ನವದೆಹಲಿ: ಪಾಕಿಸ್ತಾನದ F-16 ಫೈಟರ್ ಫ್ಲೀಟ್ಗೆ $ 450 ಮಿಲಿಯನ್ ಬೆಂಬಲ ಮತ್ತು ನಿರ್ವಹಣಾ ಪ್ಯಾಕೇಜ್ ಅನ್ನು ಒದಗಿಸುವ ಅಮೆರಿಕಾದ ನಿರ್ಧಾರಕ್ಕೆ ವಿರುದ್ಧ ಭಾರತ ಆಕ್ಷೇಪಣೆಗಳನ್ನು ಎತ್ತಿದೆ.
ನಿನ್ನೆ ಭಾರತ-ಯುಎಸ್ ಹಿತಾಸಕ್ತಿಗಳ ಬಗ್ಗೆ ಚರ್ಚಿಸಲು ದೂರವಾಣಿ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು ಅಮೆರಿಕಾದ ರ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ಅವರೊಂದಿಗೆ ದೂರವಾಣಿ ಸಂಭಾಷಣೆ ನಡೆಸಿದ್ದು, ಈ ವೇಳೆ ಪಾಕಿಸ್ತಾನದ F-16 ಗಳ ಸಮಸ್ಯೆಯ ಬಗ್ಗೆ ವಿವರಿಸಿದ್ದಾರೆ.
“ಪಾಕಿಸ್ತಾನದ ಎಫ್ -16 ಫ್ಲೀಟ್ಗೆ ನಿರ್ವಹಣಾ ಪ್ಯಾಕೇಜ್ ಒದಗಿಸುವ ಯುಎಸ್ ನಿರ್ಧಾರದ ಬಗ್ಗೆ ನಾನು ಭಾರತದ ಕಳವಳವನ್ನು ತಿಳಿಸಿದ್ದೇನೆ” ಎಂದು ರಾಜನಾಥ್ ಸಿಂಗ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಪಾಕಿಸ್ಥಾನದ ಭಯೋತ್ಪಾದನೆ ನಿಗ್ರಹ ಸಾಮರ್ಥ್ಯವನ್ನು ಹೆಚ್ಚಿಸಲು F-16 ಬೆಂಬಲ ಪ್ಯಾಕೇಜ್ ಅನ್ನು ಒದಗಿಸುವ ಅಮೆರಿಕಾದ ನಿರ್ಧಾರದ ಉದ್ದೇಶವನ್ನು ಭಾರತ ವಿರೋಧಿಸಿದೆ.
ಭಾರತದ ವಿರುದ್ಧದ ಕಾರ್ಯಾಚರಣೆಗೆ ಪಾಕಿಸ್ತಾನವು F-16 ಸಾಮರ್ಥ್ಯವನ್ನು ಬಳಸುತ್ತದೆ ಎಂದು ಭಾರತವು ಬಲವಾಗಿ ಪ್ರತಿಪಾದಿಸಿದೆ.
ಭಯೋತ್ಪಾದನೆ ನಿಗ್ರಹಕ್ಕಾಗಿ ಇತರ ದೇಶಗಳಿಂದ ಪ್ಯಾಕೇಜ್ ಪಡೆಯುವ ಪಾಕಿಸ್ಥಾನ ಅದನ್ನು ಭಾರತ ವಿರೋಧಿ ಕೃತ್ಯಗಳಿಗೆ ಬಳಕೆ ಮಾಡುತ್ತದೆ. ಅಲ್ಲದೇ ಉಗ್ರರನ್ನು ಪೋಷಿಸಿ ನೆರೆಯ ರಾಷ್ಟ್ರಗಳಲ್ಲಿ ಅಶಾಂತಿ ಸೃಷ್ಟಿಸಲು ಪ್ರಯತ್ನಿಸುತ್ತದೆ ಎಂಬುದು ಭಾರತದ ಕಳವಳವಾಗಿದೆ.
I conveyed India’s concern at the recent US decision to provide sustenance package for Pakistan’s F-16 fleet.
Look forward to continuing dialogue with Seceratry Austin to further consolidating India-US partnership. 3/3
— Rajnath Singh (@rajnathsingh) September 14, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.