ಮುಂಬಯಿ: ಕೋವಿಡ್-19 ಸಾಂಕ್ರಾಮಿಕ ರೋಗದಿಂದ ಉಂಟಾದ ನಷ್ಟವನ್ನು ಸರಿದೂಗಿಸಲು ಭಾರತೀಯ ಆರ್ಥಿಕತೆಯು ಒಂದು ದಶಕಕ್ಕೂ ಹೆಚ್ಚು ಸಮಯ ತೆಗೆದುಕೊಳ್ಳಬಹುದು ಎಂದು ಭಾರತೀಯ ರಿಸರ್ವ್ ಬ್ಯಾಂಕ್ ಪ್ರಕಟಿಸಿದ ವರದಿ ತಿಳಿಸಿದೆ.
ಆರ್ಥಿಕತೆಯ ಮೇಲೆ ಕೋವಿಡ್-19 ರ ಪರಿಣಾಮದ ವಿಶ್ಲೇಷಣೆ ಮಾಡಿರುವ ವರದಿಯು, ಸಾಂಕ್ರಾಮಿಕ ಅವಧಿಯಲ್ಲಿ ಉತ್ಪಾದನೆಯ ನಷ್ಟವು ಸುಮಾರು 52 ಲಕ್ಷ ಕೋಟಿ ರೂಪಾಯಿ ಎಂದು ಅಂದಾಜಿಸಿದೆ.
ಕೋವಿಡ್-19 ನ ಅಲೆಗಳಿಂದ ಉಂಟಾದ ಪ್ರಕ್ಷುಬ್ಧತೆಗಳು ಚೇತರಿಕೆಯ ಹಾದಿಗೆ ಬಂದಿವೆ ಮತ್ತು ಜಿಡಿಪಿಯಲ್ಲಿನ ತ್ರೈಮಾಸಿಕ ಪ್ರವೃತ್ತಿಗಳು ಮೂಲಭೂತವಾಗಿ ಸಾಂಕ್ರಾಮಿಕದ ಪ್ರಭಾವಗಳನ್ನು ಅನುಸರಿಸುತ್ತವೆ ಎಂದು 2021-22ರ ಕರೆನ್ಸಿ ಮತ್ತು ಹಣಕಾಸು ವರದಿಯಲ್ಲಿನ ‘Scars of the Pandemic’ ಅಧ್ಯಾಯ ಹೇಳಿದೆ.
2020-21ರ ಮೊದಲ ತ್ರೈಮಾಸಿಕದಲ್ಲಿ ಭಾರೀ ಕುಸಿತ ಕಂಡ ಆರ್ಥಿಕ ಬೆಳವಣಿಗೆಯು ನಂತರದಲ್ಲಿ ಚೇತರಿಕೆಯ ಹಾದಿಗೆ ಮರಳಿತ್ತು. ಆದರೆ 2021-22ರ ಏಪ್ರಿಲ್-ಜೂನ್ ಅವಧಿಯಲ್ಲಿ ಎರಡನೇ ಅಲೆಯ ಕಾರಣದಿಂದ ಆರ್ಥಿಕ ಚೇತರಿಕೆಯು ಇಳಿಕೆಯ ಹಾದಿ ಹಿಡಿಯಿತು. 2022ರಲ್ಲಿ ಜನವರಿಯಲ್ಲಿ ಮೂರನೇ ಅಲೆ ಕಾರಣದಿಂದ ಆರ್ಥಿಕ ಚೇತರಿಕೆಗೆ ಮತ್ತಷ್ಟು ಹಿನ್ನಡೆಯಾಯಿತು ಎಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.