ನವದೆಹಲಿ: ಇಂದು ಭಾರತದಲ್ಲಿ ಶೇಕಡಾ 15 ರಷ್ಟು ಪೈಲಟ್ಗಳು ಮಹಿಳೆಯರಿದ್ದಾರೆ ಎಂದು ನಾಗರಿಕ ವಿಮಾನಯಾನ ಸಚಿವ ಜ್ಯೋತಿರಾದಿತ್ಯ ಸಿಂಧಿಯಾ ಹೇಳಿದ್ದಾರೆ.
ಮಹಿಳೆಯರ ಕೊಡುಗೆಯನ್ನು ಗುರುತಿಸಲು ಮತ್ತು ಭಾರತೀಯ ವಾಯುಯಾನ ಕ್ಷೇತ್ರದಲ್ಲಿ ಮಹಿಳೆಯರ ಸಾಧನೆಗಳನ್ನು ಕೊಂಡಾಡಲು FICCI ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಮಹಿಳೆಯರು ವಾಯುಯಾನ ಕ್ಷೇತ್ರದಲ್ಲಿ ದೊಡ್ಡ ಕೊಡುಗೆ ನೀಡುತ್ತಿದಾರೆ ಎಂದಿದ್ದಾರೆ.
ನಾಗರಿಕ ವಿಮಾನಯಾನದಲ್ಲಿ ಮಹಿಳೆಯರ ಕುರಿತು ಮಾತನಾಡಿದ ಅವರು, ವಿಮಾನಯಾನದಲ್ಲಿ ಮಹಿಳೆಯರು ಅನೇಕ ಅಡೆತಡೆಗಳನ್ನು ನಿವಾರಿಸಿದ್ದಾರೆ ಮತ್ತು ರೂಢಿಗಳನ್ನು ಮೀರಿಸಿದ್ದಾರೆ. ಭಾರತದಲ್ಲಿ ನಾಗರಿಕ ವಿಮಾನಯಾನದಲ್ಲಿ ಮಹಿಳೆಯರು ಪ್ರತಿ ತೊಡಕನ್ನು ತೊಡೆದು ಮುನ್ನುಗ್ಗುತ್ತಿದ್ದಾರೆ ಎಂದಿದ್ದಾರೆ.
ದೇಶದಲ್ಲಿ ಮಹಿಳಾ ಪೈಲಟ್ಗಳ ಪಾಲು ಶೇ.15ರಿಂದ ಶೇ.50ಕ್ಕೆ ಏರಿಕೆಯಾಗಬೇಕು ಎಂದು ಅವರು ಆಶಿಸಿದ್ದಾರೆ.
ವಿಮಾನಯಾನ ಸಂಸ್ಥೆಗಳು ಪುರುಷ ಉದ್ಯೋಗಿಗಳಿಗೆ ಪಿತೃತ್ವ ರಜೆ ನೀಡುವುದನ್ನು ಪರಿಗಣಿಸಬೇಕು ಇದರಿಂದ ಅವರು ಕೂಡ ಮಕ್ಕಳನ್ನು ಬೆಳೆಸುವ ಜವಾಬ್ದಾರಿಯನ್ನು ಹಂಚಿಕೊಳ್ಳಬಹುದು ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.