ನವದೆಹಲಿ: ಪರೀಕ್ಷಾ ಪೆ ಚರ್ಚಾದ 5 ನೇ ಆವೃತ್ತಿಯು ಫೆಬ್ರವರಿಯಲ್ಲಿ ನಡೆಯಲಿದ್ದು, ಇಂದು ನೋಂದಣಿಗೆ ಕೊನೆಯ ದಿನಾಂಕವಾಗಿದೆ.
ಪರೀಕ್ಷಾ ಪೆ ಚರ್ಚಾಯಲ್ಲಿ ಭಾಗವಹಿಸುವವರನ್ನು ಆಯ್ಕೆ ಮಾಡುವ ನಿಟ್ಟಿನಲ್ಲಿ 28ನೇ ಡಿಸೆಂಬರ್ 2021 ರಿಂದ 20ನೇ ಜನವರಿ 2022 ರವರೆಗೆ Mygov ಪೋರ್ಟಲ್ನಲ್ಲಿ ಸ್ಪರ್ಧೆ ಆಯೋಜನೆ ಮಾಡಲಾಗಿದೆ. ಈ ಕಾರ್ಯಕ್ರಮದ ಸ್ವರೂಪವನ್ನು 2021 ರಂತೆ ಈ ಬಾರಿಯೂ ಆನ್ಲೈನ್ ಮೋಡ್ನಲ್ಲಿ ನಡೆಸಲಾಗುತ್ತದೆ.
ಸೃಜನಶೀಲ ಬರವಣಿಗೆ ಸ್ಪರ್ಧೆಯನ್ನು https://innovateindia.mygov.in/ppc-2022/ ನಲ್ಲಿ ನಡೆಸಲಾಗಿದೆ. ಆಯ್ದ ವಿಜೇತರು ಕೇಳುವ ಪ್ರಶ್ನೆಗಳನ್ನು ಪರೀಕ್ಷಾ ಪೆ ಚರ್ಚಾ ಕಾರ್ಯಕ್ರಮದಲ್ಲಿ ಪ್ರದರ್ಶಿಸಲಾಗುತ್ತದೆ. 9 ರಿಂದ 12 ನೇ ತರಗತಿಯ ಶಾಲಾ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಪೋಷಕರನ್ನು ಆನ್ಲೈನ್ ಸ್ಪರ್ಧೆಯ ಮೂಲಕ ಆಯ್ಕೆ ಮಾಡಲಾಗುತ್ತದೆ.
ಪ್ರಧಾನಮಂತ್ರಿ ನರೇಂದ್ರ ಮೋದಿಯವರ ವಿಶಿಷ್ಟವಾದ ಸಂವಾದಾತ್ಮಕ ಕಾರ್ಯಕ್ರಮ ʼಪರೀಕ್ಷೆ ಪೇ ಚರ್ಚಾʼ ಆಗಿದ್ದು, ಇದರಲ್ಲಿ ವಿದ್ಯಾರ್ಥಿಗಳು, ಪೋಷಕರು, ಶಿಕ್ಷಕರು, ರಾಷ್ಟ್ರದಾದ್ಯಂತದ ಶಿಕ್ಷಕರು ಅವರೊಂದಿಗೆ ಸಂವಹನ ನಡೆಸುತ್ತಾರೆ. ವಿದೇಶದಿಂದಲೂ ಇದರಲ್ಲಿ ಭಾಗವಹಿಸುತ್ತಾರೆ. ಪರೀಕ್ಷೆಗಳಿಂದಾಗಿ ಉಂಟಾಗುವ ಒತ್ತಡದ ಬಗ್ಗೆ ಚರ್ಚಿಸಲು ಮತ್ತು ಅದರಿಂದ ಹೊರಬರಲು ಇಲ್ಲಿ ಪ್ರಧಾನಿಯವರು ಸಲಹೆಗಳನ್ನು ನೀಡುತ್ತಾರೆ. ಈ ಕಾರ್ಯಕ್ರಮವನ್ನು ಕಳೆದ ನಾಲ್ಕು ವರ್ಷಗಳಿಂದ ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, ಶಿಕ್ಷಣ ಸಚಿವಾಲಯವು ಯಶಸ್ವಿಯಾಗಿ ಆಯೋಜಿಸುತ್ತಾ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.