ನವದೆಹಲಿ: ಕಲ್ಲಿದ್ದಲು ಸಚಿವಾಲಯದ ತಾತ್ಕಾಲಿಕ ಮಾಹಿತಿಯ ಪ್ರಕಾರ, 2021-22ರಲ್ಲಿ ಒಟ್ಟು ಕಲ್ಲಿದ್ದಲು ಉತ್ಪಾದನೆಯು 777.23 ಮಿಲಿಯನ್ ಟನ್ (MT) ತಲುಪಿದೆ. 2020-21ರ 716 MT ಗೆ ಹೋಲಿಸಿದರೆ ಇದು 8.55 ಶೇಕಡಾ ಬೆಳವಣಿಗೆಯಾಗಿದೆ.
ಕೋಲ್ ಇಂಡಿಯಾ ಲಿಮಿಟೆಡ್ (ಸಿಐಎಲ್) ಉತ್ಪಾದನೆಯು 2020-21 ರಲ್ಲಿ ಇದ್ದ 596.24MT ನಿಂದ 2021-22 ರ ಆರ್ಥಿಕ ವರ್ಷದಲ್ಲಿ 622.64 MT ಗೆ 4.43 ಶೇಕಡಾ ಹೆಚ್ಚಾಗಿದೆ.
ಸಿಂಗರೇಣಿ ಕಾಲೀಯರೀಸ್ ಕಂಪನಿ ಲಿಮಿಟೆಡ್ (SCCL) 28.55 ಶೇಕಡಾ ಬೆಳವಣಿಗೆಯೊಂದಿಗೆ 2021-22 ರಲ್ಲಿ 65.02 MT ಕಲ್ಲಿದ್ದಲು ಉತ್ಪಾದಿಸಿದೆ. ಹಿಂದಿನ ವರ್ಷದಲ್ಲಿ ಅದು 50.58 MT ಕಲ್ಲಿದ್ದಲು ಉತ್ಪಾದಿಸಿತ್ತು. ಅದೇ ಸಮಯದಲ್ಲಿ, ಕ್ಯಾಪ್ಟಿವ್ ಗಣಿಗಳ ಕಲ್ಲಿದ್ದಲು ಉತ್ಪಾದನೆಯು ಶೇಕಡಾ 29.47 ರಷ್ಟು ಹೆಚ್ಚಳದೊಂದಿಗೆ 89.57 MT ಗೆ ಏರಿದೆ. 2020-21ರಲ್ಲಿ ಇದು ಕೇವಲ 69.18 MT ಆಗಿತ್ತು.
2021-22ರಲ್ಲಿ ಒಟ್ಟು ಕಲ್ಲಿದ್ದಲು ರವಾನೆಯು ಹಿಂದಿನ ವರ್ಷದ 690.71 MT ಗಿಂತ 818.04 MT ಅನ್ನು ಮುಟ್ಟಿದೆ, ಇದು 18.43 ಶೇಕಡಾ ಹೆಚ್ಚಳವಾಗಿದೆ. ಈ ಅವಧಿಯಲ್ಲಿ, CIL ಹಿಂದಿನ ವರ್ಷದ 573.80 MT ಗೆ ವಿರುದ್ಧವಾಗಿ 661.85 MT ಕಲ್ಲಿದ್ದಲನ್ನು ರವಾನಿಸಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.