ನವದೆಹಲಿ: ಆರು ತಿಂಗಳ ಅವಧಿಯ ಕಾಲಮಿತಿಯಲ್ಲಿ ಬಿಎಸ್-6 ಮಾನದಂಡಗಳನ್ನು ಅನುಸರಿಸುವ ಫ್ಲೆಕ್ಸ್-ಇಂಧನ ವಾಹನಗಳು ಮತ್ತು ಫ್ಲೆಕ್ಸ್-ಇಂಧನ ಸ್ಟ್ರಾಂಗ್ ಹೈಬ್ರಿಡ್ ಎಲೆಕ್ಟ್ರಿಕ್ ವಾಹನಗಳ ಉತ್ಪಾದನೆಯನ್ನು ಪ್ರಾರಂಭಿಸುವಂತೆ ಕೇಂದ್ರn ಸರ್ಕಾರವು ಭಾರತದಲ್ಲಿನ ಆಟೋಮೊಬೈಲ್ ತಯಾರಕರಿಗೆ ಸಲಹೆ ನೀಡಿದೆ.
ಇಂದು ಸರಣಿ ಟ್ವೀಟ್ ಮಾಡಿರುವ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿ, ಆತ್ಮನಿರ್ಭರ ಭಾರತವನ್ನು ಸಾಧಿಸುವ ಪ್ರಧಾನ ಮಂತ್ರಿಯವರ ದೃಷ್ಟಿಕೋನ ಮತ್ತು ಸಾರಿಗೆ ಇಂಧನವಾಗಿ ಎಥೆನಾಲ್ ಅನ್ನು ಉತ್ತೇಜಿಸುವ ಸರ್ಕಾರದ ನೀತಿಗೆ ಅನುಗುಣವಾಗಿ ಈ ಸಲಹೆಯನ್ನು ನೀಡಲಾಗಿದೆ ಎಂದು ಹೇಳಿದ್ದಾರೆ.
ಫ್ಲೆಕ್ಸ್-ಇಂಧನ ವಾಹನಗಳು ಶೇಕಡಾ 100 ರಷ್ಟು ಪೆಟ್ರೋಲ್ ಅಥವಾ ಶೇಕಡಾ 100 ರಷ್ಟು ಜೈವಿಕ ಎಥೆನಾಲ್ ಮತ್ತು ಅವುಗಳ ಮಿಶ್ರಣಗಳ ಸಂಯೋಜನೆಯಲ್ಲಿ ಚಲಿಸುವ ಸಾಮರ್ಥ್ಯವನ್ನು ಹೊಂದಿವೆ ಎಂದು ಅವರು ಹೇಳಿದರು.
ಈ ಕ್ರಮವು ವಾಹನಗಳಿಂದ ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತೀವ್ರವಾಗಿ ಕಡಿಮೆ ಮಾಡುತ್ತದೆ. 2030 ರ ವೇಳೆಗೆ ಒಟ್ಟು ಯೋಜಿತ ಇಂಗಾಲದ ಹೊರಸೂಸುವಿಕೆಯನ್ನು ಒಂದು ಶತಕೋಟಿ ಟನ್ಗಳಷ್ಟು ಕಡಿಮೆ ಮಾಡಲು COP-26 ನಲ್ಲಿ ಮಾಡಿದ ಬದ್ಧತೆಯನ್ನು ಅನುಸರಿಸಲು ಇದು ಭಾರತಕ್ಕೆ ಸಹಾಯ ಮಾಡುತ್ತದೆ ಎಂದು ಗಡ್ಕರಿ ಹೇಳಿದ್ದಾರೆ.
In order to substitute India’s import of petroleum as a fuel and to provide direct benefits to our farmers, we have now advised the Automobile Manufacturers in India to start manufacturing Flex Fuel Vehicles (FFV) and Flex Fuel Strong Hybrid Electric Vehicles (FFV-SHEV)..(1/4)
— Nitin Gadkari (@nitin_gadkari) December 27, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.