ರಸ್ತುತ ಕಾರ್ಯನಿರ್ವಹಣೆಯನ್ನು ಸ್ಥಗಿತಗೊಳಿಸಿದೆ.

ಮಂಗಳಯಾನ ನೌಕೆಯ ಇಂಧನ ಸಂಪೂರ್ಣ ಖಾಲಿಯಾಗಿದ್ದು, ಅದರ ಬ್ಯಾಟರಿ ಸುರಕ್ಷಿತ ಮಿತಿಯನ್ನು ಮೀರಿದೆ ಎಂದು ಇಸ್ರೋದ ಮೂಲಗಳು ತಿಳಿಸಿವೆ.

8 ವರ್ಷಗಳ ಅವಧಿಯವರೆಗೆ ಮಂಗಳ ಗ್ರಹದ ಬಗ್ಗೆ ಸಂಶೋಧನೆ ನಡೆಸಿರುವ ಮಂಗಳಯಾನ, ಗ್ರಹದ ಬಗ್ಗೆ ಅತ್ಯಂತ ಮಹತ್ವಪೂರ್ಣ ಮಾಹಿತಿಯನ್ನು ಭೂಮಿಗೆ ರವಾನಿಸಿದೆ.

ಸುಮಾರು 450 ಕೋಟಿ ರೂ. ವೆಚ್ಚದ ಮಾರ್ಸ್ ಆರ್ಬಿಟರ್ ಮಿಷನ್ (MOM) ಅನ್ನು 2013ರ ನವೆಂಬರ್ 5ರಂದು ಉಡಾವಣೆ ಮಾಡಲಾಗಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top