ನವದೆಹಲಿ: ಡಿಸೆಂಬರ್ ತಿಂಗಳ ವರೆಗೆ ಭಾರತದ ರಫ್ತು ವಾರ್ಷಿಕ ಆಧಾರದ ಮೇಲೆ ಶೇಕಡಾ 37ರಷ್ಟು ವೃದ್ಧಿಯಾಗಿದೆ. ಈ ಮೂಲಕ ಕಳೆದ ವರ್ಷದ ದಾಖಲೆಯನ್ನು ಮೀರಿದೆ ಎಂದು ವರದಿಗಳು ತಿಳಿಸಿವೆ.
2021 ರ ಎಪ್ರಿಲ್ ಡಿಸೆಂಬರ್ ಅವಧಿಯಲ್ಲಿ 300 ಶತಕೋಟಿ ಡಾಲರ್ ಮೌಲ್ಯದ ಸರಕು ಮಾಡಲಾಗಿದೆ. ಇದು 2020 21ರ ಒಟ್ಟು ಪ್ರಮಾಣವನ್ನು ಮೀರಿದ ದಾಖಲೆಯಾಗಿದೆ.
ಈ ಆರ್ಥಿಕ ವರ್ಷದಲ್ಲಿ ಭಾರತದ ಒಟ್ಟು ರಫ್ತು ಪ್ರಮಾಣ 400 ಶತಕೋಟಿ ಡಾಲರ್ ಮೀರಲಿದೆ ಎಂದು ಅಂದಾಜಿಸಲಾಗಿದೆ.
ಮತ್ತೊಂದು ಮಹತ್ವದ ಬೆಳವಣಿಗೆ ಎಂದರೆ ಯುಪಿಎ ಅವಧಿಯಲ್ಲಿ ಶೇ.1160ಗೆ ಏರಿದ್ದ ಚೀನಾದಿಂದ ಭಾರತ ಮಾಡಿಕೊಳ್ಳುತ್ತಿದ್ದ ಆಮದು ಪ್ರಮಾಣ ಎನ್ಡಿಎ ಅವಧಿಯಲ್ಲಿ ಶೇಕಡಾ 8ಕ್ಕೆ ಇಳಿಮುಖವಾಗಿದೆ.
ಎನ್ಡಿಎ ಅವಧಿಯಲ್ಲಿ ಚೀನಾದ ಜೊತೆಗಿದ್ದ ವಾಣಿಜ್ಯ ಕೊರತೆಯನ್ನು ಸಾಕಷ್ಟು ಪ್ರಮಾಣದಲ್ಲಿ ಇಳಿಸಲಾಗಿದೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ತಿಳಿಸಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.