ನವದೆಹಲಿ: ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಅವರ ಸಹೋದರಿ ರುಬಯ್ಯ ಸಯೀದ್ ಅವರು, 1989 ರಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಅಪಹರಣ ಮಾಡಿದ್ದು ಯಾಸಿನ್ ಮಲಿಕ್ ಮತ್ತು ಇತರ ಮೂವರು ಎಂಬುದನ್ನು ಗುರುತಿಸಿದ್ದಾರೆ.
ರುಬಯ್ಯ ಸಯೀದ್ ಮಾಜಿ ಕೇಂದ್ರ ಗೃಹ ಸಚಿವ ಮುಫ್ತಿ ಮೊಹಮ್ಮದ್ ಸಯೀದ್ ಅವರ ಪುತ್ರಿ. ರುಬಯ್ಯ ಸಯೀದ್ ಅವರು ಯಾಸಿನ್ ಮಲಿಕ್ ಅವರನ್ನು ಜಮ್ಮುವಿನ ಟಾಡಾ ನ್ಯಾಯಾಲಯದ ಮುಂದೆ ತನ್ನನ್ನು ಅಪಹರಣ ಮಾಡಿದಾತ ಎಂದು ಗುರುತಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಪಿಡಿಪಿ ವಕ್ತಾರ ಮತ್ತು ವಕೀಲ ಅನಿಲ್ ಸೇಥಿ ಮಾತನಾಡಿ, ರುಬಯ್ಯ ಸಯೀದ್ ಅವರು ಯಾಸಿನ್ ಮಲಿಕ್ ಮತ್ತು ಇತರ ಎಲ್ಲ ಅಪಹರಣಕಾರರನ್ನು ನ್ಯಾಯಾಲಯದಲ್ಲಿ ಗುರುತಿಸಿದ್ದಾರೆ. ನಿನ್ನೆ ನ್ಯಾಯಾಲಯದಲ್ಲಿ ರುಬಯ್ಯ ಸಯೀದ್ ಹೇಳಿಕೆ ದಾಖಲಿಸಿಕೊಳ್ಳಲಾಗಿದೆ. ಕ್ಯಾಮೆರಾದಲ್ಲಿ ನ್ಯಾಯಾಲಯದ ವಿಚಾರಣೆ ನಡೆಯುತ್ತಿದೆ. ಮುಂದಿನ ವಿಚಾರಣೆ ಮುಂದಿನ ತಿಂಗಳು 23 ನಡೆಯಲಿದೆ.
1989 ರಲ್ಲಿ, ಯಾಸಿನ್ ಮಲಿಕ್ ನೇತೃತ್ವದ ಜಮ್ಮು ಮತ್ತು ಕಾಶ್ಮೀರ ಲಿಬರೇಶನ್ ಫ್ರಂಟ್ (JKLF) ರುಬಯ್ಯ ಅವರನ್ನು ಅಪಹರಿಸಿತ್ತು.
ಆಗ ಆಕೆಯ ತಂದೆ ಮುಫ್ತಿ ಮೊಹಮ್ಮದ್ ಸೈಯದ್ ಆಗ ದೇಶದ ಗೃಹ ಸಚಿವರಾಗಿದ್ದರು. ರುಬಯ್ಯನ ಬಿಡುಗಡೆಗೆ ಬದಲಾಗಿ ಜೆಕೆಎಲ್ಎಫ್ ತನ್ನ ಐವರು ಸದಸ್ಯರನ್ನು ಬಿಡುಗಡೆ ಮಾಡುವಂತೆ ಒತ್ತಾಯಿಸಿತ್ತು.
ನಂತರ ಜಮ್ಮು-ಕಾಶ್ಮೀರ ಮುಖ್ಯಮಂತ್ರಿ ಫಾರೂಕ್ ಅಬ್ದುಲ್ಲಾ ಅವರು ಕೇಂದ್ರದೊಂದಿಗೆ ಮಾತುಕತೆ ನಡೆಸಿ ಅವರ ಬೇಡಿಕೆಗಳನ್ನು ಒಪ್ಪಿಕೊಂಡರು ಮತ್ತು ಜೈಲಿನಲ್ಲಿದ್ದ ಉಗ್ರರನ್ನು ಬಿಡುಗಡೆ ಮಾಡಲಾಯಿತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.