ನವದೆಹಲಿ: 2014 ರ ನಂತರ 24,000 ರೂಟ್ ಕಿಲೋಮೀಟರ್ (RKM) ಉದ್ದದ ಬ್ರಾಡ್ ಗೇಜ್ ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ ಎಂದು ಸರ್ಕಾರ ಶುಕ್ರವಾರ ಸಂಸತ್ತಿಗೆ ತಿಳಿಸಿದೆ, 2014 ರ ಮೊದಲು 21,000 RKM ಉದ್ದದ ಮಾರ್ಗಗಳು ವಿದ್ಯುದ್ದೀಕರಿಸಲ್ಪಟ್ಟಿದ್ದವು.
ರಾಜ್ಯಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರ ನೀಡಿದ ಕೇಂದ್ರ ರೈಲ್ವೇ ಸಚಿವ ಅಶ್ವಿನಿ ವೈಷ್ಣವ್ ಅವರು, “ಸ್ವಾತಂತ್ರ್ಯದ ನಂತರ 2013-14 ನೇ ವರ್ಷದವರೆಗೆ 21,413 ರೂಟ್ ಕಿಲೋಮೀಟರ್ (ಆರ್ಕೆಎಂ) ಒಟ್ಟು ಬ್ರಾಡ್ ಗೇಜ್ (ಬಿಜಿ) ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ” ಎಂದು ಹೇಳಿದ್ದಾರೆ.
“2013-14 ರಿಂದ 2020-21 ರವರೆಗೆ 24,080 ರೂಟ್ ಕಿಲೋಮೀಟರ್ (RKM) ಒಟ್ಟು ಬ್ರಾಡ್ ಗೇಜ್ (BG) ಮಾರ್ಗಗಳನ್ನು ವಿದ್ಯುದ್ದೀಕರಿಸಲಾಗಿದೆ” ಎಂದು ಅವರು ಮಾಹಿತಿ ನೀಡಿದ್ದಾರೆ.
ವಿದ್ಯುದೀಕರಣವು ಹೆಚ್ಚಾಗಿ ಆಮದು ಮಾಡಿಕೊಳ್ಳುವ ಕಚ್ಚಾ ತೈಲದ ಮೇಲೆ ರಾಷ್ಟ್ರದ ಅವಲಂಬನೆಯನ್ನು ಕಡಿಮೆ ಮಾಡುತ್ತದೆ, ಆ ಮೂಲಕ ರಾಷ್ಟ್ರದ ಇಂಧನ ಭದ್ರತೆಯನ್ನು ಹೆಚ್ಚಿಸುತ್ತದೆ, ಜೊತೆಗೆ, ಸ್ವಚ್ಛ ಮತ್ತು ಹಸಿರು ಪರಿಸರಕ್ಕೆ ಕೊಡುಗೆ ನೀಡುತ್ತದೆ ಎಂದಿದ್ದಾರೆ.
ಕೊಂಕಣ ರೈಲ್ವೆಯ 740 RKM ಸೇರಿದಂತೆ ಭಾರತೀಯ ರೈಲ್ವೆ ಒಟ್ಟು 64,689 RKM ಬ್ರಾಡ್ ಗೇಜ್ (BG) ಜಾಲವನ್ನು ಹೊಂದಿದೆ. ಇವುಗಳಲ್ಲಿ, 45,000 RKM ಗಿಂತ ಹೆಚ್ಚು ಅಂದರೆ ಸುಮಾರು 71 ಪ್ರತಿಶತವು ಈಗಾಗಲೇ ಮಾರ್ಚ್ 2021 ರವರೆಗೆ ವಿದ್ಯುದ್ದೀಕರಿಸಲ್ಪಟ್ಟಿದೆ.
ಉಳಿದ ಬ್ರಾಡ್ ಗೇಜ್ ಮಾರ್ಗಗಳಲ್ಲಿ ವಿವಿಧ ಹಂತಗಳಲ್ಲಿ ವಿದ್ಯುದ್ದೀಕರಣ ಕಾರ್ಯ ಪ್ರಗತಿಯಲ್ಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.