ನವದೆಹಲಿ: ಶೇ.100ರಷ್ಟು ನಿಖರತೆಯೊಂದಿಗೆ ಮುಂದಿನ ಜನಗಣತಿ ಸಂಪೂರ್ಣ ಡಿಜಿಟಲ್ ಆಗಲಿದೆ ಎಂದು ಗೃಹ ಸಚಿವ ಅಮಿತ್ ಶಾ ಘೋಷಿಸಿದ್ದಾರೆ. ಅಲ್ಲದೇ ಜನಗಣತಿಯೊಂದಿಗೆ ಜನನ ಮತ್ತು ಮರಣ ದಾಖಲಾತಿಯನ್ನು ಜೋಡಿಸಲಾಗುವುದು ಎಂದಿದ್ದಾರೆ.
ಅಸ್ಸಾಂನಲ್ಲಿ ಜನಗಣತಿ ಕಾರ್ಯಾಚರಣೆಗಳ ನಿರ್ದೇಶನಾಲಯದ ಹೊಸ ಕಚೇರಿ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಎಲೆಕ್ಟ್ರಾನಿಕ್ ಪ್ರಕ್ರಿಯೆ ಮತ್ತು ಜನರ ಎಣಿಕೆಯೊಂದಿಗೆ, ದೇಶದಲ್ಲಿ ಪ್ರತಿ ಜನನ ಮತ್ತು ಸಾವಿನ ನಂತರ ಜನಗಣತಿಯನ್ನು ಸ್ವಯಂಚಾಲಿತವಾಗಿ ನವೀಕರಿಸಲಾಗುತ್ತದೆ ಎಂದಿದ್ದಾರೆ.
ಡಿಜಿಟಲ್ ಜನಗಣತಿಯು ಮುಂದಿನ 25 ವರ್ಷಗಳ ದೇಶದ ನೀತಿಗಳನ್ನು ರೂಪಿಸುತ್ತದೆ. ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ 2021 ರ ಜನಗಣತಿ ವಿಳಂಬವಾಗಿದೆ ಮತ್ತು ಇದು 2024 ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಶಾ ಹೇಳಿದರು.
ಪರಿಪೂರ್ಣ ಜನಗಣತಿ ಇಲ್ಲದೆ ಯಾವುದೇ ಅಭಿವೃದ್ಧಿ ಕೆಲಸ ಅಥವಾ ಯೋಜನೆ ಮಾಡಲು ಸಾಧ್ಯವಿಲ್ಲ ಎಂದಿದ್ದಾರೆ.
ಜನನ ಮತ್ತು ಮರಣಗಳ ನೋಂದಣಿಯೊಂದಿಗೆ ಹೊಸ ಸಾಫ್ಟ್ವೇರ್ ಬಹು ಆಯಾಮದ ಬಳಕೆಗಳನ್ನು ಹೊಂದಿರುತ್ತದೆ. ಯಾರಾದರೂ ಜನಿಸಿದ ತಕ್ಷಣ, ಅವರ ವಿವರಗಳನ್ನು ಸಾಫ್ಟ್ವೇರ್ನಲ್ಲಿ ನವೀಕರಿಸಲಾಗುತ್ತದೆ. ಒಬ್ಬ ವ್ಯಕ್ತಿಗೆ 18 ವರ್ಷ ತುಂಬಿದ ನಂತರ, ಅವರ ಹೆಸರನ್ನು ಜನಗಣತಿ ಕಚೇರಿಯಿಂದಲೇ ಮತದಾರರ ಪಟ್ಟಿಯಲ್ಲಿ ನೋಂದಾಯಿಸಲಾಗುತ್ತದೆ. ಒಮ್ಮೆ ಆ ವ್ಯಕ್ತಿ ಸತ್ತರೆ ಮತದಾರರ ಪಟ್ಟಿಯಿಂದ, ಜನಗಣತಿ ಕಚೇರಿಯಿಂದ ಹೆಸರುಗಳು ಅಳಿಸಿ ಹೋಗುತ್ತವೆ. ಜನರು ನಿವಾಸಗಳನ್ನು ಬದಲಾಯಿಸುವ ವಿವರಗಳನ್ನು ಸಾಫ್ಟ್ವೇರ್ ಮೂಲಕ ನವೀಕರಿಸಲಾಗುತ್ತದೆ ಎಂದು ಶಾ ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.