News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಜಮ್ಮು-ಕಾಶ್ಮೀರ: ಲಾಲ್‌ಚೌಕ್‌ನಲ್ಲಿ ಬಿಜೆಪಿಯಿಂದ ತಿರಂಗಾ ಬೈಕ್‌ ರ‍್ಯಾಲಿ

ಶ್ರೀನಗರ: 1999ರ ಕಾರ್ಗಿಲ್ ಯುದ್ಧದಲ್ಲಿ ಹುತಾತ್ಮರಾದ ಯೋಧರಿಗೆ ಶ್ರದ್ಧಾಂಜಲಿ ಸಲ್ಲಿಸಲು ಶ್ರೀನಗರದ  ಪ್ರತ್ಯೇಕತಾವಾದಿಗಳ ಭದ್ರಕೋಟೆಯಾಗಿದ್ದ ಸಿಟಿ ಸೆಂಟರ್‌ನ ಲಾಲ್ ಚೌಕ್‌ನಲ್ಲಿ  ಬಿಜೆಪಿ ಇಂದು ಮೊಟ್ಟಮೊದಲ ಬಾರಿಗೆ ತಿರಂಗಾ ಬೈಕರ್ಸ್ ರ‍್ಯಾಲಿಯನ್ನು ಆಯೋಜಿಸಿದೆ.

ಲಡಾಖ್ ಕೇಂದ್ರಾಡಳಿತದ ದ್ರಾಸ್ ಪ್ರದೇಶದಲ್ಲಿನ ಕಾರ್ಗಿಲ್ ಯುದ್ಧ ಸ್ಮಾರಕದವರೆಗಿನ ಬೈಕ್‌ ರ‍್ಯಾಲಿಗೆ,  ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ತರುಣ್ ಚುಗ್ ಮತ್ತು ಭಾರತೀಯ ಜನತಾ ಯುವ ಮೋರ್ಚಾ ಅಧ್ಯಕ್ಷ (ಬಿಜೆವೈಎಂ) ತೇಜಸ್ವಿ ಸೂರ್ಯ ಅವರ ನೇತೃತ್ವದಲ್ಲಿ ಚಾಲನೆ ನೀಡಲಾಯಿತು.

ಲಾಲ್ ಚೌಕ್‌ನಲ್ಲಿರುವ ಐತಿಹಾಸಿಕ ‘ಘಂಟಾ ಘರ್’ (ಗಡಿಯಾರ ಗೋಪುರ) ಬಳಿ ಚಾಲನೆ ನೀಡಲಾಗಿದ್ದು, ಇದಕ್ಕೆ ಭಾರೀ ಭದ್ರತಾ ವ್ಯವಸ್ಥೆಗಳನ್ನು ನಿಯೋಜಿಸಲಾಗಿತ್ತು.

ರ‍್ಯಾಲಿ ಮೇಲೆ ಕಣ್ಣಿಡಲು ಭದ್ರತಾ ಪಡೆಗಳು ಡ್ರೋನ್‌ಗಳನ್ನು ಬಳಸಿದವು ಮತ್ತು ಸಂಚಾರ ಮತ್ತು ಸಾರ್ವಜನಿಕ ಚಲನೆಯನ್ನು ಬೇರೆಡೆಗೆ ತಿರುಗಿಸಲಾಗಿತ್ತು.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top