ನವದೆಹಲಿ: ಕೋವಿಡ್ ಲಸಿಕೆಯ ಸರ್ಟಿಫಿಕೇಟ್ಗಳಲ್ಲಿ ಪ್ರಧಾನಿಯವರ ಮಾತುಗಳ ಜೊತೆಗೆ ಅವರ ಫೋಟೋ ಹಾಕುವ ಮೂಲಕ ಲಸಿಕೆ ಪಡೆದ ನಂತರವೂ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ಕೋವಿನ್ ಮೂಲಕ ನೀಡಲಾಗುತ್ತಿರುವ ಕೋವಿಡ್ -19 ಲಸಿಕೆ ಸರ್ಟಿಫಿಕೇಟ್ನ ಸ್ವರೂಪಗಳನ್ನು ಪ್ರಮಾಣೀಕರಿಸಲಾಗಿದೆ ಮತ್ತು ಇದು ಡಬ್ಲ್ಯುಎಚ್ಒ ಮಾರ್ಗದರ್ಶನಕ್ಕೆ ಅನುಗುಣವಾಗಿ ಇದೆ ಎಂದು ಕೇಂದ್ರ ಆರೋಗ್ಯ ಖಾತೆ ರಾಜ್ಯ ಸಚಿವ ಭಾರತಿ ಪ್ರವೀಣ್ ಪವಾರ್ ಲಿಖಿತ ಉತ್ತರದಲ್ಲಿ ರಾಜ್ಯಸಭೆಗೆ ತಿಳಿಸಿದ್ದಾರೆ.
ಕೋವಿಡ್ ಲಸಿಕೆ ಪ್ರಮಾಣಪತ್ರದಲ್ಲಿ ಪ್ರಧಾನಿಯವರ ಫೋಟೋ ಮುದ್ರಿಸುವುದು ಅಗತ್ಯ ಮತ್ತು ಕಡ್ಡಾಯವೇ ಎಂಬುದಕ್ಕೆ ಸಂಬಂಧಿಸಿದ ಪ್ರಶ್ನೆಗೆ ಅವರು ಉತ್ತರಿಸಿದರು.
“ಕೋವಿಡ್-ಸೂಕ್ತವಾದ ನಡವಳಿಕೆಗಳನ್ನು ಅನುಸರಿಸುವುದು ಸಾಂಕ್ರಾಮಿಕದ ಹರಡುವಿಕೆಯನ್ನು ತಡೆಗಟ್ಟುವ ಅತ್ಯಂತ ನಿರ್ಣಾಯಕ ಕ್ರಮಗಳಲ್ಲಿ ಒಂದಾಗಿದೆ. ಲಸಿಕೆಯ ಸರ್ಟಿಫಿಕೇಟ್ನಲ್ಲಿ ಪ್ರಧಾನ ಮಂತ್ರಿಯ ಸಂದೇಶದೊಂದಿಗೆ ಫೋಟೋ ಮುದ್ರಿಸಿರುವುದು ಸಾರ್ವಜನಿಕ ಹಿತಾಸಕ್ತಿಗಾಗಿ, ಲಸಿಕೆಯ ನಂತರವೂ ಕೋವಿಡ್ -19 ಸೂಕ್ತ ನಡವಳಿಕೆಯನ್ನು ಅನುಸರಿಸುವ ಪ್ರಾಮುಖ್ಯತೆಯ ಬಗ್ಗೆ ಅರಿವು ಮೂಡಿಸುವ ಸಂದೇಶವನ್ನು ಈ ಸರ್ಟಿಫಿಕೇಟ್ ಬಲಪಡಿಸುತ್ತವೆ “ಎಂದು ಪವಾರ್ ಹೇಳಿದ್ದಾರೆ.
ಇಂತಹ ನಿರ್ಣಾಯಕ ಸಂದೇಶಗಳನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಜನರಿಗೆ ತಲುಪುವಂತೆ ನೋಡಿಕೊಳ್ಳುವುದು ಸರ್ಕಾರದ ನೈತಿಕ ಹೊಣೆಗಾರಿಕೆಯಾಗಿದೆ ಎಂದು ಅವರು ಹೇಳಿದರು.
“ವ್ಯಾಕ್ಸಿನೇಷನ್ ಪ್ರಮಾಣಪತ್ರದ ಸ್ವರೂಪವು ವ್ಯಾಕ್ಸಿನೇಷನ್ ಪ್ರಮಾಣಪತ್ರಗಳಿಗಾಗಿನ ಡಬ್ಲ್ಯುಎಚ್ಒ ನಿಯಮಗಳಿಗೆ ಅನುಸಾರವಾಗಿದೆ, ಲಸಿಕೆಯ ನಂತರವೂ ಕೋವಿಡ್-ಸೂಕ್ತ ನಡವಳಿಕೆಯನ್ನು ಅನುಸರಿಸುವ ಮಹತ್ವದ ಬಗ್ಗೆ ಸಂದೇಶ ಮತ್ತು ಪ್ರಸ್ತುತಿ ಸೇರಿದಂತೆ ಎಲ್ಲಾ ಅಂಶಗಳನ್ನು ಒಳಗೊಂಡಿದೆ. ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ಕೋವಿಡ್ -19 ಲಸಿಕೆ ಮತ್ತು ಲಸಿಕೆ ಪ್ರಮಾಣಪತ್ರಗಳಿಗಾಗಿ ಕೋವಿನ್ ಅಪ್ಲಿಕೇಶನ್ ಅನ್ನು ಬಳಸುತ್ತಿವೆ”ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.