News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಉಗ್ರವಾದದ ಬಗ್ಗೆ ಡಬಲ್‌ ಸ್ಟ್ಯಾಂಡರ್ಡ್‌: ಚೀನಾ, ಪಾಕ್‌ ವಿರುದ್ಧ ಭಾರತ ವಾಗ್ದಾಳಿ

ನವದೆಹಲಿ: ಭಯೋತ್ಪಾದನೆ ಕುರಿತ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಸಭೆಯಲ್ಲಿ ಭಾರತ ಮಂಗಳವಾರ ಚೀನಾ ಮತ್ತು ಪಾಕಿಸ್ಥಾನವನ್ನು ತರಾಟೆಗೆ ತೆಗೆದುಕೊಂಡಿದ್ದು, ಈ ಎರಡು ದೇಶಗಳು ಭಯೋತ್ಪಾದನೆ ಕುರಿತು ʼಡಬಲ್ ಸ್ಟ್ಯಾಂಡರ್ಡ್ʼ ಹೊಂದಿವೆ ಎಂದು ಆರೋಪಿಸಿದೆ.

“ಭಯೋತ್ಪಾದಕರನ್ನು ಜಾಗತಿಕ ಭಯೋತ್ಪಾದಕ ಎಂಬ ಯುಎನ್‌ ಪಟ್ಟಿಗೆ ಸೇರಿಸುವ ಪ್ರಸ್ತಾವಣೆಯನ್ನು ಅತ್ಯಂತ ನಿಖರವಾದ ಸಾಕ್ಷ್ಯಾಧಾರದ ಮೇಲೆ ಸಿದ್ಧಪಡಿಸಲಾಗಿದ್ದರೂ ಕೂಡ ತಡೆಹಿಡಿಯಲಾಗುತ್ತಿರುವುದು ನಿಜಕ್ಕೂ ಖೇದಕರ” ಎಂದು ವಿಶ್ವಸಂಸ್ಥೆಯಲ್ಲಿನ ಭಾರತದ ರಾಯಭಾರಿ ರುಚಿರಾ ಕಾಂಬೋಜ್‌ ಅವರು ಹೇಳಿದ್ದಾರೆ. ಈ ಮೂಲಕ ಚೀನಾವನ್ನು ಕುಟುಕಿದ್ದಾರೆ.

ಈ ವರ್ಷದ ಆರಂಭದಲ್ಲಿ, ಪಾಕಿಸ್ಥಾನ ಮೂಲದ ಲಷ್ಕರ್-ಎ-ತೋಯ್ಪಾ ಉಗ್ರ ಸಂಘಟನೆಯ 2 ನೇ ಕಮಾಂಡರ್ ಅಬ್ದುಲ್ ರೆಹಮಾನ್ ಮಕ್ಕಿಯನ್ನು ಯುಎನ್ ಪಟ್ಟಿಯಲ್ಲಿ ಸೇರಿಸುವುದನ್ನು ಚೀನಾ ತಡೆಹಿಡಿದಿತ್ತು. ಈ ಹಿಂದೆಯೂ, ಬೀಜಿಂಗ್ ಜೈಶ್-ಎ-ಮೊಹಮ್ಮದ್ (ಜೆಇಎಂ) ನ ಮೌಲಾನಾ ಮಸೂದ್ ಅಜರ್‌ ಅನ್ನು ಪಟ್ಟಿಯಲ್ಲಿ ಸೇರಿಸುವುದಕ್ಕೆ ತಡೆಹಿಡಿದಿತ್ತು.

“ಡಬಲ್ ಸ್ಟ್ಯಾಂಡರ್ಡ್ ಮತ್ತು ನಿರಂತರ ರಾಜಕೀಕರಣವು ನಿರ್ಬಂಧಗಳ ಆಡಳಿತದ ವಿಶ್ವಾಸಾರ್ಹತೆಯನ್ನು ಸಾರ್ವಕಾಲಿಕವಾಗಿ ಕಡಿಮೆ ಮಾಡಿದೆ. UNSC ಯ ಎಲ್ಲಾ ಸದಸ್ಯರು ಒಂದೇ ಧ್ವನಿಯಲ್ಲಿ ಉಗ್ರವಾದದ ವಿರುದ್ಧ ಉಚ್ಚರಿಸಬೇಕು ಮತ್ತು  ಅಂತರಾಷ್ಟ್ರೀಯ ಭಯೋತ್ಪಾದನೆಯ ವಿರುದ್ಧ ಹೋರಾಡಬೇಕು ಎಂದು ನಾವು ಭಾವಿಸುತ್ತೇವೆ” ಎಂದು ರುಚಿರಾ ಹೇಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top