ಬಂಟ್ವಾಳ : ಕಲ್ಲಡ್ಕ ಹಾಲು ಉತ್ಪಾದಕರ ಸಂಘ ನಿಯಮಿತ ಕಲ್ಲಡ್ಕ ಇದರ 2014-15 ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿಯವರ ಅಧ್ಯಕ್ಷತೆಯಲ್ಲ್ಲಿ ಜರುಗಿತು. ಕು.ಅನುಷ್ಯಾ ನಾಯಕ್ ಪ್ರಾರ್ಥನೆ ಮಾಡಿ ಸಂಘದ ಕಾರ್ಯದರ್ಶಿ ರವಿನಾಥ.ಕೆ ರವರು ಸ್ವಾಗತಿಸಿ ವರವಿ ಮಂಡಿಸಿದರು.
ಸಂಘವು ವರದಿ ವರ್ಷದಲ್ಲ್ಲಿ 4,86,916/- ರೂ ನಿವ್ವಳ ಲಾಭ ಗಳಸಿದ್ದು ಸಂಘದ ಸದಸ್ಯರಿಗೆ ಶೇ.20 ಡಿವಿಡೆಂಟು ಮತ್ತು ನಿಯಮ ಪ್ರಕಾರ 2,32,624/- ರೂಪಾಯಿಯನ್ನು ಬೋನಸ್ ರೂಪzದಲ್ಲಿ ನೀಡುವುದಾಗಿ ನಿಶ್ಚಯಿಸಲಾಯಿತು. ಜಿಲ್ಲಾ ಒಕ್ಕೂಟದ ವಿಸ್ತರಣಾಧಿಕಾರಿಯಾದ ಕು. ಸರೋಜಿನಿ ಸಂಘದ ಪ್ರಗತಿಗೆ ಮತ್ತು ಉತ್ಪಾದಕರಿಗೆ ಲಾಭ ದೊರಕಲು ಉತ್ತಮ ಗುಣಮಟ್ಟದ ಹಾಲನ್ನು ಸಂಘಕ್ಕೆ ಸರಬರಾಜು ಮಾಡುವ ಬಗ್ಗೆ ಮಾರ್ಗದರ್ಶನ ಮಾಡಿದರು.
ಪ್ರಸಕ್ತ ಸಂಘದ ಕಾರ್ಯದರ್ಶಿ ಕೆ.ರವಿನಾಥ ಇವರು ಸೇವೆಯಿಂದ ನಿವೃತ್ತಿಗೊಂಡಿದ್ದು ಇವರ 25 ವರ್ಷಗಳಿಂದಲೂ ಹೆಚ್ಚಿನ ಸೇವೆಯನ್ನು ಗುರುತಿಸಿ ಸಂಘದ ವತಿಯಿಂದ ಅಧ್ಯಕ್ಷರಾದ ಕೆ.ಪದ್ಮನಾಭ ಕೊಟ್ಟಾರಿಯವರು ಸನ್ಮಾನಿಸಿ ಅವರ ಸೇವೆಯನ್ನು ಶ್ಲಾಘಿಸಿದರು. ಸಂಘವು ಕಳೆದ 30 ವರ್ಷಗಳಂದಲೂ ಲಾಭಯುತವಾಗಿ ನಡೆಯುತ್ತಿದ್ದು ಇದಕ್ಕೆ ಸರ್ವಸದಸ್ಯರ ಸಹಕಾರವೇ ಕಾರಣವಾಗಿರುತ್ತದೆ.
ಮುಂದೆಯು ಸಂಘದ ಪ್ರಗತಿಗೆ ಸದಸ್ಯರು ಗೋಸಾಕಾಣಿಕೆಯನ್ನು ಹೆಚ್ಚಿಸುವುದಲ್ಲದೇ ಹಾಲಿನ ಗುಣಮಟ್ಟವನ್ನು ಕಾಯ್ದುಕೊಂಡು ಸಂಘಕ್ಕೆ ಸರಬರಾಜು ಮಾಡಿದಾಗ ಸಂಘವು ಮತ್ತು ಸದಸ್ಯರು ಪ್ರಗತಿ ಹೊಂದಲು ಸಾಧ್ಯವೆಂದರು. ಪ್ರಸ್ತುತ ಸಂಘದಲ್ಲಿನ ವಹಿವಾಟು ಸುಮಾರು 700 ಲೀ ಹಾಲು ಸರಬರಾಜಗುತ್ತಿದ್ದು ಇದನ್ನು 1000 ಲೀಟರ್ಗೆ ಹೆಚ್ಚಿಸುವಂತೆ ಸದಸ್ಯರನ್ನು ಒತ್ತಾಯಿಸಿ ಹೈನುಗಾರಿಕೆಗೆ ಉತ್ತೇಜನ ನೀಡುವರೆ ಕಡಿಮೆ ಬಡ್ಡಿಯಲ್ಲ್ಲಿ ಸಾಲ ಸೌಲಭ್ಯ ಒದಲಸುವ ಬಗ್ಗೆ ಭರವಸೆ ನೀಡಿದರು. ಸಂಘದ ಉಪಾಧ್ಯಕ್ಷರಾದ ರತ್ನಾಕರ ಪ್ರಭುರವರು ವಂದಿಸಿದರು
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.