ನವದೆಹಲಿ: ಗಣರಾಜ್ಯೋತ್ಸವದ ಔಪಚಾರಿಕ ಅಂತ್ಯವನ್ನು ಸೂಚಿಸುವ ‘ಬೀಟಿಂಗ್ ರಿಟ್ರೀಟ್’ ಸಮಾರಂಭವು ಶನಿವಾರ ನವದೆಹಲಿಯ ವಿಜಯ್ ಚೌಕ್ನಲ್ಲಿ ಜರುಗಿದೆ.
ಭಾರತದ ಸ್ವಾತಂತ್ರ್ಯದ 75 ವರ್ಷಗಳ ನೆನಪಿಗಾಗಿ, ಈ ವರ್ಷದ ಸಮಾರಂಭವು ಸುಮಾರು 1,000 ‘ಮೇಡ್ ಇನ್ ಇಂಡಿಯಾ’ ಡ್ರೋನ್ಗಳ ನಾವೆಲ್ ಡ್ರೋನ್ ಪ್ರದರ್ಶನಕ್ಕೆ ಸಾಕ್ಷಿಯಾಗಿದೆ. ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ದೆಹಲಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬೆಂಬಲದೊಂದಿಗೆ ಡ್ರೋನ್ ಪ್ರದರ್ಶನವನ್ನು ಸ್ಟಾರ್ಟಪ್ ‘ಬಾಟ್ಲ್ಯಾಬ್ ಡೈನಾಮಿಕ್ಸ್’ ಆಯೋಜಿಸಿದೆ.
ದೆಹಲಿಯ ವಿಜಯ್ ಚೌಕ್ನಲ್ಲಿ ಬೀಟಿಂಗ್ ರಿಟ್ರೀಟ್ ಸಮಾರಂಭದ ಭಾಗವಾಗಿ 1000 ಮೇಡ್ ಇನ್ ಇಂಡಿಯಾ ಡ್ರೋನ್ಗಳು ವಿಭಿನ್ನ ರಚನೆಗಳೊಂದಿಗೆ ಆಕರ್ಷಕ ಪ್ರದರ್ಶನ ನೀಡಿವೆ. ಸ್ವದೇಶಿ ತಂತ್ರಜ್ಞಾನದ ಮೂಲಕ ತಯಾರಿಸಲಾದ ಡ್ರೋನ್ಗಳು ಸಿಂಕ್ರೊನೈಸ್ ಮಾಡಿದ ಹಿನ್ನೆಲೆ ಸಂಗೀತದೊಂದಿಗೆ ಹಾರಿವೆ.
ಡ್ರೋನ್ ಪ್ರದರ್ಶನದ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಸಚಿವ ಜಿತೇಂದ್ರ ಸಿಂಗ್, “ಬೀಟಿಂಗ್ ರಿಟ್ರೀಟ್ ಸಮಾರಂಭದಲ್ಲಿ ಮೊದಲ ಬಾರಿಗೆ 1000 ಡ್ರೋನ್ಗಳು ಆಕಾಶವನ್ನು ಬೆಳಗಿಸಿದ್ದು ಹೆಮ್ಮೆಯ ಸಂಗತಿಯಾಗಿದೆ. ಯುಕೆ, ರಷ್ಯಾ ಮತ್ತು ಚೀನಾದ ನಂತರ ಭಾರತವು ಡ್ರೋನ್ ಪ್ರದರ್ಶನ ನೀಡಿದ ವಿಶ್ವದ 4 ನೇ ರಾಷ್ಟ್ರ” ಎಂದಿದ್ದಾರೆ.
Delhi: 1000 Made in India drones make different formations as part of the Beating Retreat ceremony at Vijay Chowk pic.twitter.com/4a30cu0qQu
— ANI (@ANI) January 29, 2022
#WATCH | The ‘Beating the Retreat’ ceremony, which marks the formal end of Republic Day celebrations, is being held at Vijay Chowk in Delhi. pic.twitter.com/Zzq3vmWGbj
— ANI (@ANI) January 29, 2022
#WATCH | 1000 Made in India drones make different formations as part of the Beating Retreat ceremony at Vijay Chowk, Delhi pic.twitter.com/aSrE5krh0R
— ANI (@ANI) January 29, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.