
ನವದೆಹಲಿ: ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಅವರು ಡಿಸೆಂಬರ್ 4 ರಂದು ಅಹಮದಾಬಾದ್ನ ಸಂಸ್ಕೃತಧಾಮ ಶಾಲೆಗೆ ಭೇಟಿ ನೀಡಲಿದ್ದಾರೆ ಮತ್ತು ಸಮತೋಲಿತ ಆಹಾರ, ಫಿಟ್ನೆಸ್ ಮತ್ತು ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವ ಪ್ರಧಾನಿ ನರೇಂದ್ರ ಮೋದಿ ಅವರ ಮಿಷನ್ ಅನ್ನು ಪ್ರಾರಂಭಿಸಲಿದ್ದಾರೆ.
ಆಗಸ್ಟ್ 16 ರಂದು ತಮ್ಮ ಅಧಿಕೃತ ನಿವಾಸದಲ್ಲಿ ಟೋಕಿಯೊ ಒಲಿಂಪಿಯನ್ಗಳನ್ನು ಭೇಟಿ ಮಾಡಿ ಅವರೊಂದಿಗೆ ಸಂವಾದ ನಡೆಸಿದ್ದ ಸಂದರ್ಭದಲ್ಲಿ ಈ ಮಿಷನ್ ಬಗ್ಗೆ ಒಲಿಂಪಿಯನ್ಗಳೊಂದಿಗೆ ಮೋದಿ ಚರ್ಚೆ ನಡೆಸಿದ್ದರು.
2023 ರ ಸ್ವಾತಂತ್ರ್ಯ ದಿನಾಚರಣೆಯ ವೇಳೆಗೆ ತಲಾ 75 ಶಾಲೆಗಳಿಗೆ ಭೇಟಿ ನೀಡಿ ಅಪೌಷ್ಟಿಕತೆಯ ವಿರುದ್ಧ ಜಾಗೃತಿ ಮೂಡಿಸಲು ಮತ್ತು ಶಾಲಾ ಮಕ್ಕಳೊಂದಿಗೆ ಕ್ರೀಡೆಯನ್ನು ಆಡುವಂತೆ ಭಾರತದ ಒಲಿಂಪಿಯನ್ಗಳು ಮತ್ತು ಪ್ಯಾರಾಲಿಂಪಿಯನ್ಗಳನ್ನು ಅವರು ಒತ್ತಾಯಿಸಿದ್ದರು.
ಭಾರತೀಯ ಕ್ರೀಡಾ ಪ್ರಾಧಿಕಾರ (SAI) ಮತ್ತು ಶಿಕ್ಷಣ ಸಚಿವಾಲಯವು ಮುಂದಿನ ಎರಡು ವರ್ಷಗಳಲ್ಲಿ ಇದನ್ನು ‘ಮೀಟ್ ದಿ ಚಾಂಪಿಯನ್ಸ್’ ಕಾರ್ಯಕ್ರಮವಾಗಿ ಮುನ್ನಡೆಸಲು ಯೋಜಿಸುತ್ತಿದೆ. ಮುಂದಿನ ವರ್ಷ ಜನವರಿಯಿಂದ ಒಲಿಂಪಿಯನ್ಗಳ ಶಾಲಾ ಭೇಟಿಗಳು ಪ್ರಾರಂಭವಾಗಲಿವೆ.
ದೇಶದ 75ನೇ ಸ್ವಾತಂತ್ರ್ಯೋತ್ಸವವನ್ನು ಆಚರಿಸುವ ‘ಆಜಾದಿ ಕಾ ಅಮೃತ್ ಮಹೋತ್ಸವದ ಅಂಗವಾಗಿ ಈ ಕಾರ್ಯಕ್ರಮ ನಡೆಯಲಿದೆ.
ಈ ಬಗ್ಗೆ ಟ್ವಿಟ್ ಮಾಡಿರುವ ಕೇಂದ್ರ ಸಚಿವ ಅನುರಾಗ್ ಠಾಕೂರ್ ಅವರು, “ನಮ್ಮ ಒಲಿಂಪಿಯನ್ಗಳು ಮತ್ತು ಪ್ಯಾರಾಲಿಂಪಿಯನ್ಗಳಿಗೆ ಶಾಲೆಗಳಿಗೆ ಭೇಟಿ ನೀಡಲು ಮತ್ತು ಸಮತೋಲಿತ ಆಹಾರ್, ಫಿಟ್ನೆಸ್, ಕ್ರೀಡೆ ಮತ್ತು ಹೆಚ್ಚಿನವುಗಳ ಪ್ರಾಮುಖ್ಯತೆಯ ಕುರಿತು ವಿದ್ಯಾರ್ಥಿಗಳೊಂದಿಗೆ ಸಂವಹನ ನಡೆಸಲು ಮೋದಿ ಅವರು ಸ್ಪಷ್ಟವಾದ ಕರೆಯನ್ನು ನೀಡಿದ್ದರು. ಡಿಸೆಂಬರ್ 4 ರಂದು ನೀರಜ್ ಛೋಪ್ರಾ ಅವರು ಈ ಮಿಷನ್ ಅನ್ನು ಪ್ರಾರಂಭಿಸಲು ಅಹಮದಾಬಾದ್ನ ಸಂಸ್ಕೃತಧಾಮ್ ಶಾಲೆಯಲ್ಲಿ ಇರುತ್ತಾರೆ” ಎಂದಿದ್ದಾರೆ.
PM Sh @narendramodi ji gave a clarion call to our Olympians & Paralympians to visit schools and interact with students on the importance of ‘santulit aahaar’,fitness,sports & more.
Starting Dec 4 @Neeraj_chopra1 will be at Sanskardham School in Ahmedabad to launch this mission. pic.twitter.com/xIgdHX7yA6
— Anurag Thakur (@ianuragthakur) December 1, 2021
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


