News13 ವಾಟ್ಸ್ಯಾಪ್‌ ಗ್ರೂಪ್‌ಗೆ ಸೇರಿ


×
Home About Us Advertise With s Contact Us

200 ಕೋಟಿ ಡೋಸ್‌ ಲಸಿಕೆ ನೀಡಿಕೆ: ಮೋದಿಯನ್ನು ಶ್ಲಾಘಿಸಿದ ಬಿಲ್‌ ಗೇಟ್ಸ್

ನವದೆಹಲಿ: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕೋವಿಡ್ ವಿರುದ್ಧ ಭಾರತದ ಒಟ್ಟು ವ್ಯಾಕ್ಸಿನೇಷನ್ 200 ಕೋಟಿ ಡೋಸ್ ದಾಟಿದ್ದಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಬುಧವಾರ ಅಭಿನಂದಿಸಿದ್ದಾರೆ.

ಟ್ವಿಟ್‌ ಮಾಡಿರುವ ಅವರು, “200 ಕೋಟಿ ಲಸಿಕೆಗಳನ್ನು ನೀಡುವ ಮತ್ತೊಂದು ಮೈಲಿಗಲ್ಲಿಗಾಗಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಅಭಿನಂದನೆಗಳು. ಕೋವಿಡ್-19 ರ ಪರಿಣಾಮವನ್ನು ತಗ್ಗಿಸಲು ಭಾರತೀಯ ಲಸಿಕೆ ತಯಾರಕರು ಮತ್ತು ಭಾರತ ಸರ್ಕಾರದೊಂದಿಗೆ ನಮ್ಮ ನಿರಂತರ ಪಾಲುದಾರಿಕೆಗಾಗಿ ನಾವು ಕೃತಜ್ಞರಾಗಿರುತ್ತೇವೆ” ಎಂದಿದ್ದಾರೆ.

ಈ ಹಿಂದೆ ಮೇ ತಿಂಗಳಲ್ಲಿ ಸ್ವಿಟ್ಜರ್ಲೆಂಡ್‌ನ ದಾವೋಸ್‌ನಲ್ಲಿ ನಡೆದ ವಿಶ್ವ ಆರ್ಥಿಕ ವೇದಿಕೆಯಲ್ಲಿ (ಡಬ್ಲ್ಯುಇಎಫ್) ಕೇಂದ್ರ ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಿದ್ದ ಗೇಟ್ಸ್‌ ಅವರು ದೇಶದ ವ್ಯಾಕ್ಸಿನೇಷನ್ ಅಭಿಯಾನವನ್ನು ಶ್ಲಾಘಿಸಿದ್ದರು.

“ಡಾ. ಮನ್ಸುಖ್ ಮಾಂಡವಿಯಾ ಅವರನ್ನು ಭೇಟಿಯಾಗಲು ಮತ್ತು ಜಾಗತಿಕ ಆರೋಗ್ಯದ ದೃಷ್ಟಿಕೋನಗಳನ್ನು ವಿನಿಮಯ ಮಾಡಿಕೊಳ್ಳುತ್ತಿರುವುದು ಅದ್ಭುತ ಅನುಭವ. ವ್ಯಾಕ್ಸಿನೇಷನ್ ಅಭಿಯಾನದೊಂದಿಗೆ ಭಾರತದ ಯಶಸ್ಸು ಮತ್ತು ಆರೋಗ್ಯದ ಫಲಿತಾಂಶಗಳನ್ನು ಹೆಚ್ಚಿಸಲು ತಂತ್ರಜ್ಞಾನದ ಬಳಕೆಯು ಜಗತ್ತಿಗೆ ಅನೇಕ ಪಾಠಗಳನ್ನು ನೀಡುತ್ತದೆ”ಎಂದು ಗೇಟ್ಸ್ ಹೇಳಿದ್ದರು.‌

 

ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.

News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.

Recent News

Back To Top