
ನವದೆಹಲಿ: ಸ್ವಾತಂತ್ರ್ಯದ ಅಮೃತ ಮಹೋತ್ಸವವು ನಮಗೆ ಹೊಸತನ್ನು ಕಲಿಸುತ್ತಿದೆ ಮತ್ತು ಪ್ರೇರಣೆಯನ್ನೂ ನೀಡುತ್ತಿದೆ. ಇಂದು ದೇಶಾದ್ಯಂತ ಜನಸಾಮಾನ್ಯರಿಂದ ಹಿಡಿದು ಸರಕಾರ, ಪಂಚಾಯತ್, ಸಂಸತ್ತಿನವರೆಗೂ ಅಮೃತ ಮಹೋತ್ಸವದ ಆಚರಣೆ ನಡೆಯುತ್ತಿದೆ ಮತ್ತು ಅಭೂತಪೂರ್ವ ರೀತಿಯಲ್ಲಿ ಕಾರ್ಯಕ್ರಮಗಳು ನಡೆಯುತ್ತಿವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.
ಮಾಸಿಕ ಮನ್ ಕಿ ಬಾತ್ ಕಾರ್ಯಕ್ರಮದ ಮೂಲಕ ರಾಷ್ಟ್ರವನ್ನುದ್ದೇಶಿಸಿ ಮಾತನಾಡಿದ ಮೋದಿ, ಸ್ವಾತಂತ್ರ್ಯ ಪಡೆಯುವಲ್ಲಿ ಬುಡಕಟ್ಟು ಸಮುದಾಯಗಳ ಕೊಡುಗೆಯನ್ನು ಗಮನದಲ್ಲಿಟ್ಟುಕೊಂಡು ದೇಶವು ‘ಜನಜಾತಿ ಗೌರವ ಸಪ್ತಾಹ’ವನ್ನು ಆಚರಿಸಿದೆ ಎಂದು ಹೇಳಿದರು. ಇತ್ತೀಚೆಗೆ ದೆಹಲಿಯಲ್ಲಿ ‘ಆಜಾದಿ ಕಿ ಕಹಾನಿ – ಬಚ್ಚೋನ್ ಕಿ ಜುಬಾನಿ’ ಎಂಬ ಆಸಕ್ತಿದಾಯಕ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ, ಅಲ್ಲಿ ಮಕ್ಕಳು ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಕಥೆಗಳನ್ನು ವಿವರಿಸಿದರು ಎಂದಿದ್ದಾರೆ.
ಕಳೆದ ಮನ್ ಕಿ ಬಾತ್ ನಲ್ಲಿ ತಾವು ಮಾತನಾಡಿದ್ದ ಮೂರು ಸ್ಪರ್ಧೆಗಳನ್ನು ಪ್ರಧಾನಿ ಉಲ್ಲೇಖಿಸಿದರು. ಅದೆಂದರೆ ದೇಶಭಕ್ತಿ ಗೀತೆಯನ್ನು ರಚಿಸುವುದು, ದೇಶ ಭಕ್ತಿಗೆ ಸಂಬಂಧಿಸಿದ, ಸ್ವಾತಂತ್ರ್ಯ ಹೋರಾಟಕ್ಕೆ ಸಂಬಂಧಿಸಿದ ಘಟನೆಗಳ ರಂಗೋಲಿ ಬಿಡಿಸುವುದು ಮತ್ತು ನಮ್ಮ ಮಕ್ಕಳ ಮನಸ್ಸಿನಲ್ಲಿ ಭವ್ಯ ಭಾರತದ ಕನಸನ್ನು ಜಾಗೃತಗೊಳಿಸಲು ಲಾಲಿಹಾಡು ರಚಿಸುವುದು. ಈ ಸ್ಪರ್ಧೆಗಳಿಗಾಗಿ ನೀವು ನಮೂದುಗಳನ್ನು ಕಳುಹಿಸಿದ್ದೀರಿ, ಯೋಜನೆಗಳನ್ನು ಹಾಕಿಕೊಂಡಿದ್ದೀರಿ ಮತ್ತು ನಿಮ್ಮ ಸ್ನೇಹಿತರೊಂದಿಗೆ ಈ ಬಗ್ಗೆ ಚರ್ಚೆಯನ್ನೂ ಮಾಡಿದ್ದೀರಿ ಎಂದು ನಾನು ಆಶಿಸುತ್ತೇನೆ. ಈ ಕಾರ್ಯಕ್ರಮವನ್ನು ನೀವು ಭಾರತದ ಮೂಲೆ ಮೂಲೆಗೂ ಕೊಂಡೊಯ್ಯುತ್ತೀರಿ ಎಂಬ ನಂಬಿಕೆ ನನಗಿದೆ ಎಂದಿದ್ದಾರೆ.
ನಮ್ಮ ಸುತ್ತಮುತ್ತಲೂ ಪ್ರಾಕೃತಿಕ ಸಂಪನ್ಮೂಲಗಳಿವೆ. ನಾವು ಅವುಗಳನ್ನು ಸಂರಕ್ಷಿಸಬೇಕು, ಅವುಗಳನ್ನು ಮತ್ತೆ ಅವುಗಳ ನೈಜ ರೂಪಕ್ಕೆ ಹಿಂದಿರುಗಿಸಬೇಕು. ಇದರಲ್ಲಿ ನಮ್ಮೆಲ್ಲರ ಹಿತವಿದೆ, ಜಗತ್ತಿನ ಹಿತವಿದೆ ಎಂದಿದ್ದಾರೆ.
ನಾನು ಇಂದೂ ಅಧಿಕಾರದಲ್ಲಿಲ್ಲ ಮತ್ತು ಭವಿಷ್ಯದಲ್ಲೂ ಅಧಿಕಾರದಿಂದಾಗಿ ಗುರುತಿಸಿಕೊಳ್ಳಲು ಬಯಸುವುದಿಲ್ಲ. ನಾನು ಕೇವಲ ಸೇವೆಯಲ್ಲಿರಲು ಬಯಸುತ್ತೇನೆ. ನನಗೆ ಈ ಹುದ್ದೆ, ಪ್ರಧಾನಮಂತ್ರಿ ಸ್ಥಾನ ಯಾವುದೂ ಅಧಿಕಾರಕ್ಕಾಗಿ ಅಲ್ಲ, ಸೇವೆಗಾಗಿ ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


