
ನವದೆಹಲಿ: RCS – UDAN ಯೋಜನೆಯಡಿ ಕೇಂದ್ರ ಸರ್ಕಾರ ಮಣಿಪುರದ ಇಂಫಾಲ್ ಮತ್ತು ಮೇಘಾಲಯದ ಶಿಲ್ಲಾಂಗ್ಗಳಲ್ಲಿ ಮೊದಲ ನೇರ ವಿಮಾನ ಕಾರ್ಯಾಚರಣೆಯನ್ನು ಆರಂಭಿಸಿದೆ.
ಈ ಸಂಬಂಧ ನಾಗರಿಕ ವಿಮಾನಯಾನ ಸಚಿವಾಲಯ ತಿಳಿಸಿದ್ದು, ಈಶಾನ್ಯ ಭಾರತದ ಆದ್ಯತಾ ಪ್ರದೇಶಗಳಲ್ಲಿ ಬಲವಾಗಿ ವೈಮಾನಿಕ ಸಂಪರ್ಕ ಸಾಧಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಯೋಜನೆಗಳನ್ನು ಕಾರ್ಯಗತಗೊಳಿಸುತ್ತಿದೆ ಎಂದು ಹೇಳಿದೆ. ಮಣಿಪುರ – ಮೇಘಾಲಯ ನಡುವಿನ ವೈಮಾನಿಕ ಸಂಪರ್ಕ ಆ ಭಾಗದ ಜನರ ಬಹುಮುಖ್ಯ ಬೇಡಿಕೆಗಳಲ್ಲಿ ಒಂದು ಎಂದು ಸಚಿವಾಲಯ ಹೇಳಿದೆ.
ಇಂಪಾಲದಿಂದ ಶಿಲ್ಲಾಂಗ್ ತಲುಪಲು ಯಾವುದೇ ನೇರ ಸಾರಿಗೆ ವ್ಯವಸ್ಥೆ ಇಲ್ಲ. ಜನರು ರಸ್ತೆಯ ಮೂಲಕ ಪರಸ್ಪರ ಸಂಪರ್ಕಕ್ಕೆ 12 ಗಂಟೆಗಳ ಪ್ರಯಾಣ ನಡೆಸಬೇಕಾಗಿದೆ. ಈ ನಿಟ್ಟಿನಲ್ಲಿ ಈ ವಿಮಾನ ಯಾನ ಆರಂಭ ಜನರಿಗೆ ಅನುಕೂಲಕರವಾಗಲಿದೆ. ವಿಮಾನದ ಮೂಲಕ ಇಂಪಾಲ – ಶಿಲ್ಲಾಂಗ್ ಗೆ 60 ನಿಮಿಷ ಮತ್ತು ಶಿಲ್ಲಾಂಗ್ – ಇಂಪಾಲಕ್ಕೆ 75 ನಿಮಿಷಗಳಲ್ಲಿ ಪ್ರಯಾಣ ಸಾಧ್ಯವಾಗಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.


