ನವದೆಹಲಿ: “ಮಿಷನ್ ಜೀವನ್ ರಕ್ಷಾ” ಅಡಿಯಲ್ಲಿ 2022ರ ಮೊದಲ ತಿಂಗಳಿನಲ್ಲಿ ಭಾರತೀಯ ರೈಲ್ವೆಯ ರೈಲ್ವೇ ರಕ್ಷಣಾ ಪಡೆ (RPF) 42 ಜನರನ್ನು ಪ್ರಾಣಾಪಾಯದಿಂದ ಉಳಿಸಿದೆ. ಅಲ್ಲದೇ ಆರೈಕೆ ಮತ್ತು ರಕ್ಷಣೆಯ ಅಗತ್ಯವಿದ್ದ 1045 ಮಕ್ಕಳನ್ನು ರಕ್ಷಿಸಿದೆ ಮತ್ತು ದೇಶದ ಪ್ರಮುಖ ರೈಲು ನಿಲ್ದಾಣಗಳಲ್ಲಿ ಮಹಿಳೆಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳಲು ಹಲವಾರು ಕ್ರಮಗಳನ್ನು ಕೈಗೊಂಡಿದೆ.
ರೈಲ್ವೇ ರಕ್ಷಣಾ ಪಡೆಯ ಇತ್ತೀಚಿನ ಕಾರ್ಯಕ್ಷಮತೆ ವರದಿಯಲ್ಲಿ ಈ ಅಂಶಗಳು ಬಹಿರಂಗವಾಗಿದೆ.
ಪ್ರಸ್ತುತ “ಮಿಷನ್ ಜೀವನ್ ರಕ್ಷಾ” ಅಡಿಯಲ್ಲಿ ಮಿಷನ್ ಮೋಡ್ನಲ್ಲಿ ರೈಲ್ವೇ ರಕ್ಷಣಾ ಪಡೆ ಸಿಬ್ಬಂದಿ ಕರ್ತವ್ಯ ಮಾಡುತ್ತಿದ್ದಾರೆ. 2022 ರ ಜನವರಿಯಲ್ಲಿ ಆರ್ಪಿಎಫ್ ಸಿಬ್ಬಂದಿ ಮಿಷನ್ ಅಡಿ 20 ಪುರುಷರು ಮತ್ತು 22 ಮಹಿಳೆಯರು ಸೇರಿದಂತೆ 42 ಜನರನ್ನು ಮಿಷನ್ ಅಡಿಯಲ್ಲಿ ಉಳಿಸಿದ್ದಾರೆ ಎಂದು ರೈಲ್ವೆ ಸಚಿವಾಲಯದ ವರದಿ ತಿಳಿಸಿದೆ.
ರೈಲ್ವೆ ಆಸ್ತಿ, ಪ್ರಯಾಣಿಕರ ಪ್ರದೇಶ, ಪ್ರಯಾಣಿಕರು ಮತ್ತು ಅದಕ್ಕೆ ಸಂಬಂಧಿಸಿದ ವಿಷಯಗಳ ಭದ್ರತೆಯ ಜವಾಬ್ದಾರಿಯನ್ನು ವಹಿಸಿಕೊಂಡು ಕರ್ತವ್ಯ ಮಾಡುತ್ತಿರುವ ರೈಲ್ವೆ ರಕ್ಷಣಾ ಪಡೆಯ ಸಿಬ್ಬಂದಿ, ಅಗತ್ಯವಿರುವ ಪ್ರಯಾಣಿಕರಿಗೆ ಎಲ್ಲಾ ರೀತಿಯ ಸಹಾಯವನ್ನು ಒದಗಿಸುತ್ತಿದ್ದಾರೆ ಮತ್ತು ಆರೈಕೆ ಮತ್ತು ರಕ್ಷಣೆಯ ಅಗತ್ಯವಿರುವ ಮಹಿಳೆಯರು ಮತ್ತು ಮಕ್ಕಳನ್ನು ರಕ್ಷಿಸುತ್ತಿದ್ದಾರೆ.
ವಿವಿಧ ರೈಲು ನಿಲ್ದಾಣಗಳು ಮತ್ತು ರೈಲ್ವೆ ಪ್ರದೇಶಗಳಲ್ಲಿ ರಾತ್ರಿ ಮತ್ತು ಹಗಲು ಎನ್ನದೆ ಕರ್ತವ್ಯ ಮಾಡುತ್ತಿರುವ ಸಿಬ್ಬಂದಿಗಳು ಪ್ರಾಣವನ್ನೇ ಪಣಕ್ಕಿಟ್ಟು ಓಡುವ ರೈಲುಗಳ ಚಕ್ರಗಳ ಅಡಿಯಲ್ಲಿ ಬೀಳುವ ಹಂತದಲ್ಲಿರುವ ವ್ಯಕ್ತಿಗಳ ಜೀವವನ್ನು ಅನೇಕ ಬಾರಿ ರಕ್ಷಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.