
ನವದೆಹಲಿ : ಭಾರತದ ಗಡಿಗಳನ್ನು ಸುರಕ್ಷಿತವಾಗಿಡಲು ಹಗಲು-ರಾತ್ರಿಯೆನ್ನದೆ ಕಾರ್ಯೋನ್ಮುಖವಾಗಿರುವ ಭಾರತೀಯರ ಹೆಮ್ಮೆಯ ಗಡಿ ಭದ್ರತಾ ಪಡೆ ಬಿಎಸ್ಎಫ್ ಇಂದು ತನ್ನ 57ನೇ ಸ್ಥಾಪನಾ ದಿನವನ್ನು ಆಚರಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಬಿಎಸ್ಎಫ್ ಯೋಧರಿಗೆ ಶುಭಾಶಯಗಳನ್ನು ಕೋರಿದ್ದಾರೆ.
ಟ್ವೀಟ್ ಮಾಡಿರುವ ಪ್ರಧಾನಿ ಮೋದಿ, “ಸ್ಥಾಪನಾ ದಿನದಂದು ಭಾರತದ ಬಿಎಸ್ಎಫ್ ಕುಟುಂಬಕ್ಕೆ ಶುಭಾಶಯಗಳು. ಶೌರ್ಯ ಮತ್ತು ವೃತ್ತಿಪರತೆಗಾಗಿ ಬಿಎಸ್ಎಫ್ ಅಪಾರವಾಗಿ ಗೌರವಿಸಲ್ಪಡುತ್ತದೆ. ಭಾರತವನ್ನು ಸುಭದ್ರಗೊಳಿಸುವಲ್ಲಿ ಈ ಪಡೆ ಮಹತ್ವದ ಕೊಡುಗೆ ನೀಡುತ್ತಿದೆ ಮತ್ತು ವಿಪತ್ತು ಹಾಗೂ ದುರ್ಘಟನೆಗಳು ಸಂದರ್ಭದಲ್ಲಿ ಮಾನವೀಯ ನೆರವು ನೀಡುವಲ್ಲಿಯೂ ಇದು ಮುಂಚೂಣಿಯಲ್ಲಿದೆ” ಎಂದಿದ್ದಾರೆ.
On their Raising Day, greetings to the @BSF_India family. BSF is widely respected for its courage and professionalism. The force makes a significant contribution towards securing India and is also at the forefront of many humanitarian efforts in times of crisis and calamities. pic.twitter.com/HybLzgsnDO
— Narendra Modi (@narendramodi) December 1, 2021
ಇದೇ ಮೊದಲ ಬಾರಿಗೆ ಬಿಎಸ್ಎಫ್ ಪಡೆಯು ಗಡಿಪ್ರದೇಶದಲ್ಲಿ ಸ್ಥಾಪನಾ ದಿನವನ್ನು ಆಚರಿಸಿಕೊಳ್ಳುತ್ತಿದೆ. ರಾಜಸ್ಥಾನದ ಜೈಸಲ್ಮೇರ್ ಗಡಿಯಲ್ಲಿ ಸಮಾರಂಭ ನಡೆಯಲಿದೆ.
ಡಿಸೆಂಬರ್ 1, 1965 ರಲ್ಲಿ ಸ್ಥಾಪನೆಗೊಂಡ ಬಿಎಸ್ಎಫ್ ಭಾರತದ ಭೂ ಗಡಿಯನ್ನು ಕಾಪಾಡುವ ಮತ್ತು ಅಂತರಾಷ್ಟ್ರೀಯ ಅಪರಾಧಗಳನ್ನು ತಡೆಗಟ್ಟುವ ಅರೆಸೈನಿಕ ಪಡೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


