ನವದೆಹಲಿ: ‘ಬಾಲಕೋಟ್ ಏರ್ ಸ್ಟ್ರೈಕ್’ ನಡೆದು ಇಂದಿಗೆ 3 ವರ್ಷಗಳು ಸಂದಿವೆ. 26 ಫೆಬ್ರವರಿ 2019 ಭಾರತಕ್ಕೆ ಒಂದು ಮಹತ್ವದ ದಿನವಾಗಿತ್ತು. 40 ಸಿಆರ್ಪಿಎಫ್ ಯೋಧರ ಹುತಾತ್ಮತೆಗೆ ಪ್ರತಿಕಾರ ತೀರಿಸಿದ ದಿನವಾಗಿತ್ತು. ಆ ದಿನ ಮುಂಜಾವಿನಲ್ಲಿ ಭಾರತೀಯ ವಾಯುಸೇನಾ ಯುದ್ಧವಿಮಾನಗಳು ಪಾಕಿಸ್ಥಾನದ ಭಯೋತ್ಪಾದಕ ಶಿಬಿರದ ಮೇಲೆ ಬಾಂಬ್ ದಾಳಿ ಮಾಡಿದವು.
ಈ ಏರ್ ಸ್ಟ್ರೈಕ್ ಭಾರತವು ಶತ್ರುವಿನ ದಾಳಿಗೆ ಘೋರ ಕ್ರಮಗಳ ಮೂಲಕ ಪ್ರತೀಕಾರ ತೀರಿಸುತ್ತದೆ ಎಂಬುದಕ್ಕೆ ಪುರಾವೆಯಾಗಿತ್ತು.
ಜೈಶೆ ಮತ್ತು ಇತರ ಭಯೋತ್ಪಾದಕ ಸಂಘಟನೆಗಳಿಗೆ ಬಾಲಕೋಟ್ ಶಿಬಿರವು ಪ್ರಮುಖ ತರಬೇತಿ ಕೇಂದ್ರವಾಗಿತ್ತು ಮತ್ತು ಅಲ್ಲಿ ತರಬೇತಿ ನೀಡಲು ಭಯೋತ್ಪಾದಕ ತರಬೇತುದಾರರು ಮತ್ತು ಸೌಲಭ್ಯಗಳ ಹಲವಾರು ರಚನೆಗಳನ್ನು ಇದ್ದವು.
ಹೀಗಾಗಿ ಭಾರತೀಯ ವಾಯುಸೇನೆ ಪಾಕಿಸ್ತಾನದ ಖೈಬರ್ ಪಖ್ತಂಖ್ವಾ ಪ್ರಾಂತ್ಯದಲ್ಲಿ ಬಾಲಕೋಟ್-ಆಧಾರಿತ ಜೈಶ್-ಇ-ಮೊಹಮ್ಮದ್ (ಜೆಮ್) ಭಯೋತ್ಪಾದಕ ಶಿಬಿರವನ್ನು ಗುರಿಪಡಿಸಿ ದಾಳಿ ನಡೆಸಿತ್ತು. ಈ ದಾಳಿಯಲ್ಲಿ ಸಾಕಷ್ಟು ಉಗ್ರ ಶಿಬಿರಗಳು ನಾಶವಾಗಿವೆ ಮತ್ತು ಅನೇಕ ಉಗ್ರರು ಮೃತರಾಗಿದ್ದಾರೆ ಎಂದು ಭಾರತ ಸರ್ಕಾರದ ಮೂಲಗಳು ತಿಳಿಸಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.