ತ್ರಿಶೂರ್: ಕಳೆದ ತಿಂಗಳು ಕೇರಳದ ತ್ರಿಶೂರ್ನ ಹಿರಿಯ ಮಹಿಳೆಯೊಬ್ಬರು ಗಣರಾಜ್ಯೋತ್ಸವ ದಿನದಂದು ತನ್ನ ಚಿಕ್ಕ ಗುಡಿಸಲಿನ ಮುಂದೆ ಮೊಮ್ಮಕ್ಕಳ ಸಮ್ಮುಖದಲ್ಲಿ ರಾಷ್ಟ್ರಧ್ವಜಾರೋಹಣ ಮಾಡಿದ ವಿಡಿಯೋ ವೈರಲ್ ಆಗಿತ್ತು. ಇದೀಗ ಆ ಅಜ್ಜಿ 69 ವರ್ಷದ ಅಮ್ಮಿಣಿ ಅಮ್ಮ ಅವರನ್ನು ಭಾರತೀಯ ನೌಕಾಪಡೆ ಬುಧವಾರ ಸನ್ಮಾನಿಸಿದೆ.
ತ್ರಿಶೂರ್ನ ಚೇರ್ಪುವಿನ ಸಿಎನ್ಎನ್ ಹೈಸ್ಕೂಲ್ನ ಏಳು ವಿದ್ಯಾರ್ಥಿಗಳು ಮತ್ತು ಅವರ ಪೋಷಕರು ಮತ್ತು ಶಿಕ್ಷಕರೊಂದಿಗೆ ಅಮ್ಮಿಣಿ ಅಮ್ಮ ಅವರನ್ನು ಕೊಚ್ಚಿಯಲ್ಲಿರುವ ದಕ್ಷಿಣ ನೇವಲ್ ಕಮಾಂಡ್ ಪ್ರಧಾನ ಕಚೇರಿಗೆ ಕರೆದುಕೊಂಡು ಹೋಗಿ ಅವರಿಗೆ ಗೌರವಿಸಲಾಯಿತು.
ಚೆರುಚೆನಂ ಮೂಲದ ವೆಲ್ಲುನ್ನಪರಂಬಿಲ್ ವಿಜಯನ್ ಅವರ ತಾಯಿ ಅಮ್ಮಿಣಿ ಅಮ್ಮ ತಮ್ಮ ಮೊಮ್ಮಕ್ಕಳು ಜೊತೆಗೂಡಿ ಸಣ್ಣ ಗುಡಿಸಲಿನ ಮುಂದೆ ಧ್ವಜಾರೋಹಣ ಮಾಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಕೂಲಿ ಕೆಲಸಗಾರ ವಿಜಯನ್ ಐದು ವರ್ಷಗಳ ಹಿಂದೆ ತಾಳೆಗರಿ ಹಾಗೂ ತೆಂಗಿನ ಎಲೆಗಳಿಂದ ಮನೆ ಕಟ್ಟಿಕೊಂಡಿದ್ದರು.
ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಅಮ್ಮಿಣಿ ಅಮ್ಮನ ಮೊಮ್ಮಕ್ಕಳು ವಿವೇಕ್, ವೈಗಾ, ಶ್ರೀಲಕ್ಷ್ಮಿ, ಶಿವಹರಿ ಮತ್ತು ಶಿವಾತ್ಮಿಕಾ. ಇವರೆಲ್ಲರೂ ಚೇರ್ಪುವಿನ ಸಿಎನ್ಎನ್ ಪ್ರೌಢಶಾಲೆಯ ವಿದ್ಯಾರ್ಥಿಗಳು ಮತ್ತು ಅವರ ಶಾಲೆಯ ಮುಖ್ಯೋಪಾಧ್ಯಾಯ ಪ್ರವೀಣ್ ಕುಮಾರ್ ಅವರನ್ನು ದಕ್ಷಿಣ ನೇವಲ್ ಕಮಾಂಡ್ಗೆ ಕೊಚ್ಚಿ ಪ್ರವಾಸಕ್ಕೆ ಆಹ್ವಾನಿಸಲಾಗಿತ್ತು.
“ಅಮೃತ್ ಮಹೋತ್ಸವದ ಅಂಗವಾಗಿ, ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ವೀಡಿಯೊದಲ್ಲಿ ಮಕ್ಕಳ ಉತ್ಸಾಹವನ್ನು ನೋಡಿದ ಭಾರತೀಯ ನೌಕಾಪಡೆಯು ಕೊಚ್ಚಿಯ ನೌಕಾನೆಲೆಗೆ ಭೇಟಿ ನೀಡುವಂತೆ ಅವರನ್ನು ಆಹ್ವಾನಿಸಿದೆ” ಎಂದು ಹೇಳಿಕೆ ತಿಳಿಸಿದೆ.
ಅತಿಥಿಗಳಿಗೆ ಐಎನ್ಎಸ್ ಮಗರ್ ಮತ್ತು ಐಎನ್ಎಸ್ ದ್ರೋಣಾಚಾರ್ಯ ಕಮಾಂಡಿಂಗ್ ಆಫೀಸರ್ ಮತ್ತು ಸಿಬ್ಬಂದಿ ನೌಕಾಪಡೆಯ ಉಡುಗೊರೆಗಳು ಮತ್ತು ಸ್ಮರಣಿಕೆಗಳನ್ನು ನೀಡಿ ಗೌರವಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.