ನವದೆಹಲಿ: ಕಾಳಿ ದೇವಿ ಸಿಗರೇಟು ಸೇದುತ್ತಿರುವ ರೀತಿಯಲ್ಲಿ ಪೋಸ್ಟರ್ ಪ್ರದರ್ಶನ ಮಾಡಿದ್ದಕ್ಕೆ ಕೆನಡಾದ ಆಗಾ ಖಾನ್ ಮ್ಯೂಸಿಯಂ ಹಿಂದೂ ಸಮುದಾಯದ ಕ್ಷಮೆಯಾಚನೆ ಮಾಡಿದೆ.
ನಟಿ ಮತ್ತು ನಿರ್ದೇಶಕಿ ಮಣಿಮೇಕಲೈ ಅವರು ಕಾಳಿ ದೇವತೆಯನ್ನು ಅವಮಾನಕಾರಿಯಾಗಿ ಬಿಂಬಿಸಿ ವಿಕೃತಿ ಮೆರೆದಿದ್ದಾರೆ. ಅವರ ಬಂಧನಕ್ಕೆ ಆಗ್ರಹಿಸಿ ದೇಶವ್ಯಾಪಿ ಅಭಿಯಾನಗಳು ನಡೆಯುತ್ತಿವೆ. ಈ ನಡುವೆ ಅವರ ಪೋಸ್ಟರ್ ಅನ್ನು ಪ್ರದರ್ಶಿಸಿದ ಆಗಾಗ ಖಾನ್ ಮ್ಯೂಸಿಯಂ ಹಿಂದೂಗಳ ಕ್ಷಮೆಯಾಚನೆ ಮಾಡಿದೆ.
ಈ ವಿವಾದಾತ್ಮಕ ಪೋಸ್ಟರ್ ಬಗ್ಗೆ ಕೆನಡಾ ಸರಕಾರಕ್ಕೆ ಭಾರತೀಯ ಕಮಿಷನರ್ ದೂರು ಸಲ್ಲಿಸಿದ್ದರು.
ಇದಾದ ಬಳಿಕ ಕ್ಷಮೆ ಯೋಚನೆ ಮಾಡಿರುವ ಮ್ಯೂಸಿಯಂ, “ಹಿಂದೂ ಧರ್ಮ ಮತ್ತು ಇತರ ಸಮುದಾಯಗಳ ನಂಬಿಕೆಗೆ ಧಕ್ಕೆ ತಂದಿದ್ದಕ್ಕೆ ತೀರ ವಿಷಾದವಿದೆ. “ಅಂಡರ್ ದಿ ಟೆಂಟ್’ನ 18 ವಿಡಿಯೋಗಳಲ್ಲಿ ಒಂದಾಗಿರುವ ಕಾಳಿ ಸಾಕ್ಷ್ಯ ಚಿತ್ರದ ಪೋಸ್ಟರ್ನಲ್ಲಿ ಕಾಳಿದೇವಿಯನ್ನು ತಪ್ಪಾಗಿ ಚಿತ್ರಿಸಿ ಹಿಂದೂ ಸಮುದಾಯಕ್ಕೆ ನೋವು ಮಾಡಲಾಗಿದೆ. ಈ ಬಗ್ಗೆ ಕ್ಷಮೆ ಕೋರುತ್ತೇನೆ” ಎಂದಿದೆ.
Canada | The Museum deeply regrets that one of the 18 short videos from ‘Under the Tent’ and its accompanying social media post have inadvertently caused offence to members of the Hindu and other faith communities: Aga Khan Museum, Toronto https://t.co/j4ohsSyy5c
— ANI (@ANI) July 5, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.