ನವದೆಹಲಿ: ಕೋಲ್ ಇಂಡಿಯಾ ಲಿಮಿಟೆಡ್, ಸಿಂಗರೇಣಿ ಕಾಲರೀಸ್ ಕಂಪನಿ ಲಿಮಿಟೆಡ್ ಮತ್ತು ಕಲ್ಲಿದ್ದಲು ವಾಷರೀಸ್ನ ವಿವಿಧ ಮೂಲಗಳಲ್ಲಿ ಪ್ರಸ್ತುತ 72.50 ಮಿಲಿಯನ್ ಟನ್ ಕಲ್ಲಿದ್ದಲು ಲಭ್ಯವಿದೆ ಎಂದು ಕಲ್ಲಿದ್ದಲು ಸಚಿವ ಪ್ರಲ್ಹಾದ್ ಜೋಶಿ ಹೇಳಿದ್ದಾರೆ.
ಥರ್ಮಲ್ ಪವರ್ ಪ್ಲಾಂಟ್ಗಳಲ್ಲಿ 22 ಮಿಲಿಯನ್ ಟನ್ ಕಲ್ಲಿದ್ದಲು ಲಭ್ಯವಿದೆ ಎಂದು ಜೋಶಿ ಟ್ವೀಟ್ ಮಾಡಿದ್ದು, ದೇಶದಲ್ಲಿ ಸಾಕಷ್ಟು ಕಲ್ಲಿದ್ದಲು ಲಭ್ಯವಿದೆ ಎಂದಿದ್ದಾರೆ.
ದೇಶದಲ್ಲಿ ಕಲ್ಲಿದ್ದಲು ಕೊರತೆ ಉಂಟಾಗಿದೆ ಎಂದು ವರದಿಗಳು ಬರುತ್ತಿರುವ ಹಿನ್ನೆಲೆಯಲ್ಲಿ ಅವರು ಈ ಸ್ಪಷ್ಟನೆ ನೀಡಿದ್ದಾರೆ.
2020-21ರಲ್ಲಿನ 716 ಮಿಲಿಯನ್ ಟನ್ಗಳಿಗೆ ಹೋಲಿಸಿದರೆ 2021-22ರಲ್ಲಿ ಒಟ್ಟು ಕಲ್ಲಿದ್ದಲು ಉತ್ಪಾದನೆಯು 777 ಮಿಲಿಯನ್ ಟನ್ಗಳನ್ನು ಮುಟ್ಟಿದೆ, ಇದು ಶೇಕಡಾ 8.55 ರಷ್ಟು ಬೆಳವಣಿಗೆಯನ್ನು ದಾಖಲಿಸಿದೆ. 2021-22ರ ಅವಧಿಯಲ್ಲಿ ಒಟ್ಟು ಕಲ್ಲಿದ್ದಲು ರವಾನೆಯು ಹಿಂದಿನ ವರ್ಷದ 690 ಮಿಲಿಯನ್ ಟನ್ಗಳ ವಿರುದ್ಧವಾಗಿ 818 ಮಿಲಿಯನ್ ಟನ್ಗಳ ಸಂಖ್ಯೆಯನ್ನು ಮುಟ್ಟಿದೆ, ಇದು ಶೇಕಡಾ 18.43 ರಷ್ಟು ಹೆಚ್ಚಳವಾಗಿದೆ.
As of now 72.5 MT coal is available at various sources like stock with @CoalIndiaHQ, SCCL, washeries, etc. and 22.01 MT with TPPs. There is sufficient coal availability in the country, to last over a month, which is being replenished daily with record production. pic.twitter.com/Fa3pKBxiwZ
— Pralhad Joshi (@JoshiPralhad) April 23, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.