
ನವದೆಹಲಿ : ಭಾರತವು ಈ ವರ್ಷ ಎರಡಂಕಿಯ ಬೆಳವಣಿಗೆಯನ್ನು ಹೊಂದುವ ಸಾಧ್ಯತೆಯಿದೆ ಎಂದು ಮುಖ್ಯ ಆರ್ಥಿಕ ಸಲಹೆಗಾರ ಕೆ ವಿ ಸುಬ್ರಮಣಿಯನ್ ಹೇಳಿದ್ದಾರೆ.
ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊದಲಾರ್ಧದಲ್ಲಿ ಒಟ್ಟಾರೆ ಬೆಳವಣಿಗೆಯು ಶೇಕಡಾ 13.7 ರಷ್ಟಿದೆ, ಹೀಗಾಗಿ ನಂತರದ ತ್ರೈಮಾಸಿಕಗಳಲ್ಲಿ ಶೇಕಡಾ 6 ಕ್ಕಿಂತ ಸ್ವಲ್ಪ ಹೆಚ್ಚಿನ ಬೆಳವಣಿಗೆಯು ಈ ವರ್ಷಕ್ಕೆ ಎರಡಂಕಿಯ ಬೆಳವಣಿಗೆಯನ್ನು ತಂದುಕೊಡಲು ಸಾಧ್ಯವಾಗುತ್ತದೆ ಎಂದಿದ್ದಾರೆ.
2022-23ರಲ್ಲಿ ಭಾರತವು 6.5 ರಿಂದ 7 ಪ್ರತಿಶತದಷ್ಟು ಮತ್ತು ಅದರ ನಂತರ 7 ಪ್ರತಿಶತದಷ್ಟು ಬೆಳೆಯುವ ನಿರೀಕ್ಷೆಯಿದೆ ಎಂದು ಅವರು ಹೇಳಿದ್ದಾರೆ.
ಕೋವಿಡ್ ಬಿಕ್ಕಟ್ಟಿನ ನಂತರ ಔಪಚಾರಿಕ ವಲಯವು ಉತ್ತಮವಾಗಿ ಚೇತರಿಸಿಕೊಂಡು ಹೊರಹೊಮ್ಮಿದೆ ಎಂದ ಅವರು, ಅನೌಪಚಾರಿಕ ವಲಯದಲ್ಲಿ ಇನ್ನೂ ಕೋವಿಡ್ ಪರಿಣಾಮ ತುಸು ಮಟ್ಟಿಗೆ ಇದ್ದರೂ ಅದರ ಉತ್ಪಾದನೆಯ ಉತ್ತಮಗೊಳ್ಳುತ್ತಾ ಬರುತ್ತಿದೆ ಎಂದಿದ್ದಾರೆ.
ಹಣಕಾಸು ವಲಯವು ಪ್ರಬಲವಾಗಿ ಹೊರಹೊಮ್ಮಿದೆ ಮತ್ತು ಈ ದಶಕದಲ್ಲಿ ಭಾರತವು ಬೆಳೆಯಲೇಬೇಕು ಎಂಬುದನ್ನು ಉತ್ಪಾದನಾ ವಲಯವು ತೋರಿಸುತ್ತಿದೆ ಎಂದಿದ್ದಾರೆ.
2015-2019 ರ ನಡುವಿನ ಭಾರತದ ಒಟ್ಟು ವಾರ್ಷಿಕ ಬೆಳವಣಿಗೆ ದರವು ಉತ್ಪಾದನೆಯ ಒಟ್ಟು ಮೌಲ್ಯ, ಸರಕು ರಫ್ತು ಮತ್ತು ತಯಾರಿಸಿದ ಸರಕುಗಳ ರಫ್ತುಗಳ ವಿಷಯಗಳಲ್ಲಿ ಚೀನಾಕ್ಕಿಂತ ಹೆಚ್ಚಾಗಿದೆ ಎಂದಿದ್ದಾರೆ.
ಸುಬ್ರಮಣಿಯನ್ ಅವರು, ಪ್ರಸಕ್ತ ಹಣಕಾಸು ವರ್ಷದಲ್ಲಿ ಜಿಡಿಪಿಯು 6.8 ರಷ್ಟು ವಿತ್ತೀಯ ಕೊರತೆಯ ಗುರಿಯನ್ನು ಪೂರೈಸುವ ಸಾಧ್ಯತೆಯಿದೆ ಎಂದು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


