News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಕಾಮನ್ವೆಲ್ತ್‌ ಗೇಮ್ಸ್‌: 8ನೇ ದಿನ ಭಾರತಕ್ಕೆ 3 ಚಿನ್ನ, 1 ಬೆಳ್ಳಿ, 2 ಕಂಚಿನ ಪದಕ

ಬರ್ಮಿಂಗ್‌ಹ್ಯಾಮ್‌: ಕಾಮನ್ವೆಲ್ತ್‌ ಗೇಮ್ಸ್‌ 2022ರಲ್ಲಿ ಭಾರತ ಮಹತ್ವದ ಸಾಧನೆ ಮಾಡುತ್ತಿದೆ. 8ನೇ ದಿನದ ಕ್ರೀಡಾಕೂಟದಲ್ಲಿ ಭಾರತೀಯ ಕುಸ್ತಿಪಟುಗಳು ಆರು ಪದಕಗಳನ್ನು ಜಯಿಸಿದ್ದಾರೆ. ಇದರಲ್ಲಿ ಮೂರು ಚಿನ್ನದ ಪದಕ ಮತ್ತು ಒಂದು ಬೆಳ್ಳಿ ಹಾಗೂ ಎರಡು ಕಂಚು.

ಪುರುಷರ 65 ಕೆಜಿ ಫ್ರೀಸ್ಟೈಲ್ ಕುಸ್ತಿ ಫೈನಲ್‌ನಲ್ಲಿ ಕೆನಡಾದ ಲಾಚ್ಲಾನ್ ಮೆಕ್‌ನೀಲ್ ಅವರನ್ನು ಸೋಲಿಸಿದ ಬಜರಂಗ್ ಪೂನಿಯಾ 2022 ರ ಕಾಮನ್‌ವೆಲ್ತ್ ಕ್ರೀಡಾಕೂಟದಲ್ಲಿ ಕುಸ್ತಿ ಕ್ರೀಡೆಯಲ್ಲಿ ಭಾರತಕ್ಕೆ ಮೊದಲ ಚಿನ್ನದ ಪದಕವನ್ನು ನೀಡಿದರು.

ಕೆಲವು ನಿಮಿಷಗಳ ನಂತರ, 2016 ರ ರಿಯೊ ಒಲಿಂಪಿಕ್ಸ್ ಕಂಚಿನ ಪದಕ ವಿಜೇತೆ ಸಾಕ್ಷಿ ಮಲಿಕ್ ಮಹಿಳೆಯರ 62 ಕೆಜಿ ವಿಭಾಗದಲ್ಲಿ ಕೆನಡಾದ ಅನಾ ಗೊನ್ಜಾಲೆಜ್ ಅವರನ್ನು ಹಿಂದಿಕ್ಕಿ ಭಾರತಕ್ಕೆ ಕುಸ್ತಿಯಲ್ಲಿ ಎರಡನೇ ಚಿನ್ನವನ್ನು ತಂದುಕೊಟ್ಟರು.

ಪುರುಷರ 86 ಕೆಜಿ ವಿಭಾಗದಲ್ಲಿ ದೀಪಕ್ ಪುನಿಯಾ ಪಾಕಿಸ್ಥಾನ ಮುಹಮ್ಮದ್ ಇನಾಮ್ ಅವರನ್ನು ಸೋಲಿಸುವ ಮೂಲಕ  ಮೂರನೇ ಚಿನ್ನವನ್ನು ತಂದುಕೊಟ್ಟರು.

ಅಂಶು ಮಲಿಕ್‌ ಅವರು ಬೆಳ್ಳಿ ಪದಕ ಜಯಿಸಿದರೆ, ದಿವ್ಯಾ ಕಕ್ರನ್‌  ಮತ್ತು ಮೋಹಿತ್‌ ಗ್ರೆವಾಲ್‌ ಕಂಚು ಜಯಿಸಿದ್ದಾರೆ.

ಕುಸ್ತಿಯ ಆರು ವಿಭಾಗದಲ್ಲೂ ಭಾರತ ಪದಕ ಜಯಿಸಿದ್ದು ವಿಶೇಷವಾಗಿತ್ತು.

ಪದಕ ಪಟ್ಟಿಯಲ್ಲಿ ಭಾರತ ಪ್ರಸ್ತುತ 5ನೇ ಸ್ಥಾನವನ್ನು ಪಡೆದುಕೊಂಡಿದೆ. ಇದುವರೆಗೆ ಭಾರತ 9 ಬಂಗಾರ,  8 ಬೆಳ್ಳಿ ಮತ್ತು 9 ಕಂಚು ಸೇರಿದಂತೆ ಒಟ್ಟು 26 ಪದಕಗಳನ್ನು ಜಯಿಸಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top