ನವದೆಹಲಿ: ಹಂಪಿಯಲ್ಲಿ ಕಂಡುಬರುವ ವೈಭವದ ವಿಜಯನಗರ ಸಾಮ್ರಾಜ್ಯದ ಅವಶೇಷಗಳು ಹೊಸ ಸಂಸತ್ತಿನ ಕಟ್ಟಡ ಸೆಂಟ್ರಲ್ ವಿಸ್ಟಾ ಮ್ಯೂಸಿಯಂನಲ್ಲಿ ಕಾಣಿಸಿಕೊಳ್ಳಲಿವೆ.
ವರದಿಗಳ ಪ್ರಕಾರ, ಹಂಪಿ ವಿಶ್ವ ಪೃಂಪರಿಕ ತಾಣದ ಸ್ಮಾರಕಗಳ 3D ಚಿತ್ರಗಳು ಮತ್ತು ಫೈಬರ್ ಪ್ರತಿಕೃತಿಗಳು ಪ್ರಸ್ತಾವಿತ ಆಧುನಿಕ ವಸ್ತುಸಂಗ್ರಹಾಲಯದ ಭಾಗವಾಗಿರುತ್ತವೆ.
ಈ ವಸ್ತುಸಂಗ್ರಹಾಲಯವು ಭಾರತದ ಇತಿಹಾಸ, ಪರಂಪರೆ, ಸಂಸ್ಕೃತಿ ಮತ್ತು ನಾಗರಿಕತೆಯನ್ನು ಪ್ರತಿನಿಧಿಸುವ ಸ್ಮಾರಕಗಳು ಮತ್ತು ಸ್ಮಾರಕಗಳ ಪ್ರತಿಕೃತಿಗಳನ್ನು ಹೊಂದಲಿದೆ. ಇದನ್ನು ನ್ಯಾಷನಲ್ ಮ್ಯೂಸಿಯಂ ಇನ್ಸ್ಟಿಟ್ಯೂಟ್ ಆಫ್ ದಿ ಹಿಸ್ಟರಿ ಆಫ್ ಆರ್ಟ್, ಕನ್ಸರ್ವೇಶನ್ & ಮ್ಯೂಸಿಯಾಲಜಿ (NMIHACM) ಅಭಿವೃದ್ಧಿಪಡಿಸುತ್ತಿದೆ.
ಮಹಾನವಮಿ ದಿಬ್ಬ, ರಾಜ ಪ್ರಾಂಗಣ, ರಾಜ ಸಭಾಂಗಣ, ಗುಪ್ತ ಮಾರ್ಗ, ಕಮಲಾಪುರ ಕೆರೆ ಮತ್ತು ತುರ್ತ ಕಾಲುವೆಯ ಪ್ರತಿಕೃತಿಗಳು ಮ್ಯೂಸಿಯಂ ಅನ್ನು ಅಲಂಕರಿಸಲಿವೆ ಎಂದು ವರದಿಯಲ್ಲಿ ತಿಳಿಸಲಾಗಿದೆ ಮತ್ತು ಚಿತ್ರಗಳು ಸ್ಮಾರಕಗಳ ಬಗ್ಗೆ ಮಾಹಿತಿಯನ್ನೂ ಹೊಂದಿರಲಿವೆ ಎನ್ನಲಾಗಿದೆ.
ಅಲ್ಲದೇ, ಹೊಸದಾಗಿ ರಚನೆಯಾದ ವಿಜಯನಗರ ಜಿಲ್ಲೆ ಹೊಸಪೇಟೆಯ ಕೇಂದ್ರ ಕಚೇರಿ ಶೀಘ್ರದಲ್ಲೇ ದೇಶದ ಅತಿ ಎತ್ತರದ ಧ್ವಜಸ್ತಂಭವನ್ನು ಹೊಂದಲಿದೆ. ಪ್ರವಾಸೋದ್ಯಮ ಸಚಿವ ಮತ್ತು ಸ್ಥಳೀಯ ಶಾಸಕ ಆನಂದ್ ಸಿಂಗ್ ಅವರ ಪ್ರಕಾರ, ಇದೀಗ ನಿರ್ಮಾಣ ಹಂತದಲ್ಲಿರುವ ಧ್ವಜಸ್ತಂಭವು 123 ಮೀಟರ್ ಎತ್ತರವಾಗಿರುತ್ತದೆ.
ಪ್ರಸ್ತುತ ಕರ್ನಾಟಕದ ಅತಿ ಎತ್ತರದ ಧ್ವಜಸ್ತಂಭವು ಬೆಳಗಾವಿಯ ಕೋಟೆಕೆರೆಯಲ್ಲಿದ್ದು, 110 ಅಡಿ ಎತ್ತರದಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.