News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

ಇಂಗ್ಲೇಡ್‌ನ ಪ್ರಮುಖ ಕ್ರಿಕೆಟ್‌ ಕ್ರೀಡಾಂಗಣಕ್ಕೆ ಸುನಿಲ್‌ ಗಾವಸ್ಕರ್‌ ಹೆಸರು

ನವದೆಹಲಿ: ವಿಶ್ವ ಕ್ರಿಕೆಟ್‌ನಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಮುಗಿಲೆತ್ತರಕ್ಕೆ ಹಾರಿಸಿರುವ ಸುನಿಲ್ ಗಾವಸ್ಕರ್ ಅವರು ಅತ್ಯುನ್ನತ ಗೌರವವೊಂದನ್ನು ಪಡೆಯುತ್ತಿದ್ದಾರೆ. ಇಂಗ್ಲೆಂಡ್‌ನ ಲೀಸೆಸ್ಟರ್‌ನಲ್ಲಿರುವ ಕ್ರಿಕೆಟ್ ಮೈದಾನಕ್ಕೆ ಗಾವಸ್ಕರ್ ಹೆಸರನ್ನು ಇಡಲಾಗುತ್ತಿದೆ.

ಯುಎಸ್‌ನ ಕೆಂಟುಕಿ ಮತ್ತು ತಾಂಜಾನಿಯಾದ ಜಂಜಿಬಾರ್‌ನಲ್ಲಿ ಈಗಾಗಲೇ ಗಾವಸ್ಕರ್‌  ಹೆಸರಿನ ಕ್ರೀಡಾಂಗಣಗಳನ್ನು ಹೊಂದಿದೆ. ಇದೀಗ ಈ ಸಾಲಿಗೆ ಇಂಗ್ಲೇಡ್‌ ಕೂಡ ಸೇರಿದೆ.

ಗವಾಸ್ಕರ್ ಅವರು ಇಂಗ್ಲೆಂಡ್ ಅಥವಾ ಯುರೋಪಿನಲ್ಲಿ ತಮ್ಮ ಹೆಸರಿನ ಮೈದಾನವನ್ನು ಹೊಂದಿರುವ ಮೊದಲ ಭಾರತೀಯ ಕ್ರಿಕೆಟ್‌ ಪಟು ಆಗಿದ್ದಾರೆ.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಗಾವಸ್ಕರ್‌ ಅವರು, “ಲೀಸೆಸ್ಟರ್‌ನಲ್ಲಿರುವ ಮೈದಾನವೊಂದಕ್ಕೆ ನನ್ನ ಹೆಸರಿಡುತ್ತಿರುವುದಕ್ಕೆ ನನಗೆ ಸಂತೋಷ ಮತ್ತು ಗೌರವವಿದೆ. ಲೀಸೆಸ್ಟರ್ ಆಟಕ್ಕೆ, ವಿಶೇಷವಾಗಿ ಭಾರತೀಯ ಕ್ರಿಕೆಟ್‌ಗೆ ಪ್ರಬಲ ಬೆಂಬಲಿಗರನ್ನು ಹೊಂದಿರುವ ನಗರವಾಗಿದೆ ಮತ್ತು ಆದ್ದರಿಂದ ಇದು ನಿಜಕ್ಕೂ ದೊಡ್ಡ ಗೌರವವಾಗಿದೆ” ಎಂದಿದ್ದಾರೆ.

ಭಾರತ್ ಸ್ಪೋರ್ಟ್ಸ್ ಮತ್ತು ಕ್ರಿಕೆಟ್ ಕ್ಲಬ್ ಒಡೆತನದ ಕ್ರೀಡಾಂಗಣದಲ್ಲಿ ಔಪಚಾರಿಕವಾಗಿ ತಮ್ಮ ಹೆಸರಿನ ಫಲಕವನ್ನು ಪ್ರಸ್ತುತಪಡಿಸಲು ಗಾವಸ್ಕರ್ ಲೀಸೆಸ್ಟರ್‌ಗೆ ತೆರಳಿದ್ದಾರೆ.

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top