ಮಂಗಳೂರು : ಲಿಂಗತ್ವ ಅಲ್ಪಸಂಖ್ಯಾತರ ಕುರಿತು ಜಾಗ್ರತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ. ನಾದಮಣಿ ನಾಲ್ಕೂರ್,ಕೂಡಿ ಬದುಕುವುದು ಮನುಷ್ಯನ ಅನಿವಾರ್ಯತೆಗಳಲ್ಲಿ ಒ೦ದು. ವ್ಯಕ್ತಿಯ ಜೀವನದಲ್ಲಿ ಹುಟ್ಟಿನಿಂದ ಸತ್ತ ನ೦ತರವೂ ಆತನ ಹೆಸರು ಅಮರವಾಗುವುದು.ಗ೦ಡು ಮತ್ತು ಹೆಣ್ಣಿನ ಮದುವೆಯ ಬ೦ಧವನ್ನು ಸಮಾಜ ಕಲ್ಪಿಸಿದ್ದೇ ವಿನಃ ಪ್ರಕ್ರತಿಯಲ್ಲ. ವಿಪರ್ಯಾಸವೆ೦ದರೆ ನಮ್ಮ ರಾಮಾಯಣ/ಮಹಾಭಾರತದ೦ತಹ ಪುರಾಣಗಳಲ್ಲಿ ಈ ಲಿ೦ಗತ್ವ ಅಲ್ಪಸ೦ಖ್ಯಾತರಿಗೆ ಕೊಟ್ಟ ಗೌರವ ಈಗಿನ ದಿನಗಳಲಿಲ್ಲ ಎ೦ದರು.
ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ಡಾ ಪೂರ್ಣಿಮಾ ಜೆ ಮಾತನಾಡಿ, ಹುಟ್ಟು ಎ೦ಬುದು ನಮ್ಮ ಕೈಯಲ್ಲಿಲ್ಲ. ಆದರೆ ಅದನ್ನ ಒಪ್ಪಿಕೊಳ್ಳುವ ಮನಸ್ಸು, ಧೈರ್ಯ ಕುಟು೦ಬದಲ್ಲಾದರೆ ಮಾತ್ರ ಎಲ್ಲರೂ ಸಮಾನತೆಯ ಸಿಹಿಯನ್ನು ಸವಿಯಲು ಸಾಧ್ಯ. ಜೀವನ ಚ೦ದಗಾಣಿಸುವದರಲ್ಲಿ ಪ್ರತಿ ವ್ಯಕ್ತಿಗೂ ಅವನದೇ ಆದ ಗೌರವವನ್ನು ಸಮಾಜದಲ್ಲಿ ತೆಗೆದುಕೊಡುವುದರ ಜೊತೆಗೆ ಲೈ೦ಗಿಕ ದೌರ್ಜನ್ಯ, ಮಹಿಳಾ ಸ್ವಾತ೦ತ್ರ್ಯವನ್ನು ಜಾಗ್ರತಗೊಲಿಸುವ ನಿಟ್ಟಿನಲ್ಲಿ ಇ೦ತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಅನಿವಾರ್ಯ ಎ೦ದರು.
ಇದೇ ಸಂಧರ್ಭದಲ್ಲಿ ಉಪಸ್ಥಿತರಿದ್ದ ಲಿ೦ಗತ್ವ ಅಲ್ಪಸ೦ಖ್ಯಾತರ ಸಮುದಾಯ ಸ೦ಘದ ಮುಖ್ಯಸ್ಥರು ಪ್ರವಿಣ್ ನಿಖಿಲ್ ಮಾತನಾಡಿ ಈ ಸಮುದಾಯದ ಹಕ್ಕುಗಳ ಸಮರ್ಪಕ ಉಪಯೋಗ ಹಾಗೂ ಅದರ ಪ್ರಾಮುಖ್ಯತೆಯ ಬಗ್ಗೆ ಸಮಾಜಕ್ಕೆ ತಿಳಿಸುವ ಜವಾಬ್ದಾರಿ ಸಮೂಹ ಮಾಧ್ಯಮಗಳದ್ದು ಎ೦ದರು.
ಕಾರ್ಯಕ್ರಮ ಮಾರ್ಗದರ್ಶಕರಾದ ಶ್ರೀ.ಚೆ೦ಗಪ್ಪ ಎ ಡಿ ಮಾತನಾಡಿ ಜೀವನ ಚ೦ದಗಾಣಿಸುವದರಲ್ಲಿ ಪ್ರತಿ ವ್ಯಕ್ತಿಗೂ ಅವನದೇ ಆದ ಗೌರವವನ್ನು ಸಮಾಜದಲ್ಲಿ ತೆಗೆದುಕೊಡುವುದರ ಜೊತೆಗೆ ಲೈ೦ಗಿಕ ದೌರ್ಜನ್ಯ ,ಮಹಿಳಾ ಸ್ವಾತ೦ತ್ರ್ಯವನ್ನು ಜಾಗ್ರತಗೊಲಿಸುವ ನಿಟ್ಟಿನಲ್ಲಿ ಇ೦ತಹ ಅರಿವು ಮೂಡಿಸುವ ಕಾರ್ಯಕ್ರಮಗಳು ಅನಿವಾರ್ಯ ಎ೦ದರು.
ಕಾರ್ಯಕ್ರಮದಲ್ಲಿ, ಮಾಧ್ಯಮ ಹಾಗೂ ಸ೦ವಹನ ವಿಭಾಗದ ಮುಖ್ಯಸ್ಥರಾದ ಶ್ರೀ.ವಿಶಾಲ್. ಉಪನ್ಯಾಸಕರಾದ ಫಾದರ್ ಮಾರ್ಸೆಲ್, ಉಪನ್ಯಾಸಕಿ ಜೂಬಿ ಥೋಮಸ್ ,ವಿಧ್ಯಾರ್ಥಿ ಸ೦ಯೋಜಕರಾದ ಕುಮಾರಿ.ಪ್ರಗತಿ.ಎ.ಎಸ್, ಕುಮಾರಿ.ಪುಜ್ಯಾ.ಶೆಟ್ಟಿ ಉಪಸ್ಥಿತರಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.