ನವದೆಹಲಿ: ಪ್ರಧಾನಮಂತ್ರಿ ಆವಾಸ್ ಯೋಜನೆ-ನಗರ(ಪಿಎಂಎವೈ-ಯು) ಅಡಿಯಲ್ಲಿ ಸುಮಾರು 56.3 ಲಕ್ಷ ಮನೆಗಳನ್ನು ಪೂರ್ಣಗೊಳಿಸಲಾಗಿದೆ ಮತ್ತು ಫಲಾನುಭವಿಗಳಿಗೆ ವಿತರಿಸಲಾಗಿದೆ ಎಂದು ಸರ್ಕಾರ ತಿಳಿಸಿದೆ.
ವಸತಿ ಮತ್ತು ನಗರ ವ್ಯವಹಾರಗಳ ಕಾರ್ಯದರ್ಶಿ ಮನೋಜ್ ಜೋಶಿ ನೇತೃತ್ವದಲ್ಲಿ ನಡೆದ 60ನೇ ಕೇಂದ್ರ ಮಂಜೂರಾತಿ ಮತ್ತು ಮೇಲ್ವಿಚಾರಣಾ ಸಮಿತಿ ಸಭೆಯಲ್ಲಿ, ಪಿಎಂಎವೈ-ಯು ಅಡಿಯಲ್ಲಿ ಆರು ರಾಜ್ಯಗಳಲ್ಲಿ 2.42 ಲಕ್ಷ ಮನೆಗಳನ್ನು ನಿರ್ಮಾಣ ಮಾಡುವ ಯೋಜನಾ ಪ್ರಸ್ತಾವನೆಗೆ ಅನುಮೋದನೆ ನೀಡಲಾಗಿದೆ.
ಪಿಎಂಎವೈ-ಯುನ ಬೆನಿಫಿಶೀಯರಿ ಲೆಡ್ ಕನ್ಸ್ಟ್ರಕ್ಷನ್ (ಬಿಎಲ್ಸಿ), ಅಫಾರ್ಡೆಬಲ್ ಹೌಸಿಂಗ್ ಇನ್ ಪಾರ್ಟರ್ನರ್ಶಿಪ್ (ಎಎಚ್ಪಿ) ಮತ್ತು ಇನ್-ಸಿತು ಸ್ಲಂ ರಿಹಾಬಿಲೇಶನ್(ಐಎಸ್ಎಸ್ಆರ್) ವರ್ಟಿಕಲ್ಸ್ ಅಡಿಯಲ್ಲಿ ಪ್ರಸ್ತಾಪಿತ ಮನೆಗಳನ್ನು ನಿರ್ಮಾಣ ಮಾಡಲಾಗುತ್ತದೆ.
ಆಂಧ್ರಪ್ರದೇಶ, ಗುಜರಾತ್, ಮಹಾರಾಷ್ಟ್ರ, ತ್ರಿಪುರಾ, ತಮಿಳುನಾಡು ಮತ್ತು ಪಶ್ಚಿಮಬಂಗಾಳದಲ್ಲಿ ಈ ಮನೆಗಳ ನಿರ್ಮಾಣವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.