ನವದೆಹಲಿ: ಕೊರೋನಾ ವಿರುದ್ಧ ವಿಶ್ವದಲ್ಲೇ ಅತೀದೊಡ್ಡ ಲಸಿಕಾ ಅಭಿಯಾನವನ್ನು ಆರಂಭಿಸಿರುವ ಭಾರತ ಇದೀಗ ಲಸಿಕೆ ನೀಡುವಿಕೆಯಲ್ಲಿ ಮಹತ್ವದ ಮೈಲಿಗಲ್ಲನ್ನು ಸಾಧಿಸಿದೆ. ವಯಸ್ಕ ಜನಸಂಖ್ಯೆಯ ಶೇ.97ರಷ್ಟು ಜನರು ಕೋವಿಡ್- 19 ಲಸಿಕೆಯ ಮೊದಲ ಡೋಸ್ ಪಡೆದುಕೊಂಡಿದ್ದಾರೆ.
ಆರೋಗ್ಯ ಸಚಿವ ಮನ್ಸುಖ್ ಮಾಂಡವಿಯಾ ಈ ಬಗ್ಗೆ ಮಾಹಿತಿಯನ್ನು ನೀಡಿದ್ದಾರೆ. ಟ್ವೀಟ್ ಮಾಡಿರುವ ಅವರು, ರಾಷ್ಟ್ರವು ಶೇ.100ರಷ್ಟು ಮೊದಲ ಡೋಸ್ ಮೈಲಿಗಲ್ಲು ಸಾಧಿಸುವತ್ತ ವೇಗವಾಗಿ ಸಾಗುತ್ತಿದೆ ಎಂದು ಹೇಳಿದ್ದಾರೆ.
‘ಸಬ್ಕಾ ಪ್ರಯಾಸ್’ ಮೂಲಕ ವಿಶ್ವದ ಅತಿದೊಡ್ಡ ಲಸಿಕೆ ಅಭಿಯಾನವು ಶಕ್ತಿಯಿಂದ ಬಲದತ್ತ ಸಾಗುತ್ತಿದೆ ಎಂದು ಅವರು ಹೇಳಿದ್ದಾರೆ.
“15-18 ವರ್ಷ ವಯಸ್ಸಿನ ಶೇ.74 ರಷ್ಟು ಜನರು ಕೋವಿಡ್-19 ಲಸಿಕೆಯ ಮೊದಲ ಡೋಸ್ ಅನ್ನು ಪಡೆದಿದ್ದಾರೆ ಮತ್ತು ಈ ಜನಸಂಖ್ಯೆಯ ಶೇ.39 ರಷ್ಟು ಜನರು ಎರಡೂ ಡೋಸ್ ಪಡೆದುಕೊಂಡಿದ್ದಾರೆ” ಎಂದು ಸಚಿವಾಲಯ ಮಾಹಿತಿ ನೀಡಿದೆ.
ಲಸಿಕೆಯಿಂದಾಗಿ ಭಾರತವು ಗಣನೀಯವಾಗಿ ಕಡಿಮೆ ಸಂಖ್ಯೆಯ ಕೋವಿಡ್-19 ಸಾವುಗಳಿಗೆ ಸಾಕ್ಷಿಯಾಗಿದೆ ಎಂದು ಸಚಿವಾಲಯ ತಿಳಿಸಿದೆ.
शत-प्रतिशत पहली डोज के लक्ष्य की तरफ बढ़ते कदम।
97% से अधिक वयस्क जनसंख्या को लगी वैक्सीन की पहली डोज।
Rapidly marching towards achieving 100% first dose mark.
With 'Sabka Prayas', the world's largest vaccination drive going from strength to strength!#SabkoVaccineMuftVaccine pic.twitter.com/xBxyFXWy4M
— Dr Mansukh Mandaviya (@mansukhmandviya) March 3, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.