ನವದೆಹಲಿ: ಅಸ್ಸಾಂ ಮತ್ತು ಮೇಘಾಲಯ ಮಂಗಳವಾರ 12 ಸ್ಥಳಗಳ ಪೈಕಿ ಆರು ಸ್ಥಳಗಳಲ್ಲಿ ತಮ್ಮ ಐದು ದಶಕಗಳ ಹಿಂದಿನ ಗಡಿ ವಿವಾದವನ್ನು ಪರಿಹರಿಸುವ ಒಪ್ಪಂದಕ್ಕೆ ಸಹಿ ಹಾಕಿವೆ. ಕೇಂದ್ರ ಗೃಹ ಸಚಿವ ಶಾ ಮತ್ತು ಅಸ್ಸಾಂ ಮತ್ತು ಮೇಘಾಲಯದ ಮುಖ್ಯಮಂತ್ರಿಗಳ ಸಮ್ಮುಖದಲ್ಲಿ ಒಪ್ಪಂದಕ್ಕೆ ಸಹಿ ಹಾಕಲಾಯಿತು. ಈ ಒಪ್ಪಂದವು ಉಭಯ ರಾಜ್ಯಗಳ ನಡುವಿನ 884.9 ಕಿಮೀ ಗಡಿಯಲ್ಲಿನ 12 ಸ್ಥಳಗಳ ಪೈಕಿ ಆರರಲ್ಲಿನ ಸುದೀರ್ಘ ವಿವಾದವನ್ನು ಪರಿಹರಿಸುತ್ತದೆ.
ಈ ಬೆಳವಣಿಗೆಯನ್ನು ಶಾ ಅವರು ಈಶಾನ್ಯಕ್ಕೆ ಐತಿಹಾಸಿಕ ದಿನ ಎಂದು ಬಣ್ಣಿಸಿದರು. ಒಪ್ಪಂದಕ್ಕೆ ಸಹಿ ಹಾಕುವುದರೊಂದಿಗೆ ಉಭಯ ರಾಜ್ಯಗಳ ನಡುವಿನ ಗಡಿ ವಿವಾದ ಶೇ.70 ರಷ್ಟು ಬಗೆಹರಿದಿದೆ ಎಂದು ಅವರು ತಿಳಿಸಿದ್ದಾರೆ.
ಅಸ್ಸಾಂ ಸಿಎಂ ಹಿಮಂತ ಬಿಸ್ವಾ ಶರ್ಮಾ ಕೂಡ ಇದನ್ನು “ಐತಿಹಾಸಿಕ ದಿನ” ಎಂದು ಕರೆದಿದ್ದಾರೆ ಮತ್ತು ಮುಂದಿನ 6-7 ತಿಂಗಳಲ್ಲಿ ಉಳಿದ ವಿವಾದಿತ ಸ್ಥಳಗಳ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ಹೊಂದಿದ್ದೇವೆ ಎಂದು ಹೇಳಿದರು.
“ಇದು ನಮಗೆ ಐತಿಹಾಸಿಕ ದಿನವಾಗಿದೆ. ಈ ತಿಳುವಳಿಕಾ ಒಪ್ಪಂದದ ನಂತರ, ಮುಂದಿನ 6-7 ತಿಂಗಳುಗಳಲ್ಲಿ, ಉಳಿದ ವಿವಾದಿತ ಸ್ಥಳಗಳ ಸಮಸ್ಯೆಯನ್ನು ಪರಿಹರಿಸುವ ಗುರಿಯನ್ನು ನಾವು ಹೊಂದಿದ್ದೇವೆ. ನಾವು ಈಶಾನ್ಯ ಪ್ರದೇಶವನ್ನು ದೇಶದಲ್ಲಿ ಬೆಳವಣಿಗೆಯ ಎಂಜಿನ್ ಮಾಡುವ ನಿಟ್ಟಿನಲ್ಲಿ ಕೆಲಸ ಮಾಡುತ್ತೇವೆ” ಎಂದು ಶಾ ಹೇಳಿದರು.
ಆರು ಸ್ಥಳಗಳಲ್ಲಿ 36 ಗ್ರಾಮಗಳಿದ್ದು, 36.79 ಚ.ಕಿ.ಮೀ ವಿಸ್ತೀರ್ಣವಿದ್ದು, ಇದಕ್ಕೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.