ನವದೆಹಲಿ: ಉತ್ತರಾಖಂಡದಲ್ಲಿ ಚುನಾವಣೆ ಗೆದ್ದು ಮತ್ತೆ ಸರ್ಕಾರ ರಚಿಸಿದ ಬಳಿಕ ಏಕರೂಪ ನಾಗರಿಕ ಸಂಹಿತೆಯನ್ನು ಶೀಘ್ರವಾಗಿ ಜಾರಿಗೊಳಿಸಲಾಗುವುದು ಎಂದು ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ದಾಮಿ ಹೇಳಿದ್ದಾರೆ.
ಏಕರೂಪ ನಾಗರಿಕ ಸಂಹಿತೆಯಿಂದ ಮದುವೆ, ವಿಚ್ಛೇಧನ, ಆಸ್ತಿ ಹಕ್ಕು, ಪತ್ರಾರ್ಜಿತ ಹಕ್ಕು ಎಲ್ಲಾ ಜಾತಿ ಜನಾಂಗದವರಿಗೂ ಒಂದೇ ತರನಾಗಿ ಇರುತ್ತದೆ ಎಂದಿದ್ದಾರೆ.
“ಉತ್ತರಾಖಂಡದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಶೀಘ್ರವಾಗಿ ಜಾರಿಗೊಳಿಸುವುದರಿಂದ ರಾಜ್ಯದ ಪ್ರತಿಯೊಬ್ಬರಿಗೂ ಸಮಾನ ಹಕ್ಕುಗಳು ಸಿಗುತ್ತದೆ. ಇದು ಸಾಮಾಜಿಕ ಸಾಮರಸ್ಯವನ್ನು ಹೆಚ್ಚಿಸುತ್ತದೆ, ಲಿಂಗ ನ್ಯಾಯವನ್ನು ಹೆಚ್ಚಿಸುತ್ತದೆ, ಮಹಿಳಾ ಸಬಲೀಕರಣವನ್ನು ಬಲಪಡಿಸುತ್ತದೆ ಮತ್ತು ರಾಜ್ಯದ ಅಸಾಮಾನ್ಯ ಸಾಂಸ್ಕೃತಿಕ-ಆಧ್ಯಾತ್ಮಿಕ ಗುರುತು ಮತ್ತು ಪರಿಸರವನ್ನು ರಕ್ಷಿಸಲು ಸಹಾಯ ಮಾಡುತ್ತದೆ” ಎಂದು ಹೇಳಿದ್ದಾರೆ.
ನಾನು ಮಾಡಲಿರುವ ಘೋಷಣೆಯು ನನ್ನ ಪಕ್ಷದ ನಿರ್ಣಯವಾಗಿದೆ ಮತ್ತು ಹೊಸ ಬಿಜೆಪಿ ಸರ್ಕಾರ ರಚನೆಯಾದ ತಕ್ಷಣ ಭರವಸೆ ಈಡೇರಿಸಲಾಗುವುದು. ‘ದೇವಭೂಮಿ’ಯ ಸಂಸ್ಕೃತಿ ಮತ್ತು ಪರಂಪರೆಯನ್ನು ಅಖಂಡವಾಗಿ ಕಾಪಾಡುವುದು ನಮ್ಮ ಆದ್ಯ ಕರ್ತವ್ಯ, ಇದಕ್ಕೆ ನಾವು ಬದ್ಧರಾಗಿದ್ದೇವೆ ಎಂದಿದ್ದಾರೆ.
Implementing Uniform Civil Code in Uttarakhand at the earliest will boost equal rights for everyone in state. It’ll enhance social harmony, boost gender justice, strengthen women empowerment&help protect the extraordinary cultural-spiritual identity & environment of the state: CM pic.twitter.com/uK8YhFbwtu
— ANI UP/Uttarakhand (@ANINewsUP) February 12, 2022
The announcement I’m going to make is a resolution of my party & will be fulfilled as soon as the new BJP govt is formed. To keep the culture and heritage of ‘Devbhoomi’ intact is our prime duty, we are committed to this: CM Pushkar S Dhami, in Khatima #UttarakhandElections2022 pic.twitter.com/CpQoktt2Ml
— ANI UP/Uttarakhand (@ANINewsUP) February 12, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.