ನವದೆಹಲಿ: ಮಾರಿಷಸ್ ಪ್ರಧಾನಿ ಪ್ರವಿಂದ್ ಕುಮಾರ್ ಜುಗ್ನಾಥ್ ಅವರು ಇಂದಿನಿಂದ ಏಪ್ರಿಲ್ 24 ರವರೆಗೆ ಎಂಟು ದಿನಗಳ ಭಾರತ ಪ್ರವಾಸ ಕೈಗೊಂಡಿದ್ದಾರೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಆಹ್ವಾನದ ಮೇರೆಗೆ ಭಾರತಕ್ಕೆ ಭೇಟಿ ನೀಡಲಿರುವ ಜುಗ್ನಾಥ್ ಅವರು ತಮ್ಮ ಪತ್ನಿ ಮತ್ತು ಉನ್ನತ ಮಟ್ಟದ ನಿಯೋಗದೊಂದಿಗೆ ಭಾರತಕ್ಕೆ ಆಗಮಿಸುತ್ತಿದ್ದಾರೆ.
ಇವರು ಏಪ್ರಿಲ್ 19 ರಂದು ಜಾಮ್ನಗರದಲ್ಲಿ WHOದ ಸಾಂಪ್ರದಾಯಿಕ ಔಷಧಕ್ಕಾಗಿನ ಜಾಗತಿಕ ಕೇಂದ್ರದ ಭೂಮಿಪೂಜೆ ಸಮಾರಂಭದಲ್ಲಿ ಮತ್ತು ಏಪ್ರಿಲ್ 20 ರಂದು ಗಾಂಧಿನಗರದಲ್ಲಿ ಗ್ಲೋಬಲ್ ಆಯುಷ್ ಹೂಡಿಕೆ ಮತ್ತು ನಾವೀನ್ಯತೆ ಶೃಂಗಸಭೆಯಲ್ಲಿ ಮೋದಿಯೊಂದಿಗೆ ಭಾಗವಹಿಸಲಿದ್ದಾರೆ.
ಗುಜರಾತ್ ಮತ್ತು ನವದೆಹಲಿಯಲ್ಲಿ ಅಧಿಕೃತ ತೊಡಗಿಸಿಕೊಳ್ಳುವಿಕೆ ಹೊರತಾಗಿ, ಮಾರಿಷಸ್ ಪ್ರಧಾನ ಮಂತ್ರಿ ವಾರಣಾಸಿಗೆ ಭೇಟಿ ನೀಡಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.