ಮೈಸೂರು: ಪ್ರಧಾನಿ ನರೇಂದ್ರ ಮೋದಿ ಅವರು ಟ್ವಿಟರ್ನಲ್ಲಿ ಫಾಲೋ ಮಾಡುತ್ತಿರುವ ವ್ಯಕ್ತಿಗಳಿಗೆ ಹೊಸ ಸೇರ್ಪಡೆ ಮೈಸೂರಿನ ಕಾನೂನು ವಿದ್ಯಾರ್ಥಿನಿ ಪ್ರಜ್ಞಾ ಕಶ್ಯಪ್. ಈಗ ಅವರು ಮೋದಿ ಫಾಲೋ ಮಾಡುತ್ತಿರುವ 2,431 ವ್ಯಕ್ತಿಗಳಲ್ಲಿ ಒಬ್ಬರು.
22 ವರ್ಷದ ಪ್ರಜ್ಞಾ ಅವರು ತನ್ನ 11ನೇ ವಯಸ್ಸಿನಿಂದ ತಮ್ಮನ್ನು ತಾವು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ, ಆಕೆಯ ಕುಟುಂಬ ಕೂಡ ಮೂರು ತಲೆಮಾರುಗಳಿಂದ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದೆ.
ಮೋದಿ ತನ್ನನ್ನು ಟ್ವಿಟರ್ನಲ್ಲಿ ಫಾಲೋ ಮಾಡುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸುತ್ತಿರುವ ಪ್ರಜ್ಞಾ ಅವರು, “ಗೌರವಾನ್ವಿತ ಪ್ರಧಾನ ಮಂತ್ರಿಯವರು ನನ್ನನ್ನು ಫಾಲೋ ಮಾಡುತ್ತಿರುವುದು ನಿಜಕ್ಕೂ ನನಗೆ ದೊರೆತ ಆಶೀರ್ವಾದ. ಇದು ನನಗೆ ಆಶ್ಚರ್ಯ ಮತ್ತು ಹೆಮ್ಮೆಯ ಕ್ಷಣವಾಗಿದೆ ”ಎಂದು ಎಂದಿದ್ದಾರೆ.
ಪ್ರಜ್ಞಾ ಅವರು ಪ್ರಸ್ತುತ ಮೈಸೂರಿನ ವಿದ್ಯಾ ವಿಕಾಸ್ ಇನ್ಸ್ಟಿಟ್ಯೂಟ್ ಆಫ್ ಲೀಗಲ್ ಸ್ಟಡೀಸ್ನಲ್ಲಿ ಕಾನೂನು ಕೋರ್ಸ್ ಅನ್ನು ಮಾಡುತ್ತಿದ್ದಾರೆ. “ನನ್ನ ಇಡೀ ಕುಟುಂಬವು ಸಮಾಜದ ಉದ್ದೇಶಕ್ಕಾಗಿ ಕೆಲಸ ಮಾಡುತ್ತಿರುವುದರಿಂದ ನಾನು ಬಾಲ್ಯದಿಂದಲೂ ರಾಷ್ಟ್ರೀಯ ಆಸಕ್ತಿ ಮತ್ತು ಸಾಮಾಜಿಕ ಸೇವೆಯ ಕಾರ್ಯಕ್ರಮಗಳಲ್ಲಿ ನನ್ನನ್ನು ಸಕ್ರಿಯವಾಗಿ ತೊಡಗಿಸಿಕೊಂಡಿದ್ದೇನೆ” ಎಂದು ಆಕೆ ಹೇಳುತ್ತಾರೆ.
“ನಾನು ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡ ನಮ್ಮ ಕುಟುಂಬದ ಮೂರನೇ ತಲೆಮಾರಿನವಳು. ನನ್ನ ಅಜ್ಜ ಕೆ ವೆಂಕಟೇಶ್ ಸಕ್ರಿಯ ಆರ್ಎಸ್ಎಸ್ ಸ್ವಯಂ ಸೇವಕ. ಅವರು ರಾಜ್ಯದಲ್ಲಿ ಜನಸಂಘವನ್ನು ಸಂಘಟಿಸುವ ನಿಟ್ಟಿನಲ್ಲಿ ಕೆಲಸ ಮಾಡಿದರು. ನನ್ನ ತಂದೆ ಎನ್ ವಿ ಫಣೀಶ್ ಕಳೆದ 30 ವರ್ಷಗಳಿಂದ ಆರ್ಎಸ್ಎಸ್ ಮತ್ತು ವಿಎಚ್ಪಿ ಸ್ವಯಂಸೇವಕರಾಗಿದ್ದಾರೆ. ನನ್ನ ತಾಯಿ ಸುಧಾ ಫಣೀಶ್ ಆರ್ಎಸ್ಎಸ್ಗೆ ಸೇರಿದ ಎಬಿವಿಪಿ ಮತ್ತು ರಾಷ್ಟ್ರ ಸೇವಿಕಾ ಸಮಿತಿಗೆ ಸೇವೆ ಸಲ್ಲಿಸುತ್ತಿದ್ದಾರೆ” ಎಂದಿದ್ದಾರೆ.
ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಪರಿಹಾರ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಿರುವ ಇವರು, ಬಡ ಮತ್ತು ಹಿಂದುಳಿದ ಮಕ್ಕಳಿಗೆ ಉಚಿತ ಪಠ್ಯ ಪುಸ್ತಕ ನೀಡುವುದು ಮತ್ತು ತರಗತಿಗಳನ್ನು ನಡೆಸುತ್ತಾರೆ. “ಪ್ರಧಾನಿ ಮೋದಿ ಅವರು ನನ್ನ ಸ್ಫೂರ್ತಿ” ಎಂದು ಪ್ರಜ್ಞಾ ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
No words to express my happiness…. Humbled and honoured to be followed by our beloved PM @narendramodi ji
Thank you for this encouragement 🙏 pic.twitter.com/lrnGsYvfau— Prajna Kashyap (@KashyapPrajna) January 1, 2022
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.