News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಹಿರಿಯ ನಾಗರಿಕರಿಗೆ ರಿಯಾಯಿತಿ ಮರು ಜಾರಿಗೊಳಿಸುತ್ತಿದೆ ರೈಲ್ವೆ

ನವದೆಹಲಿ: ಈ ಹಿಂದೆ ಹಿರಿಯ ನಾಗರಿಕರಿಗೆ ರೈಲು ಟಿಕೆಟ್‌ಗಳಲ್ಲಿ ನೀಡಲಾಗುತ್ತಿದ್ದ ರಿಯಾಯಿತಿಗಳನ್ನು ಮತ್ತೆ ಆರಂಭಿಸಲು ಭಾರತೀಯ ರೈಲ್ವೆ ಯೋಚಿಸುತ್ತಿದೆ. ಆದರೆ ಸಾಮಾನ್ಯ ಮತ್ತು ಸ್ಲೀಪರ್ ವರ್ಗಗಳಿಗೆ ಮಾತ್ರ ಇದು ಅನ್ವಯವಾಗುತ್ತದೆ ಎಂದು ಮೂಲಗಳು ತಿಳಿಸಿವೆ.

ಈ ಮೊದಲು 58 ವರ್ಷ ಮೇಲ್ಪಟ್ಟ ಮಹಿಳೆಯರಿಗೆ ಮತ್ತು 60 ವರ್ಷ ಮೇಲ್ಪಟ್ಟ ಪುರುಷರಿಗೆ ರಿಯಾಯಿತಿ ನೀಡಲಾಗುತ್ತಿತ್ತು. ಪ್ರಸ್ತುತ  70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ರಿಯಾಯಿತಿ ದರವನ್ನು ವಿಸ್ತರಿಸುವ ಮೂಲಕ ವಯಸ್ಸಿನ ಮಾನದಂಡಗಳನ್ನು ರೈಲ್ವೆ ಬದಲಾಯಿಸಿದೆ.

“ಈ ರಿಯಾಯಿತಿಗಳು ವಯಸ್ಸಾದವರಿಗೆ ಸಹಾಯ ಮಾಡುತ್ತದೆ ಎಂದು ನಾವು ಅರ್ಥಮಾಡಿಕೊಂಡಿದ್ದೇವೆ ಮತ್ತು ನಾವು ರಿಯಾಯಿತಿಯನ್ನು ಸಂಪೂರ್ಣವಾಗಿ ರದ್ದುಗೊಳಿಸುತ್ತೇವೆ ಎಂದು ಎಂದೂ ಹೇಳಿಕೊಂಡಿಲ್ಲ. ರಿಯಾಯಿತಿ ಶೀಘ್ರ ಮರು ಅನುಷ್ಠಾನದ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ” ಎಂದು ರೈಲ್ವೆ ಮೂಲವೊಂದು ತಿಳಿಸಿದೆ.

ಹಿರಿಯ ನಾಗರಿಕರ ರಿಯಾಯಿತಿಗಾಗಿ ವಯಸ್ಸಿನ ಮಾನದಂಡಗಳನ್ನು ಬದಲಾಯಿಸಲು ಮತ್ತು ಅದನ್ನು 70 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಮಾತ್ರ ವಿಸ್ತರಿಸಲು ರೈಲ್ವೆ ಮಂಡಳಿಯು ಪರಿಗಣಿಸುತ್ತಿದೆ ಎಂದು ಮೂಲಗಳು ತಿಳಿಸಿದೆ

2020 ರಲ್ಲಿ ಕೊರೋನಾವೈರಸ್ ಸಾಂಕ್ರಾಮಿಕ ಸಮಯದಲ್ಲಿ ರಿಯಾಯಿತಿ ಹಿಂಪಡೆಯಲಾಗಿತ್ತು.

ಎಲ್ಲಾ ರೈಲುಗಳಲ್ಲಿ ‘ಪ್ರೀಮಿಯಂ ತತ್ಕಾಲ್’ ಯೋಜನೆಯನ್ನು ಪರಿಚಯಿಸುವ ಬಗ್ಗೆಯೂ ರೈಲ್ವೆ ಯೋಚಿಸುತ್ತಿದೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top