News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಒಟ್ಟಿಗೆ ಲೋಕ ಸೇವಾ ಆಯೋಗ ಪರೀಕ್ಷೆ ಬರೆದು ರ‍್ಯಾಂಕ್ ಪಡೆದ ತಾಯಿ-ಮಗ

ತಿರುವನಂತಪುರಂ: ಕೇರಳದ ಮಲಪ್ಪುರಂನ 42 ವರ್ಷದ ತಾಯಿ ಬಿಂದು ಮತ್ತು ಅವರ 24 ವರ್ಷದ ಮಗ ವಿವೇಕ್ ಲೋಕ ಸೇವಾ ಆಯೋಗ (ಪಿಎಸ್‌ಸಿ)ದ ಪರೀಕ್ಷೆಯಲ್ಲಿ ಒಟ್ಟಿಗೆ ತೇರ್ಗಡೆಯಾಗಿ ದಾಖಲೆ ಮಾಡಿದ್ದಾರೆ.

ಬಿಂದು ತಮ್ಮ ಮಗನನ್ನು ಓದುವಂತೆ ಪ್ರೋತ್ಸಾಹಿಸುವ ಸಲುವಾಗಿ ತಾವು ಓದಲು ಆರಂಭಿಸಿದರು. ಇದು ಮುಂದೆ ಅವರ ಹವ್ಯಾಸವೇ ಆಗಿ ಇಂದು ಅವರು ಲೋಕ ಸೇವಾ ಆಯೋಗ ಪರೀಕ್ಷೆಯಲ್ಲಿ ರ‍್ಯಾಂಕ್ ಪಡೆದಿದ್ದಾರೆ.

ಬಿಂದು 92ನೇ ರ‍್ಯಾಂಕ್ ಪಡೆದರೆ, ಅವರ ಮಗ  24 ವರ್ಷದ ವಿವೇಕ್‌ 32ನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.

“ನಾವು ಒಟ್ಟಿಗೆ ಕೋಚಿಂಗ್ ಕ್ಲಾಸ್‌ಗೆ ಹೋಗುತ್ತಿದ್ದೆವು.  ನನ್ನ ತಂದೆ ನಮಗೆ ಎಲ್ಲಾ ಸೌಲಭ್ಯಗಳನ್ನು ಒದಗಿಸಿದರು. ನಮ್ಮ ಶಿಕ್ಷಕರಿಂದ ನಮಗೆ ಸಾಕಷ್ಟು ಪ್ರೇರಣೆ ಸಿಕ್ಕಿತು. ನಾವಿಬ್ಬರೂ ಒಟ್ಟಿಗೆ ಓದಿದ್ದೇವೆ ಆದರೆ ನಾವು ಒಟ್ಟಿಗೆ ಅರ್ಹತೆ ಪಡೆಯುತ್ತೇವೆ ಎಂದು ಎಂದಿಗೂ ಯೋಚಿಸಲಿಲ್ಲ. ಇಂದು ನಾವು ಇಬ್ಬರೂ ತುಂಬಾ ಸಂತೋಷವಾಗಿದ್ದೇವೆ” ಎಂದು ಬಿಂದು ಅವರ ಮಗ ವಿವೇಕ್ ಹೇಳುತ್ತಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top