
ಮೈಸೂರು: ನಾಲ್ಕನೇ ಆವೃತ್ತಿಯ ‘ಪರಿದೃಶ್ಯ’ ಅಂತರಾಷ್ಟ್ರೀಯ ಕಿರುಚಿತ್ರ ಮತ್ತು ಸಾಕ್ಷ್ಯ ಚಿತ್ರಗಳ ಉತ್ಸವಕ್ಕೆ ಅರಮನೆ ನಗರಿ ಮೈಸೂರು ಸಜ್ಜಾಗಿದೆ. ಫೆಬ್ರವರಿ 20ರಿಂದ 22ರವರೆಗೆ ಮಹಾರಾಜ ಕಾಲೇಜು ಮೈದಾನದಲ್ಲಿ ಉತ್ಸವ ಜರುಗಲಿದೆ.
ಉದ್ಘಾಟನಾ ಸಮಾರಂಭಕ್ಕೆ ಮುಖ್ಯ ಅತಿಥಿಗಳಾಗಿ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್, ನಟ ಮತ್ತು ನಿರ್ದೇಶಕ ಪ್ರಕಾಶ್ ಬೆಳವಾಡಿ, ಬರಹಗಾರ ಜೋಗಿ ಗಿರೀಶ್ ರಾವ್ ಹಟ್ವಾರ್, ಸಾಹಿತಿ ಮತ್ತು ನಿರ್ದೇಶಕ ಡಾ.ವಿ ನಾಗೇಂದ್ರ ಪ್ರಸಾದ್ ಆಗಮಿಸಲಿದ್ದಾರೆ.
ಮೈಸೂರು ಸಿನಿಮಾ ಸೊಸೈಟಿ (ಎಂಸಿಎಸ್) ಈ ಉತ್ಸವವನ್ನು ಆಯೋಜಿಸಿದ್ದು, ಭಾರತ ಸೇರಿದಂತೆ 114 ದೇಶಗಳಿಂದ ಆಯ್ಕೆಯಾದ ಕಿರುಚಿತ್ರಗಳು ಹಾಗೂ ಸಾಕ್ಷ್ಯಚಿತ್ರಗಳು ಇಲ್ಲಿ ಪ್ರದರ್ಶನಗೊಳ್ಳಲಿವೆ.
ಮೊದಲ ಆವೃತ್ತಿಯಲ್ಲಿ 10 ದೇಶಗಳಿಂದ 150 ಚಿತ್ರಗಳು ಪ್ರದರ್ಶನಗೊಂಡಿತ್ತು, ಮೂರನೇ ಆವೃತ್ತಿಯಲ್ಲಿ 109 ದೇಶಗಳಿಂದ 3,100ಕ್ಕೂ ಹೆಚ್ಚು ಚಿತ್ರಗಳು ಭಾಗವಹಿಸಿದ್ದವು. ಈ ಬಾರಿ 114 ದೇಶಗಳಿಂದ 3,000ಕ್ಕೂ ಅಧಿಕ ಚಿತ್ರಗಳ ಭಾಗವಹಿಸುವಿಕೆಗೆ ಪ್ರಸ್ತಾವನೆಗಳು ಬಂದಿವೆ ಎಂದು ಆಯೋಜಕರು ಮಾಹಿತಿ ನೀಡಿದ್ದಾರೆ.
ಉತ್ಸವದ ಭಾಗವಾಗಿ ಕ್ಯುರೇಟೆಡ್ ಭಾರತೀಯ ಮತ್ತು ಅಂತರರಾಷ್ಟ್ರೀಯ ಚಿತ್ರ ಪ್ರದರ್ಶನಗಳು, ಚಿತ್ರೋದ್ಯಮ ತಜ್ಞರಿಂದ ಮಾಸ್ಟರ್ ಕ್ಲಾಸ್ಗಳು, ಫಲಕ ಚರ್ಚೆಗಳು ಮತ್ತು ವಿದ್ಯಾರ್ಥಿಗಳ ಸಂವಾದ, ಕಲೆ ಹಾಗೂ ಸಾಂಸ್ಕೃತಿಕ ಅನುಭವಗಳು, ಆಹಾರ ಮಳಿಗೆಗಳು ಮತ್ತು ಪ್ರದರ್ಶನಗಳು, ಸಂಗೀತ ರಾತ್ರಿಗಳು, ಪ್ರಶಸ್ತಿಪ್ರದಾನ ಸಮಾರಂಭಗಳು ನೆರವೇರಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


