ನವದೆಹಲಿ: 2021ರ ಅಕ್ಟೋಬರ್ನಲ್ಲಿ ಭಾರತದ ಒಟ್ಟಾರೆ ರಫ್ತುಗಳು (ಸರಕು ಮತ್ತು ಸೇವೆಗಳು ಸೇರಿದಂತೆ) ಯುಎಸ್ಡಿ 56.51 ಬಿಲಿಯನ್ ಎಂದು ಅಂದಾಜಿಸಲಾಗಿದೆ. ಕಳೆದ ವರ್ಷದ ಇದೇ ಅವಧಿಯಲ್ಲಿ ಇದ್ದದ್ದಕ್ಕಿಂತ ಇದು 35.16 ಶೇಕಡಾ ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಅಕ್ಟೋಬರ್ 2019 ಕ್ಕಿಂತ 29.13 ಶೇಕಡಾದಷ್ಟು ಬೆಳವಣಿಗೆ ದಾಖಲಿಸಿದೆ ಎಂದು ಕೇಂದ್ರ ವಾಣಿಜ್ಯೋದ್ಯಮ ಸಚಿವಾಲಯ ತಿಳಿಸಿದೆ.
ಅಕ್ಟೋಬರ್ ತಿಂಗಳ ಒಟ್ಟಾರೆ ಆಮದುಗಳು ಯುಎಸ್ಡಿ 68.09 ಬಿಲಿಯನ್ ಎಂದು ಅಂದಾಜಿಸಲಾಗಿದೆ, ಕಳೆದ ವರ್ಷದ ಇದೇ ಅವಧಿಗಿಂದ ಶೇಕಡಾ 57.32 ರಷ್ಟು ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ ಮತ್ತು ಅಕ್ಟೋಬರ್ 2019 ಕ್ಕಿಂತ 40.82 ಶೇಕಡಾ ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ ಎಂದು ಸಚಿವಾಲಯ ತಿಳಿಸಿದೆ.
ಆದರೆ, ಏಪ್ರಿಲ್-ಅಕ್ಟೋಬರ್ 2021 ರಲ್ಲಿ ಭಾರತದ ಒಟ್ಟಾರೆ ರಫ್ತುಗಳು (ಸರಕು ಮತ್ತು ಸೇವೆಗಳು ಸೇರಿ) ಯುಎಸ್ಡಿ 369.39 ಬಿಲಿಯನ್ ಎಂದು ಅಂದಾಜಿಸಲಾಗಿದೆ, ಕಳೆದ ವರ್ಷದ ಇದೇ ಅವಧಿಗಿಂತ ಶೇಕಡಾ 39.83 ರಷ್ಟು ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸುತ್ತದೆ ಮತ್ತು 2019ರ ಏಪ್ರಿಲ್-ಅಕ್ಟೋಬರ್ನಲ್ಲಿ ಶೇಕಡಾ 19.97 ರಷ್ಟು ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ. ಏಪ್ರಿಲ್-ಅಕ್ಟೋಬರ್ 2021 ರಲ್ಲಿ ಒಟ್ಟಾರೆ ಆಮದುಗಳು ಯುಎಸ್ಡಿ 409.30 ಶತಕೋಟಿ ಎಂದು ಅಂದಾಜಿಸಲಾಗಿದೆ, ಕಳೆದ ವರ್ಷದ ಇದೇ ಅವಧಿಗಿಂತ 63.64 ಶೇಕಡಾ ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ ಮತ್ತು ಏಪ್ರಿಲ್-ಅಕ್ಟೋಬರ್ 2019 ಕ್ಕೆ 13.57 ಶೇಕಡಾ ಧನಾತ್ಮಕ ಬೆಳವಣಿಗೆಯನ್ನು ಪ್ರದರ್ಶಿಸಿದೆ” ಎಂದು ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.