ನವದೆಹಲಿ: ಭಾರತವು ತನ್ನ ಲಸಿಕೆ ಗುರಿಯನ್ನು ತಪ್ಪಿಸಿಕೊಂಡಿದೆ ಎಂದು ಪ್ರತಿಷ್ಠಿತ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆಯೊಂದು ಇತ್ತೀಚೆಗೆ ಪ್ರಕಟಿಸಿದ ಸುದ್ದಿ ಲೇಖನದ ವಿರುದ್ಧ ಭಾರತ ಸರ್ಕಾರ ಕಿಡಿಕಾರಿದೆ. ಇದು ತಪ್ಪುದಾರಿಗೆಳೆಯುವ ಲೇಖನವಾಗಿದ್ದು, ಭಾರತದ ಲಸಿಕಾ ಅಭಿಯಾನದ ಸಂಪೂರ್ಣ ಚಿತ್ರಣವನ್ನು ಪ್ರತಿನಿಧಿಸುವುದಿಲ್ಲ ಎಂದು ಹೇಳಿದೆ.
ಜಾಗತಿಕ ಸಾಂಕ್ರಾಮಿಕ ಕೋವಿಡ್-19 ವಿರುದ್ಧದ ಹೋರಾಟದಲ್ಲಿ ಭಾರತ ಮುಂಚೂಣಿಯಲ್ಲಿದೆ. ರಾಷ್ಟ್ರೀಯ ಕೋವಿಡ್-19 ವ್ಯಾಕ್ಸಿನೇಷನ್ ಕಾರ್ಯಕ್ರಮವು ಭಾರತದ ಗಣನೀಯ ಜನಸಂಖ್ಯೆಗೆ ಲಸಿಕೆ ನೀಡುವಲ್ಲಿ ಯಶಸ್ವಿಯಾಗಿದೆ. ಅನೇಕ ಅಭಿವೃದ್ಧಿ ಹೊಂದಿದ ಪಾಶ್ಚಿಮಾತ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಭಾರತ ಅತ್ಯಂತ ಯಶಸ್ವಿ ಮತ್ತು ದೊಡ್ಡ ಲಸಿಕೆ ಕಾರ್ಯಕ್ರಮವನ್ನು ಮುನ್ನಡೆಸಿದೆ ಎಂದು ಕೇಂದ್ರ ಆರೋಗ್ಯ ಸಚಿವ ಮನ್ಸೂಕ್ ಮಾಂಡವೀಯ ತಿಳಿಸಿದ್ದಾರೆ.
2021 ರ ಜನವರಿ 16 ರಂದು ರಾಷ್ಟ್ರೀಯ ಕೋವಿಡ್ ಲಸಿಕೆ ಅಭಿಯಾನ ಪ್ರಾರಂಭವಾದಾಗಿನಿಂದ ಭಾರತವು ತನ್ನ ಅರ್ಹ 90% ನಾಗರಿಕರಿಗೆ 1 ನೇ ಡೋಸ್ ಮತ್ತು 65% ಕ್ಕಿಂತ ಹೆಚ್ಚು ಜನರಿಗೆ 2 ನೇ ಡೋಸ್ ನೀಡಿದೆ. ಅಭಿಯಾನದಲ್ಲಿ, ಭಾರತವು 9 ತಿಂಗಳೊಳಗೆ 100 ಕೋಟಿ ಡೋಸ್ಗಳನ್ನು ನೀಡಿದೆ, ಒಂದೇ ದಿನದಲ್ಲಿ 2.51 ಕೋಟಿ ಡೋಸ್ಗಳನ್ನು ನೀಡಿದೆ ಮತ್ತು ಹಲವಾರು ಸಂದರ್ಭಗಳಲ್ಲಿ ದಿನಕ್ಕೆ 1 ಕೋಟಿ ಡೋಸ್ಗಳನ್ನು ನೀಡಿರುವುದು ಸೇರಿದಂತೆ ಪ್ರಪಂಚದಲ್ಲಿ ಅಭೂತಪೂರ್ವ ಹಲವಾರು ಮೈಲಿಗಲ್ಲುಗಳನ್ನು ಸಾಧಿಸಿದೆ.
ಇತರ ಅಭಿವೃದ್ಧಿ ಹೊಂದಿದ ರಾಷ್ಟ್ರಗಳಿಗೆ ಹೋಲಿಸಿದರೆ, ಭಾರತವು ತನ್ನ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಾದ್ಯಂತ 93.7 ಕೋಟಿಅರ್ಹ ವಯಸ್ಕ ನಾಗರಿಕರಿಗೆ ಲಸಿಕೆಯನ್ನು ನೀಡುವಲ್ಲಿ ಉತ್ತಮ ಕೆಲಸವನ್ನು ಮಾಡಿದೆ ಎಂದು ಸರ್ಕಾರ ಹೇಳಿದೆ.
India under PM @NarendraModi Ji's leadership is running the world's most successful & largest vaccination programme.
🇮🇳's #COVID19 💉 drive has performed better than many developed western nations with significantly low population base to vaccinate.
📖 https://t.co/tpgd9t9owH pic.twitter.com/4DhsuDzeMp
— Dr Mansukh Mandaviya (@mansukhmandviya) January 2, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.