ಅನಂತಪುರ : ಪರಿಸರ ಮತ್ತು ಕ್ಷೇತ್ರಗಳು ಧರ್ಮ ಮತ್ತು ಸಂಸ್ಕೃತಿಯ ಪ್ರಧಾನ ಘಟಕಗಳಲ್ಲಿ ಹಾಸುಹೊಕ್ಕಾಗಿರುವ ವಿಷಯಗಳಾಗಿವೆ. ಅವುಗಳ ಸಂರಕ್ಷಣೆಯ ವಿಷಯದಲ್ಲಿ ಹಿಂದು ಸಮಾಜವು ಯಾವುದೇ ರಾಜಿಗೂ ಸಿದ್ಧವಿಲ್ಲ. ಅನಂತಪುರ ಶ್ರೀ ಅನಂತಪದ್ಮನಾಭ ಕ್ಷೇತ್ರ, ಸುತ್ತು ಮುತ್ತಲಿನ ಇನ್ನಿತರ ಕ್ಷೇತ್ರಗಳು ಮತ್ತು ಪರಿಸರಕ್ಕೆ ಧಕ್ಕೆಯುಂಟು ಮಾಡುತ್ತಿದ್ದ ಅನಧಿಕೃತ ಎಲುಬಿನ ಕಾರ್ಖಾನೆಯ ವಿರುದ್ಧ ಸಕಲ ಆಧಾರಗಳು ಲಭ್ಯವಿದ್ದರೂ ಕ್ರಮ ಕೈಗೊಳ್ಳುವಲ್ಲಿ ಅಧಿಕಾರಿಗಳು ಹಿಂದೆ ಸರಿಯುತ್ತಿದ್ದಾರೆ ಎಂದಾದರೆ ಅದನ್ನು ಕೈಕಟ್ಟಿಕೊಂಡು ನೋಡಿ ನಿಲ್ಲಲು ಹಿಂದು ಸಮಾಜ ಮತ್ತು ಶ್ರೀ ಅನಂತಪದ್ಮನಾಭ ಸ್ವಾಮಿಯ ಭಕ್ತರಿಂದ ಸಾಧ್ಯವಿಲ್ಲವೆಂದು ಹಿಂದು ಐಕ್ಯವೇದಿಕೆಯ ರಾಜ್ಯ ಉಪಾಧ್ಯಕ್ಷ ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರುರವರು ತಿಳಿಸಿದ್ದಾರೆ.
ಅನಂತಪುರ ಪರಿಸರ ಸಂರಕ್ಷಣಾ ಸಮಿತಿಯ ಆಶ್ರಯದಲ್ಲಿ ಭಾನುವಾರ ಸಂಜೆ ನಡೆದ ತುರ್ತು ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿ ಅವರು ಮಾರ್ಗದರ್ಶನ ನೀಡಿದರು.
ಮೀನಿನ ಗೊಬ್ಬರ ತಯಾರಿಗಾಗಿ ಈ ಹಿಂದೆ ರಾಜ್ಯ ಕೈಗಾರಿಕಾ ಇಲಾಖೆಯ ಮಾನದಂಡದ ಪ್ರಕಾರ ಶ್ರೀಕೃಷ್ಣ ಆಗ್ರೋಟೆಕ್ ಕಂಪೆನಿಗೆ ಅನಂತಪುರ-ಕಣ್ಣೂರು ಕೈಗಾರಿಕಾ ಪ್ರಾಂಗಣದಲ್ಲಿ ಪರವಾನಗಿಯನ್ನು ನೀಡಲಾಗಿತ್ತು. ಕ್ಷೇತ್ರ ಮತ್ತು ಜನವಾಸಿ ಪರಿಸರದಲ್ಲಿ ಇಂತಹ ಪ್ಯಾಕ್ಟರಿಗೆ ಪರವಾನಗಿ ನೀಡಿದ್ದೆ ತಪ್ಪು. ಆ ಬಳಿಕ ಕಾನೂನು ಬಾಹಿರವಾಗಿ ಈ ಕಾರ್ಖಾನೆಯನ್ನು ಮಲಬಾರ್ ಆಗ್ರೋಟೆಕ್ ಎಂದು ಪರಿವರ್ತಿಸಿ ಕಸಾಯಿಖಾನೆಗಳ ತ್ಯಾಜ್ಯದಿಂದ ಗೊಬ್ಬರ ತಯಾರಿಸಲು ಪರವಾನಗಿ ನೀಡಲಾಗಿದೆ. ಮೊದಲಿನ ವ್ಯಕ್ತಿಗೆ ಕಾರ್ಖಾನೆ ನಡೆಸಲು ಕಾರ್ಖಾನೆ ನಡೆಸಲು ಸಾಧ್ಯವಿಲ್ಲ ಎಂದಾದರೆ ಅದನ್ನು ಮಾನದಂಡಗಳ ಪ್ರಕಾರ ಮರಳಿ ಸರಕಾರಕ್ಕೇ ಒಪ್ಪಿಸಬೇಕು. ಅದನ್ನು ಬಿಟ್ಟು ಇನ್ನೋರ್ವ ಖಾಸಗಿ ವ್ಯಕ್ತಿಗೆ ಅನಕೃತವಾಗಿ ಈ ಕಂಪೆನಿಯನ್ನು ಹಸ್ತಾಂತರಿಸಲಾಗಿದೆ. ಇದಕ್ಕೆ ಅಧಿಕಾರಿಗಳೂ ಸಾತ್ ನೀಡಿದ್ದಾರೆ. ಇದೀಗ ಈ ಕೇಸು ಹೈಕೋರ್ಟ್ನ ಪರಿಗಣನೆಯಲ್ಲಿದೆ. ಅನಂತಪುರ ಪರಿಸರ ಸಂರಕ್ಷಣಾ ಸಮಿತಿಯು ಹಿಂದು ಐಕ್ಯವೇದಿಕೆಯ ಸಹಕಾರದೊಂದಿಗೆ ಈ ಕೇಸನ್ನು ಮುನ್ನಡೆಸುತ್ತಿರುವುದಾಗಿ ಅವರು ಇದೇ ವೇಳೆ ತಿಳಿಸಿದರು.
ಒಂದೆಡೆಯಲ್ಲಿ ಕಾನೂನಾತ್ಮಕ ಹೋರಾಟ ನಡೆಯುತ್ತಿದ್ದರೂ ಅಕಾರಿಗಳು ಇನ್ನೂ ಎಚ್ಚೆತ್ತಿಲ್ಲ. ಇದಕ್ಕೆ ಪ್ರಧಾನ ಕಾರಣ ಬಹುಸಂಖ್ಯಾತ ಹಿಂದು ಸಮಾಜಕ್ಕೆ ಸಂಬಂಸಿದ ವಿಷಯವಾಗಿರುವುದಾಗಿದೆ. ವಿಷಯ ಗಂಭೀರವಸ್ಥೆಗೆ ಮುಟ್ಟಿ ಮನವಿ ಸಲ್ಲಿಸಿ ಕೊನೆಗೆ ಹೋರಾಟ ನಡೆಸಿದರೂ ಇದುವರೆಗೆ ಜಿಲ್ಲಾಕಾರಿಯವರು ಈ ಪ್ರದೇಶಕ್ಕೆ ಭೇಟಿ ನೀಡುವ ಸೌಜನ್ಯವನ್ನೂ ತೋರಲಿಲ್ಲ. ಇನ್ನೊಂದೆಡೆಯಲ್ಲಿ ಅಕಾರಿಗಳು ಮತ್ತು ಇಲಾಖೆಗಳಲ್ಲಿ ಪ್ರಭಾವ ಬೀರಿ ಹೋರಾಟವನ್ನು ತಣ್ಣಗಾಗಿಸುವ ಯತ್ನಗಳೂ ನಡೆಯುತ್ತಿವೆ. ಆದರೆ ಯಾವುದೇ ಅಡೆತಡೆ ಮುಂದಾದರೂ ಹೋರಾಟದಿಂದ ಹಿಂದೆ ಸರಿಯುವ ಪ್ರಶ್ನೆಯೇ ಇಲ್ಲವೆಂದು ತಂತ್ರಿವರ್ಯರು ಇದೇ ವೇಳೆ ಒತ್ತಿ ಹೇಳಿದರು. ಮುಂದಿನ ಹೋರಾಟದ ಕುರಿತಾಗಿ ಸಮಾಲೋಚನೆ ನಡೆಸಲು ಸಮಸ್ತ ಹಿಂದು ಸಮಾಜದ ಸಭೆ ಕರೆಯಲು ತೀರ್ಮಾನಿಸಲಾಯಿತು.
ಇದೇ ವೇಳೆ ಸ್ಥಳಕ್ಕೆ ಭೇಟಿ ನೀಡಿ ಪರಿಶೋಧನೆ ನಡೆಸಿದ ತಹಶೀಲ್ದಾರರ ನಿರ್ದೇಶ ಪ್ರಕಾರ ಗ್ರಾಮಾಕಾರಿಗಳು ನೀಡಿದ ತಡೆಯಾಜ್ಞೆಯನ್ನು ಕಾರ್ಖಾನೆಯ ಅಕಾರಿಗಳು ೧೫ದಿನಗಳ ಮಟ್ಟಿಗೆ ರದ್ದುಗೊಳಿಸಲು ಹೈಕೋರ್ಟ್ನ ಮೂಲಕ ಒತ್ತಡ ಹೇರಿದ್ದಾರೆ. ಅಲ್ಲದೆ ಕಾಸರಗೋಡಿನ ಜಿಲ್ಲಾ ಕೈಕಾರಿಕಾ ಘಟಕದ ಸಾರ್ವಜನಿಕ ಮಾಹಿತಿಯಾಕಾರಿಯವರು ಮಲಬಾರ್ ಆಗ್ರೋಟೆಕ್ ಎನ್ನುವಂತಹ ಯಾವುದೇ ಕಂಪೆನಿಗೆ ಅನಂತಪುರ ಪರಿಸರದಲ್ಲಿ ಕಾರ್ಯವೆಸಗಲು ಅನುಮತಿ ನೀಡಿಲ್ಲವೆಂದು ಹಿಂದು ಐಕ್ಯವೇದಿಕೆ ನೀಡಿದ ಮಾಹಿತಿ ಹಕ್ಕು ಕಾಯ್ದೆಯ ಪ್ರಕಾರ ಸಲ್ಲಿಸಿದ ಪತ್ರಕ್ಕೆ ಪ್ರತ್ಯುತ್ತರ ದೊರೆತ್ತಿದೆ. ಪುತ್ತಿಗೆ ಪಂಚಾಯತ್ನ ಅಕಾರಿಗಳು ಕೂಡ ಇಂತಹ ಕಂಪೆನಿಗೆ ಪರವಾನಗಿ ನೀಡಿಲ್ಲವೆಂದು ತಿಳಿಸಿದ್ದರಾದರೂ ಕಂಪೆನಿಯ ಅಕಾರಿಗಳು ನ್ಯಾಯಾಲಯಕ್ಕೆ ಸಲ್ಲಿಸಿದ ವರದಿಯಲ್ಲಿ ಪಂಚಾಯತ್ನ ಪಂಚಾಯತ್ರಾಜ್ ಕಾಯ್ದೆಯ ಪ್ರಕಾರ ನೀಡಲಾದ ಅನುಮತಿ ಪತ್ರದ ಪ್ರತಿಯನ್ನು ಇಡಲಾಗಿದೆ. ಮಾತ್ರವಲ್ಲದೆ ಮಾಲಿನ್ಯ ನಿರ್ಮೂಲನಾ ಮಂಡಳಿಯು ಕೂಡ ಸ್ಥಳ ಪರಿಶೋಧನೆ ನಡೆಸದೆಯೇ ಪರವಾನಗಿಯನ್ನು ನೀಡಿದೆ. ವಾಸ್ತವಾಂಶವೇನೆಂದರೆ ಇಲ್ಲೆಲ್ಲಾ ಕಂಪೆನಿಯ ಮೂಲ ಹೆಸರನ್ನು ಬದಲಾಯಿಸಲಾಗಿದೆ. ಅಕಾರಿಗಳು ಕೂಡ ಇದನ್ನು ಪರಿಶೋಸುವ ಗೋಜಿಗೆ ಹೋಗಿಲ್ಲ. ಅಲ್ಲದೆ ಜನವಾಸ ಪ್ರದೇಶದಲ್ಲಿ ಇಂತಹ ಕಂಪೆನಿಗೆ ಅನುಮತಿಯನ್ನು ನೀಡುವಂತಿಲ್ಲ. ಇದೆಲ್ಲವನ್ನೂ ಮರೆ ಮಾಚಿ ವಾಮ ದಾರಿಯಲ್ಲಿ ಈ ಕಂಪೆನಿಯು ಕಾರ್ಯವೆಸಗುತ್ತಾ ಬಂದಿದೆ. ಇದರ ವಿರುದ್ಧ ಮುಂದಿನ ಹೋರಾಟವನ್ನು ಕೈಗೆತ್ತಿಕೊಳ್ಳಲು ಸಭೆಯಲ್ಲಿ ತೀರ್ಮಾನಿಸಲಾಯಿತು.
ಪರಿಸರ ಸಂರಕ್ಷಣಾ ಸಮಿತಿಯ ಅಧ್ಯಕ್ಷ ನಾರಾಯಣ ಅನಂತಪುರ ಅಧ್ಯಕ್ಷತೆ ವಹಿಸಿದ್ದರು. ಶ್ರೀ ಕ್ಷೇತ್ರದ ಆಡಳಿತ ಮೊಕ್ತೇಸರ ವೆಂಕಟೇಶ್ವರ ಹೆಬ್ಬಾರ್ ಮಾತನಾಡಿದರು. ಸೇವಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಮಚಂದ್ರ ಮಾಸ್ತರ್ ಪ್ರಾಸ್ತಾವಿಕ ನುಡಿದು ಸ್ವಾಗತಿಸಿದರು. ಪರಿಸರ ಸಂರಕ್ಷಣಾ ಸಮಿತಿಯ ಪ್ರಧಾನ ಕಾರ್ಯದರ್ಶಿ ರಾಜೇಶ್ ಸೂರಂಬೈಲು, ಕಾರ್ಯದರ್ಶಿ ಕರುಣಾಕರ ಅನಂತಪುರ, ಜನಾರ್ಧನ ಕಣ್ಣೂರು, ಕೇಶವ ನಾಯಕ್ ನಾಯ್ಕಾಪು, ಹಿಂದು ಐಕ್ಯ ವೇದಿಕೆಯ ತಾಲೂಕು ಕಾರ್ಯದರ್ಶಿ ದಿನೇಶ್ ಆಚಾರ್ಯ ಆರಿಕ್ಕಾಡಿ, ಯುವಮೋರ್ಚಾದ ನೇತಾರರಾದ ರೋಹಿತ್ ಸೀತಾಂಗೋಳಿ, ಸುನಿಲ್ ಪೆರ್ಣೆ, ಮಾತೆಯರು, ಪರಿಸರ ನಿವಾಸಿಗಳು ಉಪಸ್ಥಿತರಿದ್ದರು. ಐಕ್ಯ ವೇದಿಕೆಯ ತಾಲೂಕು ಸಂಘಟನಾ ಕಾರ್ಯದರ್ಶಿ ಸಂದೀಪ್ ಗಟ್ಟಿ ದೇವೀನಗರ ವಂದಿಸಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.