Today is Anti-Terrorism Day and it is observed on 21st of May every year. The day is highly important for the nation as it has been a victim of terror attacks for several years. The objective behind the observance of this day is to wean away from the youth from terrorism and the cult of violence by highlighting the sufferings of common people and showing how it is prejudicial to the national interest.
ನವದೆಹಲಿ: ಇಂದು ಭಯೋತ್ಪಾದನಾ ವಿರೋಧಿ ದಿನ ಮತ್ತು ಇದನ್ನು ಪ್ರತಿ ವರ್ಷ ಮೇ 21 ರಂದು ಆಚರಿಸಲಾಗುತ್ತದೆ. ಹಲವಾರು ವರ್ಷಗಳಿಂದ ಭಾರತ ಭಯೋತ್ಪಾದಕತೆಗೆ ಬಲಿಯಾಗುತ್ತಾ ಬಂದಿರುವ ಕಾರಣ ಈ ದಿನವು ರಾಷ್ಟ್ರಕ್ಕೆ ಅತ್ಯಂತ ಮಹತ್ವದ್ದಾಗಿದೆ.
ಭಯೋತ್ಪಾದನೆ ರಾಷ್ಟ್ರೀಯ ಹಿತಾಸಕ್ತಿಗೆ ಹೇಗೆ ಹಾನಿ ಮಾಡುತ್ತದೆ ಎಂಬುದನ್ನು ತೋರಿಸುವ ಮೂಲಕ ಯುವಕರನ್ನು ಭಯೋತ್ಪಾದನೆ ಮತ್ತು ಹಿಂಸಾಚಾರದಿಂದ ದೂರವಿಡುವುದು ಈ ದಿನ ಆಚರಣೆಯ ಉದ್ದೇಶವಾಗಿದೆ.
ಉಪರಾಷ್ಟ್ರಪತಿ ಎಂ.ವೆಂಕಯ್ಯ ನಾಯ್ಡುಟ್ವಿಟ್ ಮಾಡಿ, ಭಯೋತ್ಪಾದನೆ ಮಾನವೀಯತೆ ಮತ್ತು ವಿಶ್ವಶಾಂತಿಗೆ ಘೋರ ಬೆದರಿಕೆಯಾಗಿದೆ. ಭಯೋತ್ಪಾದನೆಯು ಪ್ರಪಂಚದಾದ್ಯಂತ ಅಸಂಖ್ಯಾತ ಅಮಾಯಕರ ಜೀವನದ ಮೇಲೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಟ್ವಿಟ್ ಮಾಡಿದ್ದಾರೆ.
ಭಯೋತ್ಪಾದನೆಯ ವಿರುದ್ಧದ ಹೋರಾಟದಲ್ಲಿ ಅನೇಕ ತ್ಯಾಗಗಳನ್ನು ಮಾಡಿದ ಅಸಂಖ್ಯಾತ ವೀರ ಪುರುಷ ಮತ್ತು ಮಹಿಳೆಯರಿಗೆ ನಾಯ್ಡು ಗೌರವ ಸಲ್ಲಿಸಿದರು. ಭಯೋತ್ಪಾದನೆಯ ಎಲ್ಲಾ ರೂಪಗಳು ಮತ್ತು ಅಭಿವ್ಯಕ್ತಿಗಳನ್ನು ತೊಡೆದುಹಾಕಲು ಸಂಕಲ್ಪ ಮಾಡಬೇಕೆಂದು ಅವರು ದೇಶವಾಸಿಗಳಿಗೆ ಕರೆ ನೀಡಿದ್ದಾರೆ.
ಜಮ್ಮು ಮತ್ತು ಕಾಶ್ಮೀರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ಅವರು ಇಂದು ಟ್ವೀಟ್ನಲ್ಲಿ ಭಯೋತ್ಪಾದನೆ ಶಾಂತಿ ಮತ್ತು ಸಮೃದ್ಧಿಗೆ ಅತ್ಯಂತ ಅಪಾಯಕಾರಿ ಎಂದು ಹೇಳಿದ್ದಾರೆ.
आज आतंकवाद विरोधी दिवस पर, आतंकवाद के विरुद्ध लड़ रहे हमारे सुरक्षा बलों के शौर्य और बलिदान को सादर नमन करता हूं। एक नागरिक के रूप में हमारा कर्तव्य है कि आस पास की गतिविधियों के प्रति सतर्क रहें। समाज में राष्ट्रीय एकता और सौहार्द की भावना को दृढ़ करें। #AntiTerrorismDay
— Vice President of India (@VPSecretariat) May 21, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.