ಜಾರ್ಖಾಂಡ್: ಅನಾರೋಗ್ಯದಿಂದ ತೀವ್ರ ಅಸ್ವಸ್ಥನಾದ ತನ್ನ ತಮ್ಮನನ್ನು ಕಾಪಾಡಲೇ ಬೇಕು ಎಂಬ ಪಣತೊಟ್ಟ 11ವರ್ಷದ ಪುಟ್ಟ ಬಾಲಕಿಯೊಬ್ಬಳು ತನ್ನ ವಯಸ್ಸಿಗೆ ಮೀರಿದ ಕಾರ್ಯವನ್ನು ಮಾಡಿದ್ದಾಳೆ.
8 ವರ್ಷದ ತಮ್ಮನನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ಬರೋಬ್ಬರಿ 8 ಕಿ.ಮೀ ದೂರದಲ್ಲಿರುವ ಆಸ್ಪತ್ರೆಗೆ ನಡೆದುಕೊಂಡು ಬಂದಿದ್ದಾಳೆ.
ತಂದೆ ತಾಯಿಯಿಲ್ಲದ ಈ ತಬ್ಬಲಿ ಮಕ್ಕಳು ಅಜ್ಜಿಯ ಆಶ್ರಯದಲ್ಲಿ ಬೆಳೆಯುತ್ತಿದ್ದಾರೆ. ಹತ್ತಿರದಲ್ಲಿ ಯಾವುದೇ ಆಸ್ಪತ್ರೆಗಳಿಲ್ಲ, ತಮ್ಮನನ್ನು ಆಸ್ಪತ್ರೆಗೆ ಸೇರಿಸಲೇ ಬೇಕಾದ ಅನಿವಾರ್ಯತೆ, ಅಜ್ಜಿಗೆ ದೇಹದಲ್ಲಿ ಶಕ್ತಿಯಿಲ್ಲ. ಹೀಗಾಗಿ ತಾನೇ ಹೊತ್ತುಕೊಂಡು ಬಂದು ಆತನನ್ನು ಆಸ್ಪತ್ರೆಗೆ ಸಾಗಿಸಿದ್ದಾಳೆ. ಆಕೆಯ ಈ ಕಾರ್ಯದಿಂದ ಆಕೆಯ ತಮ್ಮ ಬದುಕುಳಿದಿದ್ದಾನೆ.
ಆಕೆಯ ಈ ಸಾಹಸ ಕಾರ್ಯಕ್ಕೆ, ಅದಮ್ಯ ಪ್ರೀತಿಗೆ ಜನ ತಲೆಬಾಗಿದ್ದಾರೆ. ಹಲವಾರು ಮಂದಿ ಆಕೆಯ ನೆರವಿಗೆ ಧಾವಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.