News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಚೆನ್ನೈ: ಚೆಸ್‌ ಒಲಿಂಪಿಯಾಡ್‌ಗೆ ಚಾಲನೆ ನೀಡಿದ ಮೋದಿ


ಚೆನ್ನೈ: ತಮಿಳುನಾಡು ರಾಜಧಾನಿ ಚೆನ್ನೈನ ಜವಾಹರಲಾಲ್ ನೆಹರು ಕ್ರೀಡಾಂಗಣದಲ್ಲಿ ವಿಶ್ವದ ಅತಿದೊಡ್ಡ ಚೆಸ್ ಈವೆಂಟ್  44 ನೇ ʼಅಂತರರಾಷ್ಟ್ರೀಯ ಚೆಸ್ ಒಲಿಂಪಿಯಾಡ್ʼ ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದ್ದಾರೆ.

ಆಗಸ್ಟ್ 10 ರವರೆಗೆ ಚೆಸ್‌ ಒಲಿಂಪಿಯಾಡ್‌ ಜರುಗಲಿದೆ.

187 ದೇಶಗಳ ಆಟಗಾರರನ್ನು ಒಳಗೊಂಡ ವಿಶ್ವದ ಅತಿದೊಡ್ಡ ಟೀಮ್ ಚೆಸ್ ಚಾಂಪಿಯನ್‌ಶಿಪ್ ಇದಾಗಿದ್ದು, ಶುಕ್ರವಾರದಿಂದ ಮಾಮಲ್ಲಪುರಂನ ಶೆರಾಟನ್‌ನ ಹೋಟೆಲ್ ಫೋರ್ ಪಾಯಿಂಟ್ಸ್‌ನಲ್ಲಿ ನಡೆಯುತ್ತದೆ.

ಉದ್ಘಾಟನಾ ಸಮಾರಂಭವನ್ನು ಚೆನ್ನೈನಲ್ಲಿ ಅತ್ಯಂತ ಅದ್ಧೂರಿಯಾಗಿ ನಡೆಸಲಾಗಿದ್ದು, ಭಾರತೀಯ ಶಾಸ್ತ್ರೀಯ ನೃತ್ಯದ ಎಲ್ಲಾ ಎಂಟು ಪ್ರಕಾರಗಳಾದ ಕಥಕ್, ಒಡಿಸ್ಸಿ, ಕೂಚುಪುಡಿ, ಕಥಕ್ಕಳಿ, ಮೋಹಿನಿಯಾಟ್ಟಂ, ಮಣಿಪುರಿ, ಸತ್ರಿಯಾ ಮತ್ತು ಭರತನಾಟ್ಯವನ್ನು ಪ್ರದರ್ಶಿಸಲಾಯಿತು. ಉದ್ಘಾಟನೆಗೆ ನೆರೆದಿದ್ದ ಜನರು ಚೆನ್ನೈ ಮೂಲದ ಸಂಗೀತಗಾರ ಲಿಡಿಯನ್ ನಾದಸ್ವರಂ ಅವರ ಸಂಗೀತ ರಸದೌತಣವನ್ನು ಸಹ ಆನಂದಿಸಿದರು.

ಕಾರ್ಯಕ್ರಮದಲ್ಲಿ ಶ್ರೀಮಂತ ತಮಿಳು ಸಂಸ್ಕೃತಿ, ಪರಂಪರೆ, ಸಂಪ್ರದಾಯಗಳು ಮತ್ತು ಕ್ರೀಡೆಗಳನ್ನು ಕೂಡ ಪ್ರದರ್ಶಿಸಲಾಗಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top