News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ರಾಮ್ಸರ್‌ ಪಟ್ಟಿಯಲ್ಲಿ ಭಾರತದ ಮತ್ತೆ 10 ಜೌಗು ಪ್ರದೇಶಗಳಿಗೆ ಸ್ಥಾನ

ನವದೆಹಲಿ: ಭಾರತವು ತನ್ನ ಜೌಗು ಪ್ರದೇಶ (ವೆಟ್‌ಲ್ಯಾಂಡ್‌)ಗಳ ಒಟ್ಟು ಸಂಖ್ಯೆಗೆ ಇನ್ನೂ 10 ಜೌಗು ಪ್ರದೇಶಗಳನ್ನು ಸೇರಿಸಿದೆ. ಈ ಮೂಲಕ ರಾಮ್ಸರ್‌ ಮಾನ್ಯತೆ ಪಡೆದ ಒಟ್ಟು ಜೌಗು ಪ್ರದೇಶಗಳ ಸಂಖ್ಯೆ ಈಗ 64 ಕ್ಕೆ ಏರಿದೆ ಎಂದು ಕೇಂದ್ರ ಪರಿಸರ ಸಚಿವಾಲಯ ಘೋಷಣೆ ಮಾಡಿದೆ.

ಹೊಸ ಜೌಗು ಪ್ರದೇಶಗಳ ಪೈಕಿ ತಮಿಳುನಾಡಿನ ಆರು ಜೌಗು ಪ್ರದೇಶಗಳು ಮತ್ತು ಗೋವಾ, ಕರ್ನಾಟಕ, ಮಧ್ಯಪ್ರದೇಶ ಮತ್ತು ಒಡಿಶಾದ ತಲಾ ಒಂದು ಜೌಗು ಪ್ರದೇಶಗಳು ಸೇರಿವೆ.

“ಮತ್ತೆ 10 ಭಾರತೀಯ ಜೌಗು ಪ್ರದೇಶಗಳು ಅಂತರಾಷ್ಟ್ರೀಯ ಪ್ರಾಮುಖ್ಯತೆಯ ಜೌಗು ಪ್ರದೇಶಗಳೆಂದು ರಾಮ್ಸರ್ ಮಾನ್ಯತೆಯನ್ನು ಪಡೆದಿವೆ ಎಂದು ತಿಳಿಸಲು ರೋಮಾಂಚನವಾಗುತ್ತಿದೆ. ಇದು ಭಾರತದ ರಾಮ್ಸರ್ ಸೈಟ್‌ಗಳ ಸಂಖ್ಯೆಯನ್ನು 64 ಕ್ಕೆ ಕೊಂಡೊಯ್ಯುತ್ತದೆ. ಒಡಿಶಾ, ಗೋವಾ, ತಮಿಳುನಾಡು, ಕರ್ನಾಟಕ ಮತ್ತು ಮಧ್ಯಪ್ರದೇಶಕ್ಕೆ ವಿಶೇಷ ಅಭಿನಂದನೆಗಳು” ಎಂದು ಕೇಂದ್ರ ಪರಿಸರ ಸಚಿವ ಭೂಪೇಂದರ್ ಯಾದವ್ ಇಂದು ಮುಂಜಾನೆ ಟ್ವೀಟ್ ಮಾಡಿದ್ದಾರೆ.

ಇಲ್ಲಿಯವರೆಗೆ, 12,50,361 ಹೆಕ್ಟೇರ್ ಪ್ರದೇಶವನ್ನು ಒಳಗೊಂಡಿರುವ ಭಾರತದ 64 ಜೌಗು ಪ್ರದೇಶಗಳನ್ನು  ಅಂತರರಾಷ್ಟ್ರೀಯ ಪ್ರಾಮುಖ್ಯತೆಯ ರಾಮ್ಸರ್ ಸೈಟ್‌ಗಳಾಗಿ ಗೊತ್ತುಪಡಿಸಲಾಗಿದೆ. 10 ಹೊಸ ಗೊತ್ತುಪಡಿಸಿದ ತಾಣಗಳಲ್ಲಿ ಕೂಂತಂಕುಳಂ ಪಕ್ಷಿಧಾಮ, ಗೋವಾದ ನಂದಾ ಸರೋವರ, ಒಡಿಶಾದ ಮಹಾನದಿ ನದಿಯ ಉದ್ದಕ್ಕೂ ಹರಡಿರುವ ಸತ್ಕೋಸಿಯಾ ಕಮರಿಯೂ ಸೇರಿದೆ. ಕರ್ನಾಟಕದ ರಂಗನತಿಟ್ಟು ಸ್ಥಾನ ಪಡೆದುಕೊಂಡಿದೆ.

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top